

ಧಾರವಾಡ ಸೆ.11: ಪ್ರತಿಯೊಬ್ಬರ ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಆಹಾರ, ಔಷಧಿ, ಪ್ರಾಣವಾಯು ಸೇರಿದಂತೆ ಪ್ರತಿಯೊಂದನ್ನು ನೀಡುವ ಅರಣ್ಯ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ ಆಗಬೇಕು. ಅರಣ್ಯವೇ ನಮ್ಮ ಉತ್ತಮ ಆರೋಗ್ಯದ ಮೂಲ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಹೇಳಿದರು.
ಅವರು ಇಂದು ಬೆಳಿಗ್ಗೆ ಅರಣ್ಯ ಇಲಾಖೆಯು ಧಾರವಾಡ ಅರಣ್ಯ ಸಂಕೀರ್ಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಭಾಗವಹಿಸಿ ಮಾತನಾಡಿದರು.

ಭಾರತದ ಸಂವಿಧಾನ ತನ್ನ ಪ್ರಜೆಗಳಿಗೆ ನೀಡಿರುವ ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳನ್ನು ನೀಡಿದೆ. ಮೂಲಭೂತ ಹಕ್ಕಿಗಾಗಿ ಒತ್ತಾಯಿಸುವ ನಾವು ಪರಿಸರ, ಸ್ಮಾರಕ, ಅರಣ್ಯ ಸಂರಕ್ಷಣೆ ಅಂತಹ ಕರ್ತವ್ಯಗಳನ್ನು ಪಾಲಿಸುವ ಬದ್ದತೆ ತೋರಬೇಕು ಎಂದು ಅವರು ತಿಳಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿಗಳು ಅರಣ್ಯ ರಕ್ಷಣೆಗೆ ನೇಮಕವಾಗಿದ್ದಾರೆ. ಆದರೆ ಅರಣ್ಯಗಳ್ಳರ, ಪ್ರಾಣಿವಧೆಯವರ, ಒತ್ತುವರಿದಾರ ಹಾವಳಿಯಿಂದಾಗಿ ಅವರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಾಗರಿಕರ ಹಿತಕ್ಕಾಗಿ ತಮ್ಮ ಬದಕು ಬಲಿಕೊಡುತ್ತಿದ್ದಾರೆ. ಸರಕಾರ, ನ್ಯಾಯಾಂಗ ಅವರಿಗೆ ಅಗತ್ಯ ನೆರವು ನೀಡಲು ಸಿದ್ದವಾಗಿದೆ. ಆದರೆ ಸಾರ್ವಜನಿಕರು ಅರಣ್ಯ ಕಾಪಾಡುವಲ್ಲಿ ನೈತಿಕ ಜವಾಬ್ದಾರಿ ತೋರಬೇಕೆಂದು ಅವರು ಹೇಳಿದರು.
ಪ್ರಕೃತಿ ತಾಯಿ ಸಮಾನ. ಕೆಲವರ ದುರಾಸೆಯಿಂದ ನೈಸರ್ಗಿಕ ಸಂಪನ್ಮೂಲಗಳ ನಾಶವಾಗಬಾರದು. ಪ್ರಕೃತಿ ಸರಿಯಾಗಿ, ಉತ್ತಮವಾಗಿದ್ದರೆ ಮಾತ್ರ ನಮ್ಮ ಪ್ರಕೃತಿ ಚೆನ್ನಾಗಿರಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಪ್ರಕೃತಿ ಕಾಪಾಡಿ, ಉಳಿಸಿಬೆಳೆಸುವ ಪ್ರತಿಜ್ಞೆ ಮಾಡೋಣ ಎಂದು ತಿಳಿಸಿದರು.

ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಯತೀಶಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪ ಅರಣ್ಯಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎಪ್.ಓ ಪ್ರದೀಪ ಪವಾರ ಹುತಾತ್ಮ ಅರಣ್ಯ ಅಧಿಕಾರಿ, ಸಿಬ್ಬಂದಿಗಳ ಪಟ್ಟಿ ಪ್ರಸ್ತುತ ಪಡಿಸಿದರು. ಆಕಾಶವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪೆÇಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ.ಗೋಪಾಲ ಬ್ಯಾಕೂಡ ಸೇರಿದಂತೆ ಅರಣ್ಯ ಇಲಾಖೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿ, ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪ (ರಿತ್) ಸಲ್ಲಿಸಿ, ನಮಿಸಿದರು.
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….