

ದಾವಣಗೆರೆ ೯-೯-೨೩ : ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೋಮು ಪ್ರಚೋದನೆ ಹಾಗೂ ರಾಷ್ಟ್ರದ್ರೋಹದ ಹೇಳಿಕೆ ನೀಡಿದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸನಾತನ ಹಿಂದು ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ತನ್ನ ಹೆತ್ತ ತಾಯಿಯಿಂದ ಹಿಂದೂ, ಸಂಸ್ಕೃತಿ, ಸಂಸ್ಕಾರಗಳನ್ನು ಮೊದಲು ಕಲಿಯಲಿ. ಹಿಂದು ಧರ್ಮವನ್ನು ಅವಮಾನಿಸಿದೆದಂದರೆ ಹೆತ್ತ ತಾಯಿಯನ್ನೇ ಅವಮಾನಿಸಿದಂತೆ ಎಂಬುದನ್ನು ಉದಯನಿಧಿ ಅರಿಯಲಿ.
ತಮಿಳುನಾಡಿನ ಮುಖ್ಯಮಂತ್ರಿ ಪುತ್ರ ಎಂ.ಕೆ.ಸ್ಟಾಲಿನ್ ಪುತ್ರ, ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ, ವಿಶೇಷ ಕಾಯ್ದೆ ಅನುಷ್ಠಾನ ಇಲಾಖೆ ಸಚಿವರು, ಡಿ.ಎಂ.ಕೆ. ಪಕ್ಷದ ಯುವ ಘಟಕದ ಅಧ್ಯಕ್ಷನೂ ಆದ ಉದಯ ನಿಧಿ ಸ್ಟಾಲಿನ್ ಓಲೈಕೆ ಮತ್ತು ಮತ ಬ್ಯಾಂಕ್ ರಾಜಕೀಯ ಬಿಡಲಿ.
ಈ ರೀತಿಯ ಹೇಳಿಕೆಯನ್ನು ನೀಡಿದ್ದು, ನಮ್ಮ ಸನಾತನ ಧರ್ಮವನ್ನು ಡೆಂಗ್ಯೂ, ಕೊರೊನಾ, ಮಲೇರಿಯಾಕ್ಕೆ ಸಮಾನವಾದದ್ದು ಎಂಬ ಹೇಳಿಕೆ ನೀಡಿರುವುದು ಅಕ್ಷಮ್ಯ ಹಾಗೂ ಖಂಡನೀಯ.ಜವಾಬ್ದಾರಿಯುತ ಸ್ಥಾನದಲ್ಲಿರುವ ಉದಯನಿಧಿನಂಹವರು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಬಾರದು. ಕಾಂಗ್ರೆಸ್ ಮೈತ್ರಿಪಕ್ಷ ಡಿ.ಎಂ.ಕೆ ಹಾಗೂ ಐ.ಎನ್.ಡಿ.ಐ.ಎ ಮೈತ್ರಿಕೂಟ ಸನಾತನ ಧರ್ಮವಾದ ನಮ್ಮ ಹಿಂದುತ್ವದ ನಿರ್ಮೂಲನೆ ಬಗ್ಗೆ ಮಾತನಾಡುತ್ತಾ ದ್ವೇಷಿಸುತ್ತಿರುವುದು ಖಂಡನೀಯ ಸಂಗತಿಯಾಗಿದೆ.