ಕುರಿ ಮಾರಾಟಕ್ಕೆ ಹೋದವ ಶವವಾಗಿ ಪತ್ತೆ, ರಹಸ್ಯ ಬೇಧಿಸಲು ಹೊರಟ ಖಾಕಿ ಪಡೆ,,,

ದಾವಣಗೆರೆ (ಹಿರೇಕೋಗಲೂರು) : ಕುರಿ ಸಾಕುತ್ತಾಘಿ, ಅವುಗಳ ಜತೆ ಜೀವನ ಮಾಡುತ್ತಾಘಿ, ಮೇವಿಗಾಗಿ ಊರಿನಿಂದ ಊರಿಗೆ ಹೋಗುವ ಕುರಿಗಾಯಿಯೊಬ್ಬ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದುಘಿ, ಕುಟುಂಬ ಕಣ್ಣೀರಿಡುತ್ತಿದೆ.
ಚನ್ನಗಿರಿ ತಾಲೂಕಿನ ನಲ್ಕುದುರೆ ಗೋಮಾಳದಲ್ಲಿ ಈ ಘಟನೆ ನಡೆದಿದ್ದುಘಿ, ತ್ಯಾವಣಿಗೆ ಗ್ರಾಮದ ಪೂಜಾರ್ ಸಿದ್ದಪ್ಪ (50) ಮೃತರು. ಕೊಲೆಗಾರನ ಹುಡುಕಾಟಕ್ಕೆ ತಾರಾ ಎಂಬ ಶ್ವಾನ ಎಂಟ್ರಿಕೊಟ್ಟಿದೆ. ಕ್ರೈಂ ಡಾಗ್ ತುಂಗಾಳ ನಿಧನದ ನಂತರ ತಾರಾ ದಾವಣಗೆರೆ ಪೊಲೀಸ್ ಇಲಾಖೆಗೆ ಬಂದಿದ್ದುಘಿ, ಕೊಲೆಗಾರ ಓಡಾಡಿದ ಜಾಗದ ಸುತ್ತಾ ತನ್ನ ಹ್ಯಾಂಡ್ಲರ್ ಜತೆ ಓಡಾಡಿದೆ.


ಬೆಂಕಿ ಹಚ್ಚಿದ ವ್ಯಕ್ತಿಯನ್ನು ತಾರ ವಾಸನೆಯಿಂದ ಶೋಧನೆ ನಡೆಸಿದ್ದು, ವಾಸನೆ ಹಿಡಿದು ಹೊರಟ ತಾರಾ ಮೀಯಾಪುರ ರಸ್ತೆ ಹಾಗೂ ರಾಜಪ್ಪ ಎಂಬುವರ ಮನೆಯ ಅಕ್ಕ ಪಕ್ಕದ ಪ್ರದೇಶವನ್ನು ಎರಡ್ಮೂರು ಭಾರಿ ವಾಸನೆ ಗ್ರಹಿಸಿ ಸುತ್ತಾಡಿ ನಿಂತಿದೆ. ಮತ ತ್ಯಾವಣಿಗೆ ಸಿದ್ದಪ್ಪ ಹಾಗೂ ನಲ್ಕುದುರೆ ಗೋಮಾಳ ಗ್ರಾಮದ ರಾಜಪ್ಪ ಇವರಿಬ್ಬರೂ ತುಂಬಾ ಆತ್ಮೀಯ ಸ್ನೇಹಿತರಾಗಿದ್ದು, ಕುರಿ ಮಾರಾಟ ಮಾಡಲು ಬಂದ ವೇಳೆ ಬುಧವಾರ ರಾತ್ರಿ ಇವರಿಬ್ಬರ ನಡುವೆ ಜಗಳ ನಡೆದಿರಬಹುದು, ರಾಜಪ್ಪನ ಮನೆಯ ಹಿಂಭಾಗದಲ್ಲಿ ಸುಟ್ಟ ಸ್ಥಿತಿಯಲ್ಲಿ ಅರೆ ಪ್ರಜ್ಞಾಸ್ಥಿತಿಯಲ್ಲಿ ಸಿದ್ದಪ್ಪ ಶವ ಪತ್ತೆಯಾಗಿದೆ. ಪತಿಯ ಸಾವು ಸಂಶಯಾಸ್ಪದವಾಗಿದ್ದು ತನಿಖೆಯಿಂದ ಪತ್ತೆಹೆಚ್ಚಿ ನ್ಯಾಯ ದೊರಕಿಸಿಕೊಡುವಂತೆ ಪತ್ನಿ ಸಂತೆಬೆನ್ನೂರಿಗೆ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಡಾಗ್ ಸ್ಕಾಡ್ ಸೇರಿದಂತೆ ಬೆರಳಚ್ಚು ತಜ್ಞರು ಹಾಗೂ ವಿಧಿವಿಧಾನ ಪ್ರಯೋಗಾಲಯ ಸ್ಥಳಕ್ಕಾಗಮಿಸಿ ಶೋಧನಾ ಕಾರ್ಯ ನಡೆಸಿರುತ್ತಾರೆ ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಕುರಿಗಳನ್ನು ಕಾಯಲು ಹೋಗಿದ್ದ ಸಿದ್ದಪ್ಪ ಸಂಜೆ ಮನೆಗೆ ಬಂದಿದ್ದರು ಸಂಜೆ ವೇಳೆ ಕುರಿ ಮರಿಯೊಂದನ್ನು ಮಾರಾಟ ಮಾಡಿಕೊಂಡು ಬರುವುದಾಗಿ ನಲ್ಕುದುರೆ ಗೋಮಾಳಕ್ಕೆ ಹೋಗಿದ್ದರು. ಆದರೆ ರಾತ್ರಿ ಮನೆಗೆ ಬಂದಿರಲಿಲ್ಲಾ. ಬೆಳಗ್ಗೆ ನಲ್ಕುದುರೆ ಗೋಮಾಳದ ಮೀಯಾಪುರ ರಸ್ತೆಯ ಪಕ್ಕದಲ್ಲಿ ಮೈಗೆ ,ಕೈಗೆ ಹಾಗೂ ಮುಖಕ್ಕೆ ಬೆಂಕಿಯಿಂದ ಸುಟ್ಟ ಸ್ಥಿತಿಯಲ್ಲಿ ಹಾಗೂ ಅರೇ ಪ್ರಜ್ಞಾವಸ್ಥೆಯಲ್ಲಿ ಸಿದ್ದಪ್ಪ ಪತ್ತೆಯಾಗಿದ್ದಾರೆ. ಬಳಿಕ 108 ವಾಹನ ಸಹಾಯದಿಂದ ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾರೆ. ನನ್ನ ಗಂಡನಿಗೆ ಯಾರೋ ಬೆಂಕಿಹಚ್ಚಿ ಕೊಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ನನ್ನ ಪತಿಯ ಸಾವಿನ ಬಗ್ಗೆ ಸಂಶಯವಿದ್ದು ತನಿಖೆ ನಡೆಸಿ ಸಾವಿಗೆ ಸೂಕ್ತಕಾರಣವನ್ನು ತಿಳಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಮತರ ಪತ್ನಿ ಮಂಜುಳಮ್ಮ ಸಂತೇಬೆನ್ನೂರು ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದೇನೇ ಇರಲಿ, ಕುರಿಜತೆಗಿದ್ದ ಕುರಿಗಾಯಿಯನ್ನು ಸುಟ್ಟಿರುವುದು ಮಾತ್ರ ಮಾನವನಿಗೆ ಕರುಣೆಯೇ ಇಲ್ಲ ಎಂಬುದನ್ನು ತೋರಿಸುತ್ತಿದ್ದುಘಿ, ಮುಂದಿನ ದಿನಗಳಲ್ಲಿ ಕೊಲೆಗಾರ ಯಾರು ಎಂಬ ಪ್ರಶ್ನೆಗೆ ಖಾಕಿ ಪಡೆ ಉತ್ತರ ನೀಡಬೇಕಿದೆ.

  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

    ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ…

    Leave a Reply

    Your email address will not be published. Required fields are marked *

    error: Content is protected !!