ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಂಚೆ ಸೇವೆಗಳು ಒಂದೇ ಸೂರಿನಡಿ : ಅಂಚೆ ನಿರೀಕ್ಷಕ ವೇಣುಗೋಪಾಲ್

ದಾವಣಗೆರೆ; ಸೆ.15 : ಅಂಚೆ ಜನ ಸಂಪರ್ಕ ಅಭಿಯಾನವು ಅಂಚೆಯ ವಿವಿಧ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಂಚೆ ನಿರೀಕ್ಷಕ ವೇಣುಗೋಪಾಲ್ ತಿಳಿಸಿದರು.

ಮಂಗಳವಾರ(ಸೆ.12) ಭಾರತೀಯ ಅಂಚೆ ಇಲಾಖೆಯೂ ದಾವಣಗೆರೆ ವಿಭಾಗದ ವತಿಯಿಂದ ಜಗಳೂರು ಅಂಚೆ ಕಚೇರಿಯಲ್ಲಿ ಆಯೋಜಿಸಿದ ಅಂಚೆ ಜನ ಸಂಪರ್ಕ ಅಭಿಯಾನ ಕುರಿತು ಅವರು ಮಾತನಾಡಿದರು.

ಅಂಚೆ ಇಲಾಖೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾರ್ವಜನಿಕ ಸೇವೆಗಳು ಒಂದೇ ಸೂರಿನಡಿಯಲ್ಲಿ ಒದಗಿಸುವುದರ ಮೂಲಕ ದಾವಣಗೆರೆ ಅಂಚೆ ವಿಭಾಗವು ಯಶಸ್ವಿಯಾಗಿದೆ. ಈ ಅಭಿಯಾನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಖಾತೆಗಳನ್ನು ತೆರೆದಿದ್ದು ಮತ್ತು ವಿವಿಧ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ದಾವಣಗೆರೆ ಅಂಚೆ ಅಧೀಕ್ಷಕ ಚಂದ್ರಶೇಖರ್ ಮಾತನಾಡಿ, ಈಗಿನ ಆಧುನಿಕ ಜಗತ್ತಿಗೆ ತಕ್ಕಂತೆ ಅಂಚೆ ಇಲಾಖೆಯೂ ಬ್ಯಾಂಕಿಂಗ್ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಿದ್ದು, ಸಾಮಾನ್ಯ ಜನರಿಗೆ ತಮ್ಮ ಮನೆ ಬಾಗಿಲಿಗೆ, iಠಿಠಿb, ಡಿಜಿಟಲ್ ಅಕೌಂಟ್ಸ್‍ಗಳನ್ನು ಮಾಡಿ ಕೊಡುವುದರ ಮೂಲಕ ಎಟಿಎಂ ಮತ್ತು ಫೆÇೀನ್ ಪೇ ಇಂತಹ ಆಧುನಿಕ ವ್ಯವಹಾರಗಳನ್ನು ಅಂಚೆ ಇಲಾಖೆಯು ಒದಗಿಸಿ ಅನ್ನಭಾಗ್ಯ, ಗೃಹಲಕ್ಷ್ಮಿ, ಪಿಎಂ ಕಿಸಾನ್, ಇಂತಹ ಅನೇಕ ಯೋಜನೆಗಳು ಪ್ರಯೋಜನಕಾರಿ ಸೌಲಭ್ಯಗಳನ್ನು ಜನರಿಗೆ ಒದಗಿಸುತ್ತಿದೆ. ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ, ಛಿsಛಿ ಸೇವೆಗಳು, ಆಧಾರ್ ತಿದ್ದುಪಡಿ, ಆಧಾರ್ ನೋಂದಣಿ, ಸಾಮಾನ್ಯರು ಪಡೆಯಬಹುದಂತಹ ಹತ್ತು ಲಕ್ಷ ಮೌಲ್ಯದ ಅಪಘಾತ ವಿಮೆಗಳನ್ನು ಅಂಚೆಯ ಮೂಲಕ ಒದಗಿಸಲಾಗುತ್ತದೆ ಎಂದರು.

ಸಿಪಿಐ ಶ್ರೀನಿವಾಸರಾವ್ ಮಾತನಾಡಿ, ಅಂಚೆ ಕಚೇರಿಯಲ್ಲಿ ಉಳಿತಾಯ ಮಾಡಿದರೆ ಇಟ್ಟ ಹಣಕ್ಕೆ ಲೋಪವಾಗದಂತೆ ಉಳಿಕೆಯಾಗುವುದು, ಪ್ರತಿಯೊಬ್ಬರು ಖಆ ಖಾತೆಯನ್ನು ಮಾಡಿಸಿದರೆ ನಿಮ್ಮ ಮಕ್ಕಳ ಭವಿಷ್ಯಕ್ಕೆ ಉಳಿತಾಯ ಅವಶ್ಯ ಎಂದರು.

ಜಗಳೂರಿನ ಪೆÇೀಸ್ಟ್ ಮಾಸ್ಟರ್ ಎ.ಕೆ ಬಸಪ್ಪ, ತಾಲ್ಲೂಕು ಕಚೇರಿ ಶಿರಸ್ತೆದಾರ ಸುರೇಶ್, ಜಗಳೂರು ಸಿಡಿಪಿಒ ರೇಖಾ, ಸಹಾಯಕ ಅಂಚೆ ಅಧೀಕ್ಷಕ ಗುರುಪ್ರಸಾದ್ ಉಪಸ್ಥಿತರಿದ್ದರು.

  • Related Posts

    ದಾವಣಗೆರೆಯ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್

    ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ನಗರಕ್ಕೆ ವಿವಿಧ ಕಾರ್ಯಕ್ರಮಗಳ ಬೇಟಿ ನೀಡಿದ ಸಂದರ್ಭದಲ್ಲಿ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮುಚ್ಛಯದ ಆವರಣದಲ್ಲಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದರು. ನಂತರ…

    “ವಿಷ ಕೊಡಿ ಇಲ್ಲವೇ ಯೂರಿಯಾ ಕೊಡಿ” ದಾವಣಗೆರೆಯಲ್ಲಿ ಬಿಜೆಪಿ ಇಂದ ಪ್ರತಿಭಟನೆ

    ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು. ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!