ವರಮಹಾಲಕ್ಷ್ಮೀ ಹಬ್ಬಕ್ಕೆ ದುಪ್ಪಟ್ಟಾದ ಹೂ- ಹಣ್ಣುಗಳ ಬೆಲೆ,,,

ದಾವಣಗೆರೆ. (ಆ.೨೪); ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಾರುಕಟ್ಟೆಗಳಲ್ಲಿ  ಹೂವು- ಹಣ್ಣುಗಳ ಬೆಲೆಯಯ ಗಗನಕ್ಕೆ ಏರಿದೆ ಗ್ರಾಹಕರು ಕೂಡ ದುಪ್ಪಟ್ಟು ದರವಾದರೂ‌ ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತು.ನಾಳೆ ವರಮಹಾಲಕ್ಷ್ಮಿ ಹಬ್ಬದ ಆಚರಣೆ ನಡೆಯಲಿದ್ದು ನಗರದ ತಹಶೀಲ್ದಾರ್ ಕಚೇರಿ ಬಳಿ ಹೂ‌ ಮಾರುಕಟ್ಟೆ ಸೇರಿದಂತೆ ಗಡಿಯಾರಕಂಬ,ಜಯದೇವವೃತ್ತ,ವಿದ್ಯಾರ್ಥಿ ಭವನ,ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆ ,ವಿದ್ಯಾನಗರ ಸೇರಿದಂತೆ ಹಲವೆಡೆ ಹೂ‌ಹಣ್ಣು, ಬಾಳೆಕಂಬದ ಮಾರಾಟ ಬೆಳಗಿನಿಂದಲೇ ಪ್ರಾರಂಭವಾಗಿತ್ತು. ವರ್ತಕರು ಹೂ-ಹಣ್ಣಿನ ರಾಶಿ ಹಾಕಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು.


ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವುಗಳೇ ಪ್ರಮುಖ ಆಕರ್ಷಣೆ. ಮನೆ-ಮನೆಗಳಲ್ಲಿ ಪ್ರತಿಷ್ಠಾಪನೆಗೊಳ್ಳುವ ದೇವಿಯ ಅಲಂಕಾರಕ್ಕೆ, ಮನೆಗೆ ಬಂದ ಮಹಿಳೆಯರಿಗೆ ನೀಡುವ ಬಾಗಿನಕ್ಕೆ ಹೂವುಗಳು ಬೇಕೇ ಬೇಕು. ಈ ಹಿನ್ನೆಲೆಯಲ್ಲಿ ವಾರದಿಂದಲೇ ಹೂವಿನ ಬೆಲೆ ಏರಿಕೆ ಆಗುತ್ತಿದ್ದು, ಹೂಗಳ ಬೆಲೆ  ದುಪ್ಪಟ್ಟಾಗಿದೆ. ಕೆ.ಜಿ. ಲೆಕ್ಕದಲ್ಲಿ ಕೊಳ್ಳಲು ಬಯಸಿ ಬಂದವರು ಗ್ರಾಂಗಳ ಲೆಕ್ಕದಲ್ಲಿ ತೂಕ ಮಾಡಿಸಿಕೊಂಡು ಕೊಂಡೊಯ್ದರು.
ಕೆಲವು ದಿನದ ಹಿಂದಷ್ಟೇ ಪ್ರತಿ ಕೆ.ಜಿ.ಗೆ 1600- 800ರ ದರದಲ್ಲಿ ಮಾರಾಟ ಆಗುತ್ತಿದ್ದ ಬಿಡಿ ಹೂಗಳ ದರ ದುಪ್ಪಟ್ಟಾಗಿದೆ. ಲಕ್ಷ್ಮೀ ದೇವಿಯ ಬಹುಇಷ್ಟದ ಕಮಲದ ಹೂ ಜೋಡಿಗೆ ೨೦೦ ಇತ್ತು. ಚೆಂಡು ಹೂ ಮಾರಿಗೆ ೬೦ ರೂ, ಬಿಡಿ ಗುಲಾಬಿ ಕಾಲು ಕೆಜಿಗೆ ೨೦೦ ರಿಂದ ೨೫೦ ರೂ ಇತ್ತು.
ಹಬ್ಬದ ಹಿನ್ನೆಲೆಯಲ್ಲಿ ಹಣ್ಣುಗಳ ಬೆಲೆಯೂ ಹೆಚ್ಚಾಗಿದೆ. ಅದರಲ್ಲೂ ಏಲಕ್ಕಿ ಬಾಳೆ ಹಣ್ಣು ಪ್ರತಿ ಕೆ.ಜಿ.ಗೆ ೧೦೦ ದುಬಾರಿ ಆಗಿದೆ.  ಸೇಬು, ದಾಳಿಂಬೆ, ಸೀಬೆ ಮೊದಲಾದ ಹಣ್ಣುಗಳ ಬೆಲೆಯೂ‌ ಹೆಚ್ಚಾಗಿತ್ತು.

  • Related Posts

    ದಾವಣಗೆರೆಯ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್

    ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ನಗರಕ್ಕೆ ವಿವಿಧ ಕಾರ್ಯಕ್ರಮಗಳ ಬೇಟಿ ನೀಡಿದ ಸಂದರ್ಭದಲ್ಲಿ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮುಚ್ಛಯದ ಆವರಣದಲ್ಲಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದರು. ನಂತರ…

    “ವಿಷ ಕೊಡಿ ಇಲ್ಲವೇ ಯೂರಿಯಾ ಕೊಡಿ” ದಾವಣಗೆರೆಯಲ್ಲಿ ಬಿಜೆಪಿ ಇಂದ ಪ್ರತಿಭಟನೆ

    ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು. ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!