ಅಡಿಕೆ ಕಳ್ಳತನ ಪ್ರಕರಣದಲ್ಲಿ ಓರ್ವ ಆರೋಪಿತನ ಬಂಧನ, ಸ್ವತ್ತು ವಶ,,

ಚನ್ನಗಿರಿ ಉಪವಿಭಾಗ ಸಂತೇಬೆನ್ನೂರು ಠಾಣಾ ಸರಹದ್ದಿನ ಹೊಸುರು ಗ್ರಾಮದಲ್ಲಿ ಗೋಡಾಮಿನಲ್ಲಿ ಇಟ್ಟಿದ್ದ ಸುಮಾರು 15 ಕ್ಷಿಂಟಾಲ್ ಅಡಿಕೆ ಕಳ್ಳತನ ವಾದ ಬಗ್ಗೆ ಸಂತೇಬೆನ್ನೂರು ಠಾಣಾ ಗುನ್ನೆ ನಂ-33/2023 ಕಲಂ-457,380 ಐಪಿಸಿ ರಿತ್ಯಾ ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ಪತ್ತೆಗಾಗಿ ಮಾನ್ಯ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಪೊಲೀಸ್ ಉಪಾಧೀಕ್ಷರು ಚನ್ನಗಿರಿರವರಾದ ಡಾ. ಸಂತೋಷ ಕೆ.ಎಂ ರವರ ಮಾರ್ಗದರ್ಶನದಲ್ಲಿ ಸಿಪಿಐ ಸಂತೇಬೆನ್ನೂರು ವೃತ್ತ ಶ್ರೀ ಲಿಂಗನಗೌಡ ನೆಗಳೂರು ರವರ ನೇತೃತ್ವದಲ್ಲಿ ಸಂತೇಬೆನ್ನೂರು ಪಿಎಸ್.ಐ ಶ್ರೀಮತಿ ರೂಪಾ ತೆಂಬದ್ ಸಿಬ್ಬಂದಿಯವರಾದ- ಶ್ರೀ ಸತೀಶ, ಶ್ರೀ ರುದ್ರೇಶ ಎಂ., ಶ್ರೀ ಶಂಕರಗೌಡ, ಶ್ರೀ ಆಂಜನೇಯ, ಶ್ರೀ ರಾಘವೇಂದ್ರ, ಶ್ರೀ ಪರಶುರಾಮ, ಶ್ರೀ ಪ್ರವೀಣಗೌಡ, ಶ್ರೀ ರವಿಕುಮಾರ ರವರನ್ನು ಒಳಗೊಂಡ ಒಂದು ತಂಡವನ್ನು ರಚನೆ ಮಾಡಿದ್ದು ಈ ತಂಡವು ದಿನಾಂಕ:15-09-2023 ರಂದು ಮೇಲ್ಕಂಡ ಪ್ರಕರಣದ ಆರೋಪಿತನಾದ – 01)ಕಾರ್ತಿಕ್ ಎಸ್.ಹೆಚ್, 26 ವರ್ಷ, ಡ್ರೈವರ್ ವೃತ್ತಿ, ವಾಸ ಶೆಟ್ಟಿಹಳ್ಳಿ ಗ್ರಾಮ, ಶೀವಮೊಗ್ಗ ತಾ|| ಜಿಲ್ಲೆ|| ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಸುಮಾರು 2 ಲಕ್ಷ ರೂ /- ರೂ ಬೆಳೆಬಾಳುವ 05 ಕ್ವಿಂಟಾಲ್ ಅಡಿಕೆ ಮತ್ತು ಅಡಿಕೆ ಸಾಗಾಣಿಕೆ ಮಾಡಲು ಬಳಸಿದ ಸುಮಾರು 02 ಲಕ್ಷ ರೂ ಬೆಲೆಬಾಳುವು ಕೆಎ-51 ಎ-8066 ಮಹೀಂದ್ರಾ ಮ್ಯಾಕ್ಷಿಮೋ ಸೇರಿ ಒಟ್ಟು 4 ಲಕ್ಷ ರೂ ಬೆಲೆವಾಳುವ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ, ಇನ್ನೊಬ್ಬ ಆರೋಪಿತ ತಲೆಮರೆಸಿಕಂಡಿದ್ದು ಆತನ ಪತ್ತೆಕಾರ್ಯ ಮುಂದುವರೆದಿರುತ್ತದೆ.

ಅಡಕೆ ಕಳ್ಳತನ ಪ್ರಕರಣದಲ್ಲಿನ ಆರೋಪಿತನನ್ನು ದಸ್ತಗಿರಿ ಮಾಡಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಸಂತೇಬೆನ್ನೂರು ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್ ಬಿ ಬಸರಗಿ ರವರು ಪ್ರಶಂಸಿಸಿರುತ್ತಾರೆ.

  • Related Posts

    ದಾವಣಗೆರೆಯ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್

    ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ನಗರಕ್ಕೆ ವಿವಿಧ ಕಾರ್ಯಕ್ರಮಗಳ ಬೇಟಿ ನೀಡಿದ ಸಂದರ್ಭದಲ್ಲಿ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮುಚ್ಛಯದ ಆವರಣದಲ್ಲಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದರು. ನಂತರ…

    “ವಿಷ ಕೊಡಿ ಇಲ್ಲವೇ ಯೂರಿಯಾ ಕೊಡಿ” ದಾವಣಗೆರೆಯಲ್ಲಿ ಬಿಜೆಪಿ ಇಂದ ಪ್ರತಿಭಟನೆ

    ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು. ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!