

ಕೆ.ಆರ್.ಪೇಟೆ ತಾಲ್ಲೂಕು, ಮೈಸೂರು ನಿವಾಸಿಗಳ ಹಿತದೃಷ್ಟಿಯಿಂದ ಕೆ.ಆರ್. ಪೇಟೆ ತಾಲ್ಲೂಕು, ಮೈಸೂರು ನಿವಾಸಿಗಳ ಗೃಹ ನಿರ್ಮಾಣ ಸಹಕಾರ ಸಂಘವನ್ನು ನೊಂದಾಯಿಸಲಾಗಿದೆ ಎಂದು ಭೂ ವರಹಸ್ವಾಮಿ ಗೃಹ ನಿರ್ಮಾಣ ಸಹಕಾರ ಸಂಘದ ಸಂಸ್ಥಾಪಕ ಡಿ. ಆರ್ ವೆಂಕಟೇಶ್ ತಿಳಿಸಿದರು.
ಕೆ.ಆರ್.ಪೇಟೆ ತಾಲ್ಲೂಕು, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘದ ಮಾಹಿತಿ ಕರಪತ್ರ ಹಾಗೂ 2025ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದಅವರು ನಮ್ಮ ಸಂಘದಲ್ಲಿ ಹಾಲಿ 283 ಸದಸ್ಯರು ಸಂಘದ ಕಾರ್ಯ ವ್ಯಾಪ್ತಿಯು ಮೈಸೂರು ತಾಲ್ಲೂಕಿಗೆ ಮಾತ್ರ ಸೀಮಿತವಾಗಿದ್ದುದ್ದರಿಂದ ಇತರರು ಸದಸ್ಯರಾಗಲು ಸಾಧ್ಯವಾಗುತ್ತಿರಲಿಲ್ಲ ಹಲವು ಸ್ನೇಹಿತರು ಮತ್ತು ಹಿತೈಷಿಗಳು ಸಂಘದ ಹೆಸರನ್ನು ಬದಲಾವಣೆ ಮಾಡಿ ಕಾರ್ಯ ವ್ಯಾಪ್ತಿಯನ್ನು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ವಿಸ್ತರಿಸುವಂತೆ ಸಲಹೆ ನೀಡಿದ್ದರಿಂದ ದಿನಾಂಕ 22-09-2024 ರಂದು ನಡೆದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ವಿಷಯವನ್ನು ಮಂಡಿಸಿ ವಿಸ್ತ್ರತವಾಗಿ ಚರ್ಚಿಸಲಾಯಿತು.
ಅಂತಿಮವಾಗಿ ಸಭೆಯಲ್ಲಿ ಸಂಘದ ಹೆಸರನ್ನು ಭೂ ವರಹಸ್ವಾಮಿ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ, ಮೈಸೂರು ಎಂದು ಬದಲಾವಣೆ ಮಾಡಿ ಕಾರ್ಯ ವ್ಯಾಪ್ತಿಯನ್ನು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ವಿಸ್ತರಿಸುವಂತೆ ಸರ್ವಾನುಮತದಿಂದ ತೀರ್ಮಾನಿಸಲಾಯಿತು.ಅದಕ್ಕಾನುಸಾರವಾಗಿ ಸಹಕಾರ ಸಂಘಗಳ ಜಂಟಿ ನಿಬಂಧಕರು, ಮೈಸೂರು ಪ್ರಾಂತ, ಮೈಸೂರು ರವರಿಗೆ ತಿದ್ದುಪಡಿ ಪ್ರಸ್ತಾವನೆ ಸಲ್ಲಿಸಿ ಸಂಘದ ಹೆಸರನ್ನು ಭೂ ವರಹಸ್ವಾಮಿ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ, ಮೈಸೂರು ಎಂದು ಬದಲಾವಣೆ ಮಾಡಿ ಕಾರ್ಯ ವ್ಯಾಪ್ತಿಯನ್ನು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ವಿಸ್ತರಿಸಿ ಉಪನಿಯಮ (ಬೈಲಾ) ತಿದ್ದುಪಡಿ ಮಾಡಲಾಗಿದೆ.
ಸರ್ವ ಸದಸ್ಯರ ಸಭೆಯ ತೀರ್ಮಾನದಂತೆ ಆಡಳಿತ ಮಂಡಳಿಯು ಸಂಘದ ಕಾರ್ಯ ಚಟುವಟಿಕೆಗಳನ್ನು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ವಿಸ್ತರಿಸಿ ಸದಸ್ಯರನ್ನು ನೊಂದಾಯಿಸಲು ತೀರ್ಮಾನಿಸಿರುತ್ತದೆ ಹಾಗೂ ಮೈಸೂರಿನಲ್ಲಿ ಸುಸಜ್ಜಿತ ಬಡಾವಣೆ ನಿರ್ಮಿಸಲು ಉದ್ದೇಶಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಬರುವ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ನಿವೇಶನಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಸಂಘದಿಂದ ಅರ್ಜಿ ಪಡೆದು ನೊಂದಾಯಿಸಿಕೊಳ್ಳಬಹುದು. ಅರ್ಜಿಯೊಂದಿಗೆ ನೊಂದಣಿ ಶುಲ್ಕ ರೂ. 2500/- ಹಾಗೂ ನಿವೇಶನದ ಪ್ರಾರಂಭಿಕ ಠೇವಣಿ ರೂ. 25000/- ಒಟ್ಟು 27500/-ರೂ.ಗಳನ್ನು ಭೂ ವರಹಸ್ವಾಮಿ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ, ಮೈಸೂರು ಎಂಬ ಹೆಸರಿಗೆ ಸಂದಾಯವಾಗುವಂತೆ ಡಿ.ಡಿ. ಪಡೆದು ಅದರೊಂದಿಗೆ ಆಧಾರ್ ಕಾರ್ಡ್ ಪ್ರತಿ, 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ನಿವೇಶನ ರಹಿತ ದೃಢೀಕರಣ ಪತ್ರವನ್ನು ಸಲ್ಲಿಸುವುದು.
ಈಗಾಗಲೇ ಉದ್ದೇಶಿತ ಬಡಾವಣೆಗೆ ಹುಣಸೂರು ರಸ್ತೆಯಲ್ಲಿ ಬರುವ ಹೊರ ವರ್ತುಲ ರಸ್ತೆಯ (Outer Ring Road) ಆಸುಪಾಸಿನಲ್ಲಿ ಬರುವ ರಟ್ಟನಹಳ್ಳಿ, ಚಿಕ್ಕಾಡನಹಳ್ಳಿ, ಸೀಗೇಹಳ್ಳಿಗಳಲ್ಲಿ ಜಮೀನನ್ನು ಗುರುತಿಸಲಾಗಿದ್ದು ಅಭಿವೃದ್ಧಿದಾರರೊಂದಿಗೆ ವ್ಯವಹರಿಸಲಾಗುತ್ತಿದೆ. ಬಡಾವಣೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳಿಗೆ ಅನುಗುಣವಾಗಿ ನಿರ್ಮಿಸಲಾಗುತ್ತದೆ.ಬಡಾವಣೆಯಲ್ಲಿ 30 x 40, 30 x 50 ಹಾಗೂ 40 x 60 ಅಡಿ ಅಳತೆಯ ನಿವೇಶನಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಬಡಾವಣೆಯ ಮೂಲ ಸೌಕರ್ಯಗಳಾದ ರಸ್ತೆ ಡಾಂಬರೀಕರಣ, ಒಳಚರಂಡಿ, ವಿದ್ಯುತ್, ನೀರು ಹಾಗೂ ಇತರೆ ಎಲ್ಲಾ ನಾಗರೀಕ ಸೌಲಭ್ಯಗಳನ್ನು ಹೊಂದಿರುತ್ತದೆ.ಮಧ್ಯಮ ವರ್ಗದ ಜನರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಚಾಲ್ತಿಯಲ್ಲಿರುವ ಭೂ ಮೌಲ್ಯ ಮತ್ತು ಅನುಮೋದನೆ ಪ್ರಕ್ರಿಯೆಯನ್ನು ಪರಿಗಣಿಸಿ ನಿವೇಶನದ ದರವನ್ನು ನಿಗಧಿಪಡಿಸಲಾಗುವುದು. ನಿವೇಶನಾಕಾಂಕ್ಷಿಗಳು ಭರಿಸಲು ಅನುಕೂಲವಾಗುಂತೆ ನಿವೇಶನದ ಹಣವನ್ನು ಕಂತುಗಳಲ್ಲಿ ಸಂಗ್ರಹಿಸಲು ಉದ್ದೇಶಿಸಿದೆ. ಆದ್ದುದರಿಂದ ನಿವೇಶನಾಕಾಂಕ್ಷಿಗಳು ಈ ಸದಾವಕಾಶವನ್ನು ಸದುಪಯೋಗ ಪಡಿಸಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೂ ವರಾಹಸ್ವಾಮಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಚಲುವೆಗೌಡ,ಗೌರವ ಸಲಹೆಗಾರ ಹೆಚ್. ಎಸ್ ಬಲರಾಮ್,ನಿರ್ದೇಶಕ ಲೋಕೇಶ್,ಸರ್ವೇಶ, ಮಹದೇವೆಗೌಡ,ಸೇರಿದಂತೆ ಉಪಸ್ಥಿತರಿದ್ದರು.