

ಇಂದು ಬೆಂಗಳೂರಿನಲ್ಲಿ ಮಾನ್ಯ ಲೋಕೋಪಯೋಗಿ ಇಲಾಖೆ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರನ್ನು ಹೊನ್ನಾಳಿ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯರವರು ಭೇಟಿ ಮಾಡಿ ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ SHDP ಅನುದಾನದಡಿಯಲ್ಲಿ
- ಸಾಸ್ವೇಹಳ್ಳಿಯಿಂದ ನಲ್ಲೂರು ಗಡಿವರೆಗೆ ರಸ್ತೆ ಅಭಿವೃದ್ದಿ 10 ಕೋಟಿ ರೂ,
- ಕುರ್ಕಿಯಿಂದ ಕೂಲಂಬಿವರೆಗೆ ರಸ್ತೆ ಅಭಿವೃದ್ಧಿ 7 ಕೋಟಿ ರೂ,
- ಕತ್ತಿಗೆಯಿಂದ ಜೀನಹಳ್ಳಿ ಕ್ರಾಸ್ ವರೆಗೆ ರಸ್ರೆ ಅಭಿವೃದ್ಧಿ 6 ಕೋಟಿ ರೂಪಾಯಿ ಸೇರಿ ಒಟ್ಟು 23 ಕೋಟಿ ರೂ, ಅನುಮೋದನೆ ನೀಡಲಾಗಿದ್ದು ಗುತ್ತಿಗೆದಾರರ ವಿಳಂಬದಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಅಷ್ಟೇ ಅಲ್ಲದೇ ಹೊನ್ನಾಳಿ ನಗರದ ಟಿ.ಬಿ.ವೃತ್ತದಿಂದ ದಿ.ಕೃಷ್ಣಪ್ಪ ನಗರದವರೆಗೆ ರಸ್ತೆ ಅಗಲೀಕರಣ ಹಾಗೂ ಅಲಂಕಾರಿಕ ವಿದ್ಯುತ್ ದೀಪ ಹಾಗೂ ವಿಭಜಕಗಳ ಅಳವಡಿಕೆಗೆ 7 ಕೋಟಿ ರೂಪಾಯಿಯ ಕಾಮಗಾರಿ ಆರಂಭಿಸಿ ಮೂರು ವರ್ಷವಾದರೂ ಕೂಡ ಗುತ್ತಿಗೆದಾರರ ವಿಳಂಬದಿಂದ ಕಾಮಗಾರಿ ನಿಂತಿದ್ದು ಈ ನಾಲ್ಕು ಕಾಮಗಾರಿಗಳನ್ನು ಮರು ಟೆಂಡರ್ ಮಾಡಿ ಅನುಷ್ಠಾನಗೊಳಿಸುವಂತೆ ಮನವಿ ಮಾಡಲಾಯಿತು.

ಇದರ ಜೊತೆಗೆ
- ಹೊನ್ನಾಳಿ ತಾಲೂಕು ಕುಂದೂರು ಕೆರೆ ರಸ್ತೆ ಅಗಲೀಕರಣ ಕಾಮಗಾರಿ 6 ಕೋಟಿ ರೂ,
- ನ್ಯಾಮತಿ ತಾಲೂಕು ಕೊಡತಾಳು ಕೆರೆ ರಸ್ತೆ ಅಗಲೀಕರಣ 6 ಕೋಟಿ ರೂಪಾಯಿ ಕಾಮಗಾರಿಗಳು 60 ರಷ್ಟು ಕಾಮಗಾರಿಗಳು ಮುಗಿದಿದ್ದು,
- ನ್ಯಾಮತಿ ತಾಲೂಕು ಚೀಲೂರು ಕೆರೆ ರಸ್ತೆ ಅಗಲೀಕರಣ 6 ಕೋಟಿ ರೂಪಾಯಿಯ ಕಾಮಗಾರಿಯನ್ನು ಗುತ್ತಿಗೆದಾರ
ಕಾಮಗಾರಿ ಆರಂಭಿಸಿ ಅಷ್ಟಕ್ಕೆ ಬಿಟ್ಟಿದ್ದು ಆದಷ್ಟು ಬೇಗ ಆರಂಭಿಸಿ ಕಾಮಗಾರಿ ಮುಕ್ತಾಯಗೊಳಿಸುವಂತೆ ಮನವಿ ಮಾಡಲಾಯಿತು.

ಅಷ್ಟೇ ಅಲ್ಲದೇ
- ಹೊನ್ನಾಳಿ ತಾಲೂಕಿನ ಹುಣಸಘಟ್ಟದಿಂದ ಸೈದರಕಲ್ಲಹಳ್ಳಿ ರಸ್ತೆ ಅಭಿವೃದ್ಧಿ 1.50 ಕೋಟಿ ರೂ,
2. ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯಿಂದ ಬೇಲಿಮಲ್ಲೂರುವರೆಗೆ ರಸ್ತೆ ಅಭಿವೃದ್ಧಿ 4 ಕೋಟಿ ರೂ, - ನ್ಯಾಮತಿ ತಾಲೂಕಿನ ಆರುಂಡಿ ವೃತ್ತದಿಂದ ಮಲ್ಲಿಗೇನಹಳ್ಳಿ- ಬೆಳಗುತ್ತಿವರೆಗೆ ರಸ್ತೆ ಅಭಿವೃದ್ಧಿ 3 ಕೋಟಿ ರೂಪಾಯಿ ಕಾಮಗಾರಿಗಳನ್ನು ಆದಷ್ಟು ಬೇಗ ಅನುಷ್ಟಾನ ಮಾಡುವಂತೆ ಮನವಿ ಮಾಡಿದೆನಲ್ಲದೇ
KRIDL ಕಡೆಯಿಂದ ಹೊನ್ನಾಳಿ, ನ್ಯಾಮತಿ, ಸುರಹೊನ್ನೆ, ಸವಳಂಗ ಮಾರ್ಗಗಳ ರಸ್ತೆ ವಿಭಜಕ ಮತ್ತು ಬೀದಿ ದೀಪಗಳ ಅಳವಡಿಕೆಗೆ 25 ಕೋಟಿ ರೂಪಾಯಿ ಅನುದಾನದ ಬಿಡುಗಡೆಯಾಗಿದ್ದು ಕಾಮಗಾರಿಗಳು ಗುತ್ತಿಗೆದಾರರ ಕಡೆಯಿಂದ ವಿಳಂಬವಾಗಿದ್ದು ಒಟ್ಟು 81.50 ಕೋಟಿ ರೂಪಾಯಿಯ ಕಾಮಗಾರಿಗಳನ್ನು ಆದಷ್ಟು ಬೇಗ ಅನುಷ್ಟಾನಗೊಳಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.