

ಇಂದು ಬೆಂಗಳೂರಿನಲ್ಲಿ ಮಾನ್ಯ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿಯವರನ್ನು ಭೇಟಿ ಮಾಡಿ,
ನೊಳಂಬ ವೀರಶೈವ ಲಿಂಗಾಯತ ಸಮಾಜದ ಸಮುದಾಯ ಭವನಕ್ಕೆ 2.5 ಕೋಟಿ ಹಾಗೂ ಕುಂಚಿಟಿಗ ಸಮಾಜದ ಸಮುದಾಯ ಭವನಕ್ಕೆ 2.5 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದು,ಇದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದು, ಮಾನ್ಯ ಸಚಿವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು.

ಇದೇ ವೇಳೆ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ 4.16 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಅದರ ಅನುಷ್ಟಾನ ವಿಳಂಬವಾಗಿದ್ದು ಕಾಮಗಾರಿಗಳ ಅನುಷ್ಠಾನಗೊಳಿಸುವಂತೆ ಸಚಿವರಲ್ಲಿ ಮನವಿ ಮಾಡಲಾಯಿತು.
ಸಮುದಾಯ ಭವನಗಳ ವಿವರ :
- ಕುಂಬಾರ ಕುಶಲ ಕೈಗಾರಿಕಾ ಸಹಕಾರ ಸಂಘ ನಿ. ನ್ಯಾಮತಿ , ಶ್ರೀ ಸರ್ವಜ್ಞ ಸಭಾ ಭವನ 41 ಲಕ್ಷ ರೂ
- ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಸಾರ್ವಜನಿಕ ಸಮುದಾಯ ಭವನ ನಿರ್ಮಾಣ 15 ಲಕ್ಷ
- ಹೊನ್ನಾಳಿ ತಾಲೂಕಿನ ಎಚ್.ಕಡದಕಟ್ಟೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸಮುದಾಯ ನಿರ್ಮಾಣ 15 ಲಕ್ಷ
- ನ್ಯಾಮತಿ ತಾಲೂಕಿನ ಜೀನಹಳ್ಳಿ ಗ್ರಾಮದ ಶ್ರೀ ರಾಮೇಶ್ವರ, ಶ್ರೀ ಬಸವೇಶ್ವರ, ಶ್ರೀ ತಿರುಮಲ ದೇವರುಗಳ ಅಭಿವೃದ್ಧಿ ಸೇವಾಟ್ರಸ್ಟ್ ಸಮುದಾಯ ಭವನ 15 ಲಕ್ಷ
- ಹೊನ್ನಾಳಿ ತಾಲೂಕಿನ ಕೂಲಂಬಿ ಗ್ರಾಮದ ಶ್ರೀಗದ್ದಿಗೇಶ್ವರ, ಬಸವೇಶ್ವರ, ರಾಮೇಶ್ವರ ಕಮಿಟಿ ಸಮುದಾಯ ಭವನ 80 ಲಕ್ಷ
- ಹರಳಹಳ್ಳಿ ಗ್ರಾಮದ ಬಸವೇಶ್ವರ ಗ್ರಾಮ ವಿಕಾಸ ಸಮಿತಿ ಸಮುದಾಯ ಭವನ 50 ಲಕ್ಷ
7.ಕುಂದೂರು ಗ್ರಾಮದ ಶ್ರೀ ಆಂಜನೇಯ ಸಮುದಾಯ ಭವನ 90 ಲಕ್ಷ - ಸಿಂಗಟಗೆರೆ ಗ್ರಾಮದ ಶ್ರೀ ಬಸವೇಶ್ವರ ಸಮುದಾಯ ಭವನ 20 ಲಕ್ಷ
- ಬೀರಗೊಂಡನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸಮುದಾಯ ಭವನ 90 ಲಕ್ಷ
