

ದಾವಣಗೆರೆ(21), ಅಮೇರಿಕಾದಲ್ಲಿ ದಾವಣಗೆರೆ ಮೂಲದ ಪತಿ,ಪತ್ನಿ ಗಂಡು ಮಗು ಸಾವು ವಿಚಾರ ಅಮೇರಿಕಾದಲ್ಲಿ ಇರುವ ಕನ್ಸಲ್ ಜನರಲ್ ಮತ್ತು ಡೆಪ್ಯುಟಿ ಕನ್ಸಲ್ ಜನರಲ್ ಜೊತೆ ನಿರಂತರ ಸಂಪರ್ಕ ಕನ್ಸಲ್ ಜನರಲ್ ಮಂಜುನಾಥ್, ಡೆಪ್ಯೂಟಿ ಕನ್ಸಲ್ ಜನರಲ್ ವರುಣ್ ಜೊಸೆಫ್ ಸೇರಿ ಕೆಳಹಂತದ ಸಿಬ್ಬಂದಿ ಜೊತೆ ನಿರಂತರ ಸಂಪರ್ಕ ದಾವಣಗೆರೆ ಡಿಸಿ ಡಾ.ಎಂ ವಿ ವೆಂಕಟೇಶ್ ಮಾಹಿತಿ .
ಯೋಗೇಶ್ ಮತ್ತು ಕುಟುಂಬಸ್ಥರ ಮೃತದೇಹ ಶವಪರೀಕ್ಷೆ ನಡೆಯಬೇಕಿದೆ.ನ್ಯೂಯಾರ್ಕ್ ಪೊಲೀಸರು ಮತ್ತು ಅಲ್ಲಿನ ಸರ್ಕಾರ ತೀವ್ರ ತನಿಖೆಗೆ ಒಳಪಡಿಸಿದೆ. ಏಷಿಯನ್ ಹಿಂದೂ ಫೆಡರಲ್ಸ್ ಸರ್ವಿಸಸ್ ಐರ್ಲೆಂಡ್ ಪಾರ್ಕ್ ಮೂಲಕ ನಿರ್ವಹಣೆ, ಮರಣೋತ್ತರ ಪರೀಕ್ಷೆ ಆದ ನಂತರ ಮೃತದೇಹಗಳನ್ನು ನಿರ್ವಹಣೆ ಮಾಡಲು ನೇಮಕ ಹಿಂದೂ ಧರ್ಮದ ಸಂಸ್ಕಾರದಂತೆ ನಿರ್ವಹಣೆ ಮಾಡಲು ನೇಮಕ ಮೃತ ಪ್ರತಿಭಾ ಹತ್ತಿರದ ಸಂಬಂಧಿ ಸೋಮಶೇಖರ್ ನೋಡಲ್ ಪರ್ಸನ್ ಆಗಿ ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ

ನ್ಯೂಯಾರ್ಕ್ ಪೊಲೀಸರು ಅಧಿಕಾರಿಗಳೊಂದಿಗೆ, ಕನ್ಸಲ್ ಜನರಲ್ ಜೊತೆ ಸೋಮಶೇಖರ್ ಸಂಪರ್ಕದಲ್ಲಿದ್ದಾರೆ.ನಿನ್ನೆ ರಜೆ ಇದ್ದ ಕಾರಣ ಇಂದು ಶವಪರೀಕ್ಷೆ ನಡೆಯುತ್ತೆ ಅಂತ ಮಾಹಿತಿ ಇದೆ,ಅಲ್ಲೇ ಹಿಂದು ಸಂಪ್ರದಾಯದಂತೆ ವಿಸರ್ಜನೆ ಮಾಡಲುಬಹುದು ಅವರ ಕುಟುಂಬದ ಅಪೇಕ್ಷೆಯಂತೆ ಮೃತ ದೇಹಗಳನ್ನು ಭಾರತಕ್ಕೆ ತರಿಸಬಹುದು ಅದಕ್ಕಾಗಿ ಒಂದು ಏಜನ್ಸಿ ಸಹ ಗುರುತಿಸಲಾಗಿದೆ
ಕನ್ಸಲೆಟ್ ಜನರಲ್ ಸಂಪೂರ್ಣ ಸಹಕಾರ ಇದೆ ಅಂತ ಮಾಹಿತಿ ನೀಡಿದ್ದಾರೆಕರ್ನಾಟಕ ಸರ್ಕಾರ ಹಾಗೂ ಜಿಲ್ಲಾಡಳಿತ ಸಂಪೂರ್ಣ ಸ್ಪಂದಿಸುತ್ತೆ ದಾವಣಗೆರೆಯಲ್ಲಿ ಡಿ.ಸಿ ಡಾ. ವೆಂಕಟೇಶ್ ಮಾಹಿತಿ..