

ದಾವಣಗೆರೆಯ ಹಳೇ ಕುಂದುವಾಡದಲ್ಲಿನ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ “ಸಸ್ಯಶಾಮಲ” ಕಾರ್ಯಕ್ರಮವನ್ನು ಇಂದು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ದಾವಣಗೆರೆಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ (ಆಡಳಿತ) ಕೊಟ್ರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದಂರ್ಭದಲ್ಲಿ ಗ್ರಾಮದ ಮುಖಂಡರಾದ ಹೆಚ್.ಜಿ. ಮಂಜಪ್ಪ, ಬಸವರಾಜಪ್ಪ ಗೌಡರು, ಪ್ರೌಢಶಾಲಾ ಹಿರಿಯ ಶಿಕ್ಷಕರಾದ ಕೆ. ಸುವರ್ಣಮ್ಮ ಮತ್ತು ಶಾಲಾ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗದಿಗೇಶ್ ಹೆಚ್., ಉಪಧ್ಯಾಕ್ಷರಾದ ವಸಂತಮ್ಮ ಬಿ.ಎನ್., ಮುಖ್ಯೋಪಧ್ಯಾಯರಾದ ಹನುಮಂತಪ್ಪ ಮತ್ತು ಸಹ ಶಿಕ್ಷಕರು ಇದ್ದರು.