

ಇಂದು ಬೆಂಗಳೂರಿನಲ್ಲಿ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆ ಸಚಿವರು, ಆತ್ಮೀಯರಾದ ಎನ್.ಎಸ್. ಬೋಸರಾಜು ಅವರನ್ನು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯರವರು ಭೇಟಿ ಮಾಡಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ 22 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅನುಮೋದನೆ ದೊರಕಿದ್ದರೂ ಕಾಮಗಾರಿಗಳು ಚಾಲನೆಯಾಗಿರುವುದಿಲ್ಲ, ಈ ಹಿನ್ನೆಲೆಯಲ್ಲಿ ಸಚಿವರನ್ನು ಭೇಟಿ ಮಾಡಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವಂತೆ ಮನವಿ ಮಾಡಲಾಯಿತು, ಕೂಡಲೇ ಸಚಿವರು ಸಂಬಂಧ ಪಟ್ಟ ಇಲಾಖೆಯ ಮುಖ್ಯ ಇಂಜಿನಿಯರ್ ಗೆ ಪೋನ್ ಮಾಡಿ ಸೂಚನೆ ನೀಡಿದರು.

ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳು ವಿಶೇಷ ಅನುದಾನದಲ್ಲಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದರು ಈ ವೇಳೆ ಶಾಸಕರಾದ ಪ್ರಕಾಶ್ ಕೋಳಿವಾಡ ಇದ್ದರು.

ಕಾಮಗಾರಿಗಳ ವಿವರ :
- ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ ಹಿರೆಕೆರೆ ಕೋಡಿ ನಾಲೆ ದುರಸ್ಥಿ 5 ಕೋಟಿ ರೂ ( ಟೆಂಡರ್ ಹಂತದಲ್ಲಿದೆ )
- ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಸ.ನಂ.103 ಕ್ಕೆ ಕೋಡಿ ಹಳ್ಳದ ಪ್ರವಾಹ ಹಾನಿ ತಡೆಗೋಡೆ ನಿರ್ಮಾಣ 2 ಕೋಟಿ ರೂ ( ಗುತ್ತಿಗೆ ಕರಾರು ಮಾಡಿಕೊಳ್ಳ ಬೇಕಿದೆ )
- ನ್ಯಾಮತಿ ತಾಲೂಕಿನ ಹಳೆಜೋಗ ಸಮೀಪದ ತಾವರೆಕೆರೆಯ ಕೋಡಿಹಳ್ಳ ಹಾಗೂ ರಂಗಪಟ್ಟಣ ಕೆರೆಯ ಫೀಡರ್ ನಾಲೆಗಳಿಂದ ಪ್ರವಾಹ ಹಾನಿ ತಡೆಗೋಡೆ ನಿರ್ಮಾಣ 2 ಕೋಟಿ ರೂ ( ಗುತ್ತಿಗೆ ಕರಾರು ಮಾಡಿಕೊಳ್ಳ ಬೇಕಿದೆ )
- ಹೊನ್ನಾಳಿ ತಾಲೂಕಿನ ಹನುಮಸಾಗರ ಹತ್ತಿರ ಚೆಕ್ ಡ್ಯಾಂ ಹಿಂಭಾಗ ತಡೆಗೋಡೆ ನಿರ್ಮಾಣ 2 ಕೋಟಿ ರೂ ( ಗುತ್ತಿಗೆ ಕರಾರು ಮಾಡಿಕೊಳ್ಳ ಬೇಕಿದೆ )
- ಹೊನ್ನಾಳಿ ತಾಲೂಕಿನ ದೊಡ್ಡೇರಹಳ್ಳಿ ಗ್ರಾಮದಲ್ಲಿನ ಹಳ್ಳಕ್ಕೆ ತಡೆಗೋಡೆ ನಿರ್ಮಾಣ 6 ಕೋಟಿ ರೂ, ( ಟೆಂಡರ್ ಪ್ರಕ್ರಿಯೆಯಲ್ಲಿದೆ)
- ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಮಾವಿನಕೋಟೆ ಗ್ರಾಮದ ಸ.ನಂ.36 ರ ಕುಳಗಟ್ಟೆ ಕ್ರಾಸ್ ನಲ್ಲಿ ಬರುವ ಜಮೀನಿನಲ್ಲಿ ಹಳ್ಳಕ್ಕೆ ಸಿಮೆಂಟ್ ಕಾಂಕ್ರಿಟ್ ವಾಲ್ ನಿರ್ಮಾಣ ಕಾಮಗಾರಿ 40 ಲಕ್ಷ ( ಗುತ್ತಿಗೆ ಕರಾರು ಮಾಡಿಕೊಳ್ಳ ಬೇಕಿದೆ )
- ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಬೊಮ್ಮೇನಹಳ್ಳಿ ಗ್ರಾಮದ ಸ.ನಂ.10 ರ ಕುಳಗಟ್ಟೆ ಕ್ರಾಸ್ ನಲ್ಲಿ ಬರುವ ಶ್ರೀ ಹರೀಶ್ ಬಿನ್ ಲಿಂಗಪ್ಪ ರವರ ಜಮೀನಿನಲ್ಲಿ ಹಳ್ಳಕ್ಕೆ ಸಿಮೆಂಟ್ ಕಾಂಕ್ರೀಟ್ ವಾಲ್ ನಿರ್ಮಾಣ 40 ಲಕ್ಷ ( ಗುತ್ತಿಗೆ ಕರಾರು ಮಾಡಿಕೊಳ್ಳ ಬೇಕಿದೆ )
- ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ ವಡಗಟ್ಟಿ ಕೆರೆ ಕೋಡಿಹಳ್ಳಕ್ಕೆ ತಡೆ ಗೋಡೆ ನಿರ್ಮಾಣ 50 ಲಕ್ಷ ( ಟೆಂಡರ್ ಪ್ರಕ್ರಿಯೆಯಲ್ಲಿದೆ )
- ನ್ಯಾಮತಿ ತಾಲೂಕಿನ ಕಂಕನಹಳ್ಳಿ- ಕೊಡಚಗೊಂಡನಹಳ್ಳಿ ಗ್ರಾಮದ ಬಳಿ ಹಿರೇಹಳ್ಳಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿ 2 ಕೋಟಿ ರೂ ( ಟೆಂಡರ್ ಹಂತದಲ್ಲಿದೆ )
- ನ್ಯಾಮತಿ ತಾಲೂಕಿನ ದಾನಿಹಳ್ಳಿ ಸಮೀಪ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿ 3 ಕೋಟಿ ರೂ ( ಟೆಂಡರ್ ಹಂತದಲ್ಲಿದೆ ).