ಮಕ್ಕಳ ಆಸಕ್ತಿ ಇರುವ ವಿಷಯಗಳ ಬಗ್ಗೆ ಗಮನ ನೀಡಿ : ಡಿವೈಎಸ್ಪಿ ಬಸವರಾಜ್…

ದಾವಣಗೆರೆ, ಮಕ್ಕಳಿಗೆ ಆಸಕ್ತಿ ಇರುವ ವಿಷಯಗಳನ್ನು ಪೋಷಕರು ಪ್ರೋತ್ಸಾಹಿಸಬೇಕು ಎಂದು ಡಿವೈಎಸ್ಪಿ ಬಿ.ಎಸ್.ಬಸವರಾಜ್ ಹೇಳಿದರು.
ನಗರದ ಹಳೇಬೇತೂರಿನ ಗೋಲ್ಡನ್ ಪ್ಯಾಲೇಸ್‌ನಲ್ಲಿ ಯೂನಿಕ್ ಸ್ಕ್ಯಾಲರ್ ಅಬಾಕಸ್ ರಾಜ್ಯ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬ ಮಕ್ಕಳಿಗೆ ಅವರದ್ದೇ ಆದ ಟ್ಯಾಲೆಂಟ್ ಇದ್ದುಘಿ, ಅವರಿಗೆ ಆಸಕ್ತಿ ಇರುವ ವಿಷಯಗಳಿಗೆ ನೀರೆರೆದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡುವರು ಎಂದರು.

ಕೊಲ್ಲಾಪುರ, ಮಹಾರಾಷ್ಟ್ರಘಿ, ಸತಾರಾ, ತುಮಕೂರು, ಮುಂಬೈಘಿ,ಮಂಗಳೂರು, ಕುಷ್ಟಗಿ ಸೇರಿದಂತೆ 375 ಮಕ್ಕಳು, ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇಲ್ಲಿ ಗೆದ್ದವರು ರಾಷ್ಟ್ರಮಟ್ಟಕ್ಕೆ ಹೋಗಲಿದ್ದಾರೆ. ಮೊದಲನೇ ಬಹುಮಾನವಾಗಿ ಸೈಕಲ್, ಎರಡನೇ ಬಹುಮಾನವಾಗಿ ಬೆಳ್ಳಿ ಪದಕ, ಮೂರನೇ ಬಹುಮಾನವಾಗಿ ನಗದು ನೀಡಲಾಯಿತು. 100ಕ್ಕೂ ಹೆಚ್ಚು ಮಕ್ಕಳು ರ್ಯಾಕಿಂಗ್ ಪಡೆದರು. ದಾವಣಗೆರೆ ವಿಶೇಷ ಲೋಕಾಯುಕ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಪಿ.ಅನಿತಾ, ಸ್ಕೌಟ್ ಆ್ಯಂಡ್ ಗೈಡ್ಸ್ ನ ಜೆ.ಅಶ್ವಿನಿ, ದಾವಣಗೆರೆ ಅಬಕಾಸ್ ಡೈರಕ್ಟರ್ ಮೀನಾಕ್ಷಿ ಲಾಂಬೆ, ಸಂಘಟನಾ ಸುಮನ್ ತೆಲಗಾವಿ ಸೇರಿದಂತೆ ಇತರರು ಇದ್ದರು.

  • Related Posts

    ದಾವಣಗೆರೆಯ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್

    ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ನಗರಕ್ಕೆ ವಿವಿಧ ಕಾರ್ಯಕ್ರಮಗಳ ಬೇಟಿ ನೀಡಿದ ಸಂದರ್ಭದಲ್ಲಿ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮುಚ್ಛಯದ ಆವರಣದಲ್ಲಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದರು. ನಂತರ…

    “ವಿಷ ಕೊಡಿ ಇಲ್ಲವೇ ಯೂರಿಯಾ ಕೊಡಿ” ದಾವಣಗೆರೆಯಲ್ಲಿ ಬಿಜೆಪಿ ಇಂದ ಪ್ರತಿಭಟನೆ

    ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು. ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!