

ದಾವಣಗೆರೆ(ಆ 28).. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಐತಿಹಾಸಿಕ ಸೂಳೆಕೆರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿ ಹಾಗೂ ಇಸ್ಪೀಟ್ ಎಲೆಗಳು ಇದ್ದು, ಸೂಳೆಕೆರೆ ಸೌಂದರ್ಯಕ್ಕೆ ದಕ್ಕೆಯಾಗುತ್ತಿದ್ದರು ಸಂಬಂಧಿಸಿದಪಟ್ಟ ಅಧಿಕಾರಿಗಳು ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾಗಿದ್ದಾರೆ ಎಂದು ಮಾಯಕೊಂಡ ಶಾಸಕ ಬಸವಂತಪ್ಪ ಬೇಸರ ವ್ಯಕ್ತಪಡಿಸಿದರು.

ಇಂದು ಅಧಿಕಾರಿಗಳೊಂದಿಗೆ ಸೂಳೆಕೆರೆಯ ಜಾಟ್ ವೇಲ್ 6 ಕ್ಕೆ ಭೇಟಿ ನೀಡಿದರು. ಸೂಳೆಕೆರೆಯ ನೀರನ್ನು ಲಕ್ಷಾಂತರ ಜನರು ಕುಡಿಯುತ್ತಿದ್ದಾರೆ ಜಮೀನುಗಳು ಸಹ ಸೂಳೆಕೆರೆ ನೀರನ್ನು ಅವಲಂಬಿಸಿವೆ. ಇತ್ತೀಚಿಗೆ ಚಿತ್ರದುರ್ಗದ ಕವಾಡಿಗರಹಟ್ಟಿ ದುರಂತಕ್ಕೆ ಸಾಕ್ಷಿಯೆಂಬಂತೆ ಇಲ್ಲಿ ಯಾವುದೇ ಅನಾಹುತಗಳು ಸಂಭವಿಸಬಾರದು. ತ್ಯಾಜ್ಯದಿಂದ ಕೂಡಿರುವ ಸೂಳೆಕೆರೆಯ ಪರಿಸರವನ್ನು ಸ್ವಚ್ಛತೆಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
