ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠ ರಾಷ್ಟ್ರೀಯ ಲೋಕ ಅದಾಲತ್ ;180 ಪ್ರಕರಣಗಳು ಇತ್ಯರ್ಥ

ಧಾರವಾಡ ಸೆ.09: ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ ಇಂದು (ಸೆ.9) ರಂದು ಜರುಗಿದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಒಟ್ಟು 180 ಪ್ರಕರಣಗಳನ್ನು ರೂ.5,55,14,597/- ಮೊತ್ತಕ್ಕೆ ಇತ್ಯರ್ಥ ಪಡಿಸಲಾಯಿತು.

ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿ ಶ್ರೀನಿವಾಸ ಹರೀಶಕುಮಾರ ಅವರ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿತ್ತು. ಅದಾಲತ್‍ನಲ್ಲಿ ನ್ಯಾಯಮೂರ್ತಿಗಳಾದ ಹಂಚಾಟೆ ಸಂಜೀವಕುಮಾರ, ಜೆ.ಎಮ್. ಖಾಜಿ, ಜಿ. ಬಸವರಾಜ ಮತ್ತು ರಾಮಚಂದ್ರ ಡಿ. ಹುದ್ದಾರ ಹಾಗೂ ಇವರೊಂದಿಗೆ ಲೋಕ ಅದಾಲತ್‍ನ ಸದಸ್ಯರುಗಳಾದ ಬಸವರಾಜ ಎಸ್. ಸಾತಣ್ಣವರ, ಚೇತನಾ ಎಸ್. ಬಿರಾಜ, ಲಿಂಗೇಶ ವಿ. ಕಟ್ಟೆಮನೆ ಮತ್ತು ಪ್ರಶಾಂತ ಕಾಡದೇವರ ಈ ರೀತಿಯಾಗಿ ಒಟ್ಟು 4 ಪೀಠಗಳನ್ನು ಆಯೋಜಿಸಲಾಗಿತ್ತು. ಸದರಿ ಅದಾಲತನಲ್ಲಿ ಒಟ್ಟು 581 ಪ್ರಕರಣಗಳನ್ನು ವಿಚಾರಣೆಗೆಂದು ಗುರುತಿಸಿಕೊಳ್ಳಲಾಗಿತ್ತು.

ಈ ಅದಾಲತ್‍ನಲ್ಲಿ ನ್ಯಾಯಮೂರ್ತಿಗಳಾದ ಹಂಚಾಟೆ ಸಂಜೀವಕುಮಾರ ಹಾಗೂ ಸದಸ್ಯರಾದ ಬಸವರಾಜ ಎಸ್. ಸಾತಣ್ಣವರ ಇವರನ್ನು ಒಳಗೊಂಡ ಅದಲಾತ ಪೀಠವು ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 13 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ವಕೀಲರುಗಳಾದ ಎಸ್.ಎಚ್. ಮಿತ್ತಲಕೋಡ ಮತ್ತು ಕಿರಣಕುಮಾರ ಎಸ್. ಚತ್ತಿಮಠ ಹಾಗೂ ಉಬಯ ಪಕ್ಷಗಾರರ ಜೊತೆಗೆ ರಾಜಿ-ಸಂಧಾನದೊಂದಿಗೆ ವ್ಯಾಜ್ಯವನ್ನು ಇತ್ಯರ್ಥಪಡಿಸಲಾಯಿತು ಎಂದು ಧಾರವಾಡ ಪೀಠದ ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಮತ್ತು ಅಧೀಕ ವಿಲೇಖನಾಧಿಕಾರಿ ವೆಂಕಟೇಶ ಆರ್. ಹುಲಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….

  • Related Posts

    ರೈತ ಸಂಪರ್ಕ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ದಿಢೀರ್ ಭೇಟಿ;

    ಜಿಲ್ಲೆಯ ಪ್ರತಿ ಆರ್.ಎಸ್ ಕೆ.ದಲ್ಲಿ ರೈತರ ಬೇಡಿಕೆ ವಹಿ ಮತ್ತು ರೈತರ ಕುಂದುಕೊರತೆ ವಹಿ ನಿರ್ವಹಿಸಲು ನಿರ್ದೇಶನ ನೀಡಿದ ಡಿಸಿ. ಧಾರವಾಡ ಜ.31: ಇಂದು ಬೆಳಿಗ್ಗೆ ನಗರದ ಗಾಂಧಿ ಭವನ ಕಾಮಗಾರಿ ವೀಕ್ಷಣೆಗೆ ತರಳಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಗಾಂಧಿ…

    ಹುಬ್ಬಳ್ಳಿಯ ಹೆಸ್ಕಾಂ ಮುಖ್ಯ ಕಚೇರಿಯಲ್ಲಿ ಕಲಘಟಗಿ ಕ್ಷೇತ್ರದ ವಿದ್ಯುತ್‌ ಸಮಸ್ಯೆಗಳ ಬಗ್ಗೆ ಸಭೆ…

    Leave a Reply

    Your email address will not be published. Required fields are marked *

    error: Content is protected !!