

ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ಪಂಚಪೀಠಗಳಲ್ಲಿ ಒಂದಾದ ಆಂದ್ರ ಪ್ರದೇಶದಲ್ಲಿರುವ ಶ್ರೀಶೈಲ ಪೀಠಕ್ಕೆ ಗಣೀ ಮತ್ತು ಭೂ ವಿಜ್ಞಾನ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರು ಭೇಟಿ ನೀಡಿ ಶ್ರೀಶೈಲ ಕ್ಷೇತ್ರದಲ್ಲಿ ವಿಶೇಷ ಪೂಜೆ ನೆರೆವೆರಿಸಿ ಜಗದ್ಗುರರುಗಳವರ ಇಷ್ಟ ಲಿಂಗ ಮಹಾಪೂಜೆಯಲ್ಲಿ ಭಾಗವಹಿಸಿದರು. ಈ ಸಂಧರ್ಭದಲ್ಲಿ ಸಚಿವರ ಶ್ರೀಮತಿ ಡಾ.ಪ್ರಭಾ ಮಲ್ಲಿಕಾರ್ಜುನ, ಪುತ್ರ ಶಾಮನೂರು ಸಮರ್ಥ್ ಮತ್ತು ಸಮಾಜದ ಯುವ ಮುಖಂಡರಾದ ಆರ್.ಟಿ.ಪ್ರಶಾಂತ್ ದುಗ್ಗತ್ತಿಮಠ ಪೂಜೆಯಲ್ಲಿ ಪಾಲ್ಗೊಂಡಿದ್ದರು.