ಹೈನುಗಾರಿಕೆಯಿಂದ ಅರಸನಾದ ದೇವರಾಜ್

ದಾವಣಗೆರೆ : ಆಳಾಗಿ ದುಡಿ ಅರಸನಾಗು ಎಂಬ ಮಾತಿಗೆ ಇಲ್ಲೊಬ್ಬರು ಹೈನೋದ್ಯಮಕ್ಕೆ ಕೈ ಹಾಕಿ ತನ್ನ ಆರ್ಥಿಕ ಬದುಕನ್ನು ಹಸನಾಗಿಸಿಕೊಂಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ರಾಸುಗಳಿಗೆ ಗಂಟು ರೋಗ, ಮೇವಿನ ದರ ಏರಿಕೆ, ಕೂಲಿ ಕಾರ್ಮಿಕರ ಕೊರತೆ ಹೀಗೆ ಹತ್ತಾರು ಸಂಕಷ್ಟಗಳ ನಡುವೆ ಹೈನೋದ್ಯಮ ಮಾಡಲು ಹಿಂಜರಿಯುತ್ತಾರೆ. ಆದರೆ ಇವರು ಮಾತ್ರ ಪಟ್ಟು ಬಿಡದೆ ಗೋವುಗಳನ್ನು ಸಾಕಿ ಅರಸನಾಗಿದ್ದಾರೆ.ಹೌದು.. ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಅತ್ತಿಗೆರೆ ಗ್ರಾಮದ ದೇವರಾಜ್ ಎಂಬುವರೇ ಈಗ ಗೋವುಗಳನ್ನು ಸಾಕಿ ಕೈ ತುಂಬಾ ಹಣ ನೋಡುತ್ತಿರುವ ವ್ಯಕ್ತಿ. ಅತ್ತಿಗೆರೆ ಗ್ರಾಮದಲ್ಲಿ ಸಣ್ಣದಾಗಿ ಆರಂಭಿಸಿದ್ದ ಹೈನೋದ್ಯಮ ಇಂದು ಬೃಹತ್ಕಾರವಾಗಿ ಬೆಳೆದು ಇತರರನ್ನು ಸೆಳೆಯುತ್ತಿದೆ.


ಕೇವಲ ಎರಡು ಹಸುಗಳನ್ನು ಸಾಕುವ ಮೂಲಕ ಹೈನೋದ್ಯಮ ಶುರುಮಾಡಿದ ದೇವರಾಜ್, ನಂತರದ ದಿನಗಳಲ್ಲಿ 35ಕ್ಕೂ ಹೆಚ್ಚು ಹಸುಗಳನ್ನು ತಂದು ಸಾಕುತ್ತಿದ್ದಾರೆ. ಹಸುಗಳ ಲಾಲನೆಪಾಲನೆಗೆ ಇಬ್ಬರು ಕೂಲಿ ಆಳುಗಳು ಇದ್ದಾರೆ. ಐದು ಲಕ್ಷ ರೂ. ಬೆಲೆ ಬಾಳುವ ಶೆಡ್ ಕಟ್ಟಿದ್ದಾರೆ. ಹಸುಗಳಿಗಾಗಿ ಮ್ಯಾಟ್, ್ಯಾನ್, ಸೊಳ್ಳೆ ಪರದೆ ವ್ಯವಸ್ಥೆ ಮಾಡಿದ್ದಾರೆ. ಒಮ್ಮೆ ಇವರ ಾರಂಗೆ ಕಾಲಿಟ್ಟರೆ ಸಾಕು ಎಲ್ಲ ತಳಿಯ ಹಸುಗಳು ಕಾಣ ಸಿಗುತ್ತದೆ. ದೇವರಾಜ್ ಮಾಡಿರುವ ಡೈರಿ ಾರಂನಲ್ಲಿ ಒಟ್ಟು 35 ಹಸುಗಳಿವೆ. ಅದರಲ್ಲಿ ಏಳೆಂಟು ಹಸುಗಳು ಮಾತ್ರ ಪ್ರಸ್ತುತ ಹಾಲು ಕರೆಯುತ್ತಿವೆ. ಇನ್ನುಳಿದ ಹಸುಗಳು ಗರ್ಭಧರಿಸಿವೆ. ದಿನಕ್ಕೆ 100 ಲೀರ್ಟ ಹಾಲು ಕರೆಯುತ್ತಾರೆ. ಬೆಳಗ್ಗೆ ಕರೆದ ಹಾಲು ಹಸುಗಳ ಖರ್ಚಿಗೆ ಹೋಗುತ್ತದೆ. ಸಂಜೆ ಕರೆದ ಹಾಲು ಲಾಭ ಎಂದು ದೇವರಾಜ್ ಹೇಳುತ್ತಾರೆ. ಅಂದ್ರೆ ತಿಂಗಳಿಗೆ ಖರ್ಚು ತೆಗೆದು 50 ಸಾವಿರ ರೂ. ಲಾಭ ಮಾಡುತ್ತಾರೆ. ಈ ಡೈರಿ ಾರಂನಲ್ಲಿ ದೇಸಿ ತಳಿಗಳಾದ ಮಲೆನಾಡ ಗಿಡ್ಡ, ಜವಾರಿ, ಜರ್ಸಿ, ಎಚ್ಎ್ ತಳಿಯ ಹಸುಗಳಿದ್ದು, ಹಸುಗಳನ್ನು ಮಾರಾಟವನ್ನು ಮಾಡುತ್ತಾರೆ. ಹೆಣ್ಣು ಕರು ಹಾಕಿದರೆ ಇನ್ನಷ್ಟು ಲಾಭ ಕಾಣುತ್ತಾರೆ.. ಇವರು ಹಸುಗಳನ್ನು ಸಾಕುವುದು ಮಾತ್ರವಲ್ಲದೇ ಮಾರಾಟ ಕೂಡ ಮಾಡುವ ಕಾರಣ ಕೈ ತುಂಬಾ ಹಣ ಬರುತ್ತಿದೆ. ಎರಡು ಮಲೆನಾಡ ಗಿಡ್ಡಗಳಿದ್ದು, ಕಡಿಮೆ ಹಣಕ್ಕೆ ತಂದಿದ್ದಾರೆ. ಅಲ್ಲದೇ ಇವುಗಳ ಖರ್ಚು ಕಡಿಮೆ ದಿನಕ್ಕೆ ಐದರಿಂದ ಆರು ಲೀರ್ಟ ಹಾಲು ಕೊಡುತ್ತದೆ. ಎಮ್ಮೆ ರೀತಿಯಲ್ಲಿ ಇದು ಗಟ್ಟಿ ಹಾಲು ಕೊಡುತ್ತದೆ. ಮೇವು ಕಡಿಮೆ ತಿನ್ನುತ್ತವೆ. ಇನ್ನು ಜವಾರಿ ತಳಿಯನ್ನು ಸಾಕಿದ್ದು, ಅವುಗಳ ಗಂಜಲ, ಸಗಣಿಗೆ ಹೆಚ್ಚು ಬೇಡಿಕೆ ಇದೆ. ಇನ್ನು ಹಸುಗಳಿಂದ ಬರುವ ಗಂಜಲ, ಸಗಣಿಯಿಂದಲೂ ದೇವರಾಜ್ಗೆ ಹಣ ಸಿಗುತ್ತಿದೆ.

ರೈತರ ಜೀವನಾಡಿ, ಲಾಭದಾಯಕ ಉದ್ದಿಮೆ: ಹಸುವಿನಿಂದ ಹಾಲಿನ ಜತೆ, ಉತ್ತಮ ಗೊಬ್ಬರ, ಸಂತಾನೋತ್ಪತ್ತಿ (ಕರುಗಳು) ನೀಡುತ್ತವೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪಶು ಇಲಾಖೆ ಹಾಗೂ ಕೆಎಂಎ್ ಹಸುಗಳಿಗೂ ಕೂಡ ವಿಮೆ ಮಾಡಿಸುತ್ತಿದೆ. ವಿಮೆ ಪಡೆದು 21 ದಿನಗಳ ನಂತರ ಯಾವಾಗ ಮೃತಪಟ್ಟರು ಪರಿಹಾರ ದೊರೆಯುತ್ತದೆ.
ಹೈನುಗಾರಿಕೆಯು ಒಂದು ಲಾಭದಾಯಕ ಉದ್ದಿಮೆಯಾಗಿದ್ದು, 2-3 ಹಸು ಸಾಕಣೆ ಮಾಡಿದಲ್ಲಿ ಓರ್ವ ಸರಕಾರಿ ನೌಕರರನ್ನು ಮೀರಿಸುವಂತಹ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ನಿರಂತರ ಆದಾಯ ಪಡೆಯಬಹುದಾಗಿದೆ ಎನ್ನುತ್ತಾರೆ ದೇವರಾಜ್. ಒಟ್ಟಾರೆ ಆಧುನೀಕತೆ ಬೆಳೆದಂತೆ ಹಲವರು ಬೆಂಗಳೂರು ಸುತ್ತಮುತ್ತಲ ಜನ ಐಟಿ – ಬಿಟಿ ಕ್ಷೇತ್ರಗಳತ್ತ ಆಕರ್ಷಿತರಾಗಿದ್ದಾರೆ. ಆದರೆ ಈ ಏಳು ಬೀಳಿನ ನಡುವೆ ಹಾಲು ಉತ್ಪಾದನೆ ಈ ಹಳ್ಳಿ ರೈತನ ಕೈ ಹಿಡಿದಿದೆ. ಹಳ್ಳಿಗಾಡಿನ ರೈತರಿಗೆ ಹೈನುಗಾರಿಕೆ ಅಕ್ಷಯ ಪಾತ್ರೆಯಾಗಿದೆ.

  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

    ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ…

    Leave a Reply

    Your email address will not be published. Required fields are marked *

    error: Content is protected !!