ದಾವಣಗೆರೆ: ದನಗಳ ಮೈ ತೊಳೆಯಲು ಹೋದ ಯುವಕ ನೀರು ಪಾಲು; ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ,,

ದಾವಣಗೆರೆ ; ದನಗಳ ಮೈ ತೊಳೆಯಲು ಚಾನಲ್​ಗೆ ಹೋಗಿದ್ದ ಯುವಕನೋರ್ವ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದ ಬಳಿ ನಡೆದಿದೆ.

ಮಂಜುನಾಥ್(26) ಮೃತ ವ್ಯಕ್ತಿ. ಚಾನಲ್​ನಲ್ಲಿ ದನಗಳ ಮೈ ತೊಳೆಯಲು ಹೋಗಿದ್ದರು. ಈ ವೇಳೆ ಕಾಲು ಜಾರಿ ನೀರಿನಲ್ಲಿ ಬಿದ್ದು, ಕೊನೆಯುಸಿರೆಳೆದಿದ್ದಾನೆ. ಇನ್ನು ಮುಂಜುನಾಥ್​ ಮೃತದೇಹ ಕೊಚ್ಚಿ ಹೋಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ನೀರಿಗೆ ಹಾರಿ ಹೊರ ತೆಗೆದಿದ್ದಾರೆ.

ದನಗಳ ಮೈ ತೊಳೆಯಲು ಚಾನಲ್​ಗೆ ಇಳಿದಿದ್ದ ಯುವಕ ಮಂಜುನಾಥ್ ಮೃತದೇಹವನ್ನು ಹೊರ ತೆಗದ ಸ್ಥಳೀಯರು, ‌ಹೊನ್ನಾಳಿ ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇನ್ನು ಈ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Related Posts

    ಕಳವಾಗಿದ್ದ 34 ಗ್ರಾಂ ತೂಕದ ಬಂಗಾರದ 01 ಕೈ ಉಂಗುರ ಮತ್ತು 03 ಬಂಗಾರದ ಬಳೆಗಳು ಮತ್ತು ಒಂದು ಐಫೋನ್ ಮೊಬೈಲ್ ಫೋನ್ ಸೇರಿ 2.12.900/- ವಶ

    ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಮೊಕದ್ದಮೆ ಸಂಖ್ಯೆ 49/2023 ಕಲಂ 379 ಐಪಿಸಿ ಪ್ರಕರಣದ ನೇದ್ದರಲ್ಲಿ ದಿನಾಂಕ 03-09-2023 ರಂದು ಕಳವು ಪ್ರಕರಣ ವರದಿಯಾಗಿದ್ದು ಸದರಿ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆ ಸಂಬಂಧ ಮಾನ್ಯ…

    ಅಶ್ಲೀಲ ವಿಡಿಯೋದ ಬ್ಲ್ಯಾಕ್‌ಮೇಲ್‌, ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ..

    ದಾವಣಗೆರೆ s 04 : ತನ್ನ ಅಶ್ಲೀಲ ವಿಡಿಯೋ ಹರಿಯಬಿಡುವ ಬೆದರಿಕೆಯಿಂದ ಕಂಗಾಲಾಗಿ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ 17 ವರ್ಷ ವಿದ್ಯಾರ್ಥಿನಿಯೊಬ್ಬರು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ವಿದ್ಯಾರ್ಥಿನಿ ಕೆಲ ದಿನಗಳ ಹಿಂದೆ…

    Leave a Reply

    Your email address will not be published. Required fields are marked *

    error: Content is protected !!