ಪಕ್ಷಾಂತರಿಗಳಿಗೆ ಕಾಂಗ್ರೆಸ್ ಮನ್ನಣೆ; ಹೆಚ್. ದುಗ್ಗಪ್ಪ ಕಿಡಿ

ದಾವಣಗೆರೆ: ನೂತನ ಶಾಸಕರಿಗೆ ಕಾರು, ಬಂಗಲೆ, ಟಿಎ, ಡಿಎ, ಗ್ರಾಂಟ್ ಮೇಲೆ ಅಧಿಕಾರ ನೀಡಿದ್ದರೂ ಈಗ ಮತ್ತೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನೂ ಅವರಿಗೆ ನೀಡುತ್ತಾ ಕಾಂಗ್ರೆಸ್ ವರಿಷ್ಠರು ಕಾರ್ಯಕರ್ತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಹೆಚ್. ದುಗ್ಗಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವ ಕಾರ್ಯಕರ್ತರಿಗೆ ಯಾವುದೇ ಸ್ಥಾನ- ಮಾನ ನೀಡದೇ ಕಡೆಗಣಿಸುತ್ತಿರುವುದು ಪಕ್ಷದ ಕಾರ್ಯಕರ್ತರಿಗೆ ಬಹಳ ಬೇಸರ ತರಿಸಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು, ಪಕ್ಷದ ಮುಖಂಡರನ್ನು ಶಾಸಕರನ್ನಾಗಿ, ಸಚಿವರನ್ನಾಗಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನಾಗಿ ಮಾಡಲು ಇದೇ ಕಾರ್ಯಕರ್ತರು ಬೇಕು. ಪಕ್ಷದ ಬ್ಯಾನರ್, ಬಂಟಿಂಗ್ ಕಟ್ಟಲು ಕಾರ್ಯಕರ್ತರು ಬೇಕು ಆದರೆ ಅಧಿಕಾರದಿಂದ ಮಾತ್ರ ಕಾರ್ಯಕರ್ತರನ್ನು ಹೊರಗಿಡಲಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.

ಆಪರೇಷನ್‌ ಕಮಲ ಮಾಡಿದ ಬಿಜೆಪಿಗೆ ದೇಶದ ತುಂಬಾ ಕೆಟ್ಟ ಹೆಸರು ಬಂದಿದೆ. ಸಾವಿರಾರು ಕೋಟಿ ಹಣದಾಸೆಗೆ, ಅಧಿಕಾರದಾಸೆಗೆ ಬಿದ್ದು, ಉಂಡ ಮನೆಗೆ ದ್ರೋಹ ಬಗೆದು ಕಾಂಗ್ರೆಸ್ ಪಕ್ಷ ಕಷ್ಟದ ಸಮಯದಲ್ಲಿದ್ದಾಗ ನಡುನೀರಲ್ಲಿ ಬಿಟ್ಟುಹೋದ ಪಕ್ಷಾಂತರಿಗಳಿಗೆ ಮಣೆ ಹಾಕಿ, ಅವರನ್ನು ಮತ್ತೆ ಪಕ್ಷಕ್ಕೇ ಸೇರಿಸಿಕೊಳ್ಳುತ್ತೀರಿ, ಪಕ್ಷ ಈಗ 135 ಸ್ಥಾನದ ಬಹುಮತ ಪಡೆದು ಅಧಿಕಾರ ಪಡೆದಿರುವಾಗ ಪಕ್ಷಾಂತರಿಗಳನ್ನು ಮತ್ತೇ ಪಕ್ಷಕ್ಕೆ ಸೇರಿಸಿಕೊಳ್ಳುವ ಅನಿವಾರ್ಯತೆ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಪಕ್ಷ ಅಧಿಕಾರ ಕಳೆದುಕೊಂಡಾಗ ಗೆದ್ದೆತ್ತಿನ ಬಾಲ ಹಿಡಿದು ಅಧಿಕಾರ, ಹಣ ನೀಡುವ ಪಕ್ಷಗಳಿಗೆ ಪಕ್ಷಾಂತರಗೊಳ್ಳುತ್ತಾರೆ. ಇಂತಹವರಿಗೆ ಇರುವ ಬೆಲೆ, ನಿಯತ್ತಾಗಿ ದುಡಿಯುವ ಕಾರ್ಯಕರ್ತರಿಗಿಲ್ಲ. ಇಂತಹವರಿಗೆ ಅಧಿಕಾರ, ಸ್ಥಾನ ಮಾನ ನೀಡುವ ಬದಲು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವ ಕಾರ್ಯಕರ್ತರಿಗೆ ಅಧಿಕಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುಧಾಮ ದಾಸ್ ಎಂಬುವರು ನಿವೃತ್ತಿ ಹೊಂದಿ 1 ತಿಂಗಳು ಸಹ ಕಳೆದಿಲ್ಲ. ಅವರನ್ನು ಎಂಎಲ್‌ಸಿ ಮಾಡಲಾಗಿದೆ‌. ಹಲವಾರು ಬಾರಿ ಅಧಿಕಾರ ಕೊಟ್ಟವರಿಗೇ ಮತ್ತೇ ಮತ್ತೇ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ, ಎಂಎಲ್‌ಸಿ ಸ್ಥಾನ ಕೊಡುತ್ತಿದ್ದಾರೆ. ಹೀಗಾದರೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಬೆಲೆಯಿಲ್ಲವೇ, ಅವರು ತಮ್ಮ ಕೊನೆಗಾಲದವರೆಗೂ ಕಾರ್ಯಕರ್ತರಾಗಿ ದುಡಿಯುತ್ತಲೇ ಇರಬೇಕೇ ಎಂದು ಹೆಚ್.ದುಗ್ಗಪ್ಪನವರು ನೊಂದು ನುಡಿದಿದ್ದಾರೆ.

  • Related Posts

    ದಾವಣಗೆರೆಯ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್

    ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ನಗರಕ್ಕೆ ವಿವಿಧ ಕಾರ್ಯಕ್ರಮಗಳ ಬೇಟಿ ನೀಡಿದ ಸಂದರ್ಭದಲ್ಲಿ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮುಚ್ಛಯದ ಆವರಣದಲ್ಲಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದರು. ನಂತರ…

    “ವಿಷ ಕೊಡಿ ಇಲ್ಲವೇ ಯೂರಿಯಾ ಕೊಡಿ” ದಾವಣಗೆರೆಯಲ್ಲಿ ಬಿಜೆಪಿ ಇಂದ ಪ್ರತಿಭಟನೆ

    ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು. ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!