

ಇಂದು ನಿಪ್ಪಾಣಿ ನಗರದ ಸಮಾಧಿ ಮಠದಲ್ಲಿ ನಡೆದ ಪವಿತ್ರ ಶ್ರಾವಣ ಮಾಸದ ಸಮಾಪ್ತಿ ದಾಸೋಹ,ಶ್ರೀ ವಿರುಪಾಕ್ಷಲಿಂಗ ಸಮಾಧಿಮಠ ಯಾತ್ರಾ ಮಹೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆಗೆ ಮಹೋತ್ಸವದಲ್ಲಿ ಕಣೇರಿ ಸಿದ್ದಗಿರಿಮಠದ ಪ.ಪೂ.ಜಗದ್ಗುರು ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಜಿಗಳು,ನಿಪ್ಪಾಣಿ ಪ.ಪೂ.ಶ್ರೀ ಪ್ರಾಣಲಿಂಗ ಮಹಾಸ್ವಾಮಿಜಿಗಳ ದಿವ್ಯ ಸಾನಿಧ್ಯದಲ್ಲಿ ಶಶಿಕಲಾ ಜೊಲ್ಲೆ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆಯಲಾಯಿತು.

ಇದೇ ವೇಳೆ ಕೈ.ಪ.ಪೂಜ್ಯ ಶ್ರೀ ಸಂಗಮದೇವ ಸ್ವಾಮೀಜಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ರವರು, ಸ್ಥಳೀಯ ಮುಖಂಡರು, ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು
