ಮಾಧ್ಯಮದವರಿಗೆ ಬೆಲೆ ಕೊಡದ ಸಂಸದರಿಗೆ ತರಾಟೆಗೆ ತೆಗೆದುಕೊಂಡ ಮಾಧ್ಯಮದವರು,,,

ಮಾಧ್ಯಮದವರಿಗೆ ಬೆಲೆ ಕೊಡದ ದಾವಣಗೆರೆಯ ಸಂಸದ ಜಿಎಂ ಸಿದ್ದೇಶ್ವರ್ ರವರನ್ನು ಮಾಧ್ಯಮದವರು ತರಾಟೆಗೆ ತೆಗೆದುಕೊಂಡಂತಹ ಘಟನೆ ನಡೆದಿದ್ದೆ. ಇಂದು ಇ ಎಸ್ ಐ ಆಸ್ಪತ್ರೆಯ ಕಾಮಗಾರಿ ವೀಕ್ಷಣೆಗೆಂದು ಸಂಸದ ಜಿಎಂ ಸಿದ್ದೇಶ್ವರ ಹಾಗೂ ಬಿಜೆಪಿಯ ನಾಯಕರು ಆಗಮಿಸಿದ್ದರು ಮಾಧ್ಯಮದೊಂದಿಗೆ ಮಾತನಾಡುವ ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ಗರಂ ಆಗಿದ್ದಾರೆ.

“ಸರ್ ಈ ಆಸ್ಪತ್ರೆಯ ಕಾಮಗಾರಿ ಹಳೆಯ ಕಟ್ಟಡದ ಮೇಲೆ ಮುಂದುವರೆಯುತ್ತಿದೆ” ಎಂಬ ಪ್ರಶ್ನೆಗೆ ಸಂಸದ ಜಿಎಂ ಸಿದ್ದೇಶ್ವರ್ ಸರಿಯಾಗಿ ಉತ್ತರ ನೀಡದೆ ನನಗೇನು ಗೊತ್ತು, ಎಂದು ಹೇಳಿದ್ದಾರೆ .. ನಂತರ ನಿನ್ನೆ ಹೊನ್ನಾಳಿಯ ರೇಣುಕಾಚಾರ್ಯ ರವರ ಮನೆಯಲ್ಲಿ ನಡೆದ ಸಭೆಯ ಬಗ್ಗೆ ಮಾಧ್ಯಮದವರು ಕೇಳಿದಾಗ.. ನೀವು ಅಲ್ಲಿ ಹೇಳಿದ್ದು ಇಲ್ಲಿ ಕೇಳ್ತೀರಾ.. ಇಲ್ಲಿ ಹೇಳಿದ್ದು ಅಲ್ಲಿ ಹೇಳ್ತೀರಾ.””ತಾರಾ ತಿಗಡಿ ಮಾಡ್ತೀರಾ””..ಎಂದು ಹೇಳಿದ್ದಾರೆ .ಇದಕ್ಕೆ ಕೋಪಗೊಂಡ ಮಾಧ್ಯಮದವರು ಸ‌ಂಸದ ಜಿ ಎಂ ಸಿದ್ದೇಶ್ವರಿಗೆ ಮುಖದಲ್ಲಿ ನೀರಿಳಿಸಿದ್ದಾರೆ…

ನೀವು ಮಾತನಾಡುವುದಾಗಿದ್ದರೆ ಸರಿಯಾಗಿ ಮಾತನಾಡಿ ಇಲ್ಲವಾದರೆ ಮಾತನಾಡಬೇಡಿ ನಾವು ನಮ್ಮ ಕೆಲಸವನ್ನು ಮಾಡುತ್ತೇವೆ.. ನಿಮ್ಮ ಮಾತಿನಲ್ಲಿ ಹಿಡಿತವಿರಲಿ, ವಯಸ್ಸಿನಲ್ಲಿ ಹಿರಿಯರು ರಾಜಕೀಯದಲ್ಲೂ ಹಿರಿಯರು, ಮೊದಲು ಮಾಧ್ಯಮದವರಿಗೆ ಬೆಲೆ ಕೊಡುವುದನ್ನು ಕಲಿಯಿರಿ ..ನಾವು ನಿನ್ನೆ ರೇಣುಕಾಚಾರ್ಯರವರ ಮನೆಯಲ್ಲಿ ನಡೆದ ಘಟನೆ ಬಗ್ಗೆ ಕೇಳಿದ್ದೇವೆ., ಇದಕ್ಕೆ ಪ್ರತಿಕ್ರಿಯೆ ನೀಡದಿದ್ದರೆ ನೀಡಿ ಇಲ್ಲವೆಂದರೆ ಹೋಗಿ, ಅದನ್ನು ಬಿಟ್ಟು ಮಾಧ್ಯಮದವರಿಗೆ ಕೀಳಾಗಿ,ಹಾಗೂ ತಾರ ತೆಗಿಡಿ ಮಾಡ್ತೀರಾ ಎಂದು ಮಾತನಾಡುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ..

  • Related Posts

    ದಾವಣಗೆರೆಯ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್

    ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ನಗರಕ್ಕೆ ವಿವಿಧ ಕಾರ್ಯಕ್ರಮಗಳ ಬೇಟಿ ನೀಡಿದ ಸಂದರ್ಭದಲ್ಲಿ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮುಚ್ಛಯದ ಆವರಣದಲ್ಲಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದರು. ನಂತರ…

    “ವಿಷ ಕೊಡಿ ಇಲ್ಲವೇ ಯೂರಿಯಾ ಕೊಡಿ” ದಾವಣಗೆರೆಯಲ್ಲಿ ಬಿಜೆಪಿ ಇಂದ ಪ್ರತಿಭಟನೆ

    ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು. ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!