ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ : ಸೆ. 26 ಅರ್ಜಿ ಸಲ್ಲಿಸಲು ಕೊನೆ ದಿನ

Bengaluru: ರಾಜ್ಯ ಕಾರ್ಮಿಕ ಇಲಾಖೆಯ ವತಿಯಿಂದ ರಾಜ್ಯ ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಯ (Free laptop for PUC students) ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ

Free laptop for PUC students

ಉಚಿತ ಲ್ಯಾಪ್ಟಾಪ್ (Free laptop) ನೀಡಲು ಅರ್ಜಿ(Application)ಆಹ್ವಾನಿಸಲಾಗಿದೆ. ಪ್ರಥಮ ಅಥವಾ ದ್ವಿತೀಯ ಪಿಯುಸಿ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಕಟ್ಟಡ ಕಾರ್ಮಿಕರ ಮಕ್ಕಳು

(Children of construction workers) ಈ ಯೋಜನೆಯಡಿ ಅರ್ಜಿ ಸಲ್ಲಿಕೆಗೆ ಆಹ್ವಾನಿಸಲಾಗಿದೆ. ಆದರೆ ಈ ಉಚಿತ ಲ್ಯಾಪ್ಟಾಪ್ ಯೋಜನೆ ಎಲ್ಲ ವಿದ್ಯಾರ್ಥಿಗಳಿಗಲ್ಲ. ಆಯ್ಕೆ ಆಗುವ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್ಟಾಪ್ (Free laptop for PUC students) ನೀಡಲಾಗುವುದು. ರಾಜ್ಯ ಕಾರ್ಮಿಕ ಇಲಾಖೆ (State Labor Department) ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಬೆಂಗಳೂರು ಉಪ ವಿಭಾಗದ ಕಾರ್ಮಿಕ ಅಧಿಕಾರಿ ಕಾರ್ಯವ್ಯಾಪ್ತಿಯಲ್ಲಿ ನೋಂದಣಿ ಆಗಿರುವ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಮಕ್ಕಳು ಈ ಯೋಜನೆಯ ಲಾಭ ಪಡೆಯಲು ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು :


• ಕಾರ್ಮಿಕ ಕಲ್ಯಾಣ ಮಂಡಳಿಯ (Labor Welfare Board) ನೋಂದಾವಣೆ ಪ್ರಮಾಣ ಪತ್ರ.
• ಪಿಯುಸಿ ಪ್ರವೇಶ ಪಡೆದಿರುವ ದಾಖಲೆ
• ಆಧಾರ್ ಕಾರ್ಡ್ಎರಡು ಭಾವಚಿತ್ರ
• ಜಾತಿ ಪ್ರಮಾಣ ಪತ್ರ
• ಆದಾಯ ಪ್ರಮಾಣ ಪತ್ರ
• ಎಸ್ಎಸ್ಎಲ್ಸಿ ಅಂಕಪಟ್ಟಿ
• ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ.

ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿ, ಉಪ ವಿಭಾಗ-1, ಬೆಂಗಳೂರು, ಇಲ್ಲಿಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 26, 2023 ಕೊನೆ ದಿನವಾಗಿರುತ್ತದೆ. ವಿಳಾಸ : ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯ ಕಟ್ಟಡ, ಮೊದಲನೇ ಮಹಡಿ, ಮಂಜುನಾಥನಗರ, ಬಾಗಲಗುಂಟೆ ಬೆಂಗಳೂರು – 73 ಮೊಬೈಲ್ ಸಂಖ್ಯೆ – 9845587605 / 8105084941

  • Related Posts

    ವಾಹನ ಚಾಲಕರಿಗೆ ರಸ್ತೆ ಸಂಚಾರ ನಿಯಮದ ಅರಿವು ಮೂಡಿಸಿ ಅಪಘಾತ ತಪ್ಪಿಸಿ : ಜಿ.ಜಗದೀಶ್

    ಬೆಂಗಳೂರು ನಗರ ಜಿಲ್ಲೆ, ಜನವರಿ 31 ಬೆಂಗಳೂರು ನಗರದಲ್ಲಿ ಅತಿ ವೇಗದ ವಾಹನ ಚಾಲನೆಯಿಂದಾಗಿ ಅಪಘಾತ ಹೆಚ್ಚಾಗುತಿರುವ ಕಾರಣ ರಸ್ತೆ ಸುರಕ್ಷತಾ ನಿಯಮ ಪಾಲಿಸುವಂತೆ ವಾಹನ ಚಾಲಕರಿಗೆ ಅರಿವು ಮೂಡಿಸಿ ಎಂದು ರಸ್ತೆ ಸುರಕ್ಷತಾ ಅಧಿಕಾರಿಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ…

    ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತಾಗಿ ಸಭೆ

    ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತಾಗಿ ಮಾನ್ಯ ಮುಖ್ಯಮಂತ್ರಿಗಳಾದ Siddaramaiah ರವರ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆ ನಡೆಸಲಾಯಿತು ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿರುವ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು…

    Leave a Reply

    Your email address will not be published. Required fields are marked *

    error: Content is protected !!