

ದಿನಾಂಕ 27-2-2022 ರಂದು
⚛️ *ಭಾನುವಾರ* ☸️
*ಇಂದಿನ ಪಂಚಾಂಗ📖*
ಶ್ರೀ ಮನೃಪ ಶಾಲೀವಾಹನಶಕೆ
೧೯೪೩ ನೇ ಶ್ರೀ ಪ್ಲವನಾಮ
ಸಂವತ್ಸರದ, ಉತ್ತರಾಯಣ
ಶಶಿರ ಋತು ಮಾಘಮಾಸ
ಕೃಷ್ಣಪಕ್ಷ ದ್ವಾದಶಿ ತಿಥಿ ರಾತ್ರಿ 4-22 ರ ವರೆಗೆ
ನಂತರ ತ್ರಯೋದಶಿ ತಿಥಿ
*************************
*✳️ ಇಂದಿನ ನಕ್ಷತ್ರ*✳️
ಪೂರ್ವಾಷಾಡ ನಕ್ಷತ್ರ ಬೆಳಿಗ್ಗೆ 7-25 ರ ವರೆಗೆ
ನಂತರ ಉ ಷಾ ನಕ್ಷತ್ರ ಬೆಳಗಿನ ಜಾವ 5-57 ರ ವರೆಗೆ
*************************
ವ್ಯತೀಪಾತ್ ನಾಮ ಯೋಗ
ಕೌಲವ ನಾಮ ಕರಣ
************************
*ರಾಹುಕಾಲ*
ಸಂಜೆ 4-30 ರಿಂದ 6 ರ ವರೆಗೆ
************************
*ಯಮಗಂಡಕಾಲ*
ಮಧ್ಯಾಹ್ನ 12 ರಿಂದ 1-30 ರ ವರೆಗೆ
*************************
*ಈ ದಿನ ಶುಭ ಸಮಯ*
ಬೆಳಿಗ್ಗೆ 7 ರಿಂದ 12 ರ ವರೆಗೆ
1-30 ರಿಂದ 4-30 ರ ವರೆಗೆ
*************************
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ
*ಸೂರ್ಯೋದಯ 6-44 ಕ್ಕೆ*
*ಸೂರ್ಯಾಸ್ತ 6-33 ಕ್ಕೆ*
*************************
*ಇಂದಿನ ಮಳೆ*
ಶತಭಿಷ ಮಳೆ 3 ನೇ ಪಾದ
———————————-
*ಗಾದೆಯ ಭೋದೆ*
———————————-
*ಕಂಡದ್ದನ್ನ ಕಂಡಂತೆ ಹೇಳಿದರೆ ಕೆಂಡದಂತ ಕೋಪ*
====================
🕉️ *ಓಂಕಾರ ನುಡಿ* 🕉️
✍️
*************************
*ವಿದ್ಯಾವಂತರನ್ನು ಗೌರವಿಸಬೇಕು*
ಪ್ರತಿಯೊಬ್ಬರಿಂದ ಗೌರವ ಪಡೆಯುವಲ್ಲಿ *ವಿದ್ಯೆ* ಅಗ್ರಗಣ್ಯ. ಒಬ್ಬ ವ್ಯಕ್ತಿ ಯಾವ ವಿಷಯದಲ್ಲೇ ಆದರು ಪರಿಣತಿ ಪಡೆದು ವಿದ್ಯಾವಂತನಾಗಿದ್ದರೆ ಆತನನ್ನುಎಲ್ಲರು ಗೌರವಿಸ ಬೇಕೆಂದು ಸುಭಾಷಿತ ಹೇಳಿದೆ.
*ಹರ್ತುರ್ಯಾತಿ ನ ಗೋಚರಂ*
*ಕಿಮಪಿಶಂ ಪುಷ್ಪಾತಿ ಯತ್ಸರ್ವದಾ*
*ಹ್ಯರ್ಥಿಭ್ಯಃ ಪ್ರತಿಪಾದ್ಯ ಮಾನಮನಿಶಂ*
*ಪ್ರಾಪ್ನೋತಿ ವೃದ್ದಿಂ ಪರಾಂ*
*ಕಲ್ಪಾಂತೇಷ್ಯಪಿ ನ ಪ್ರಯಾತಿ*
*ನಿಧನಂ ವಿದ್ಯಾಖ್ಯಮಂತರ್ಧನಂ*
*ತೇಷಾಂ ತಾನ್ ಪ್ರತಿಮಾನಮು಼ಜ್ಝತ*
*ನೃಪಾಃ ಕಸ್ತೈಃ ಸಹಸ್ಪರ್ಧತೇ*
ಕಣ್ಣಿಗೆ ಕಾಣುವ ಸುಲಭವಾಗಿ ಕೈಗೆ ಎಟಕುವ ವಸ್ತುಗಳನ್ನು ಸುಲಭವಾಗಿ ಯಾರಾದರೂ ಕದಿಯಬಹುದು ಆದರೆ, ಜ್ಞಾನ ಮಟ್ಟಕ್ಕೆ ಸ್ಪರ್ಶವಾಗುವಂತ
ವಿದ್ಯೆ ಕಲ್ಯಾಣಕಾರಿ ಅದನ್ನು ಕದಿಯಲು ಯಾರಿಂದಲೂ ಆಗದು.
ಹಣ ಹಂಚಿದಷ್ಟು ಕಳೆಯುತ್ತದೆ, ವಿದ್ಯೆ ಹಂಚಿದಷ್ಟು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿ ಕೊಳ್ಳುತ್ತದೆ.
ಇಂತಹ ವಿದ್ಯೆಯನ್ನು ಗಳಿಸಿದವರೊಂದಿಗೆ ಸ್ಪರ್ಧಿಸಿ ಭೋಗಿಸುವಂತಹ ಯಾವ ವಸ್ತುವನ್ನು ಪಡೆಯಬಹುದು?
ಎಲ್ಲದಕ್ಕಿಂತ ಎಲ್ಲರಿಗಿಂತ ವಿದ್ಯೆ ಶ್ರೇಷ್ಠವಾದ ಸ್ಥಾನದಲ್ಲಿದೆ ಹಾಗಾಗಿ ವಿದ್ಯಾವಂತರನ್ನು ಗೌರವಿಸೋಣ ಕೃತಾರ್ಥರಾಗೋಣ.🌺🌺
===================
*🌺 ಗುರು ಕಾರುಣ್ಯ ದ🌺*
*ಶುಭಾಶೀರ್ವಾಣಿ*
*************************
ಸರ್ವೇ ಜನಾಃ ಸುಖಿನೋ ಭವಂತುI
ಸಮಸ್ತ ಸನ್ಮಂಗಲಾನಿಭವಂತುII
ಸಕಲ ಇಷ್ಟಾರ್ಥ ಸಿದ್ಧಿ ರಸ್ತುII
ಧರ್ಮಾಭಿವೃಧ್ಧಿರಸ್ತುII
ಸದಾಚಾರ ಸಂವೃದ್ದಿರಸ್ತುII
ಮನೋಭೀಷ್ಟ ವಾಂಛಿತಫಲಸಿದ್ದಿರಸ್ತುll
*ಶ್ರೀ ಜಗದ್ಗುರು ರೇಣುಕಾಚಾರ್ಯ ಕೃಪಾ ಪ್ರಸಾದ ಸದಾ ಸಿದ್ದಿರಸ್ತುll*
🌺✋🌺
====================
🌺🌹 *ಶುಭಮಸ್ತು* 🌺🌹
*ಭದ್ರಂ-ಶುಭಂ -ಮಂಗಲಂ*
+++++-++++++++++++++
*ಇಂದ*
ಪುರವರ್ಗ ಹಿರೇಮಠ ಶ್ರೀ ಕ್ಷೇತ್ರ
ಆವರಗೊಳ್ಳ, ದಾವಣಗೆರೆ
++++++++++++++++++++