

ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕು
ಕರಾಟೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಕಾಗವಾಡ ತಾಲೂಕಿನ ಜುಗುಳದಲ್ಲಿ ದಿನಾಂಕ 15/9/2023 ರಂದು ನಡೆದ ಜಿಲ್ಲಾ ಮಟ್ಟದ 2023-24ನೆಯ ಸಾಲಿನ ಕರಾಟೆ ಸ್ಪರ್ಧೆಯಲ್ಲಿ ಸಾಯಿನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ಜತೀನ್ ಮಾನಕರ (14), ಪೂರ್ವಿ ಖಾರೆ (14) ಹಾಗೂ ಸ್ವರಾಜ್ ಭೋಸ್ಲೆ (14) ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಇದರಲ್ಲಿ ಸ್ವರಾಜ್ ಭೋಸ್ಲೆ 14 ವರ್ಷ ವಯೋಮಿತಿ ಒಳಗಿನ ಕರಾಟೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಕಾರ್ಯಧ್ಯಕ್ಷರಾದ ಶ್ರೀ ರಾಜೇಶ ವಾಲಿ, ಪ್ರಾಂಶುಪಾಲರಾದ ಶ್ರೀ ಸಾಗರ ಖೋoಡ್ರೆ, ಸಂಯೋಜಕರಾದ ಶ್ರೀ ರವಿ ಪಾಲಭಾವಿ ಹಾಗೂ ಶಿಕ್ಷಕ ವೃಂದದವರು ತುಂಬ ಹರ್ಷವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ಶ್ರೀ ಶಮಂತ ಪಾಟೀಲ್ ಹಾಗೂ ಅನಿಲ ಶಿಂಧೆ ಮಾರ್ಗದರ್ಶನ ಮಾಡಿದರು.
ಮಹೇಶ್ ಮ್ ಶರ್ಮಾ
ಉತ್ತರ ಕರ್ನಾಟಕದ ವಿಶೇಷ ವರದಿಗಾರು