
ಬೆಂಗಳೂರು,18;* ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕೈಮಗ್ಗ, ಕರಕುಶಲ ವಸ್ತುಗಳ ವೈಭವ “ಇಂಡಿಯನ್ ಹಾತ್ ಫೆಸ್ಟಿವಲ್” ಆರಂಭವಾಗಿದು.

ಹಬ್ಬದ ಅಂಗವಾಗಿ ಆ, 18 ರಿಂದ 27 ರ ವರೆಗೆ ದೇಶದ ಎಲ್ಲಾ ಭಾಗಗಳ ವಿಶೇಷ ವಿನ್ಯಾಸಗಳ ವಸ್ತುಗಳು ಕೈಗೆಟುಕುವ ದರದಲ್ಲಿ ಸಿಗಲಿದೆ.

ಉತ್ಪಾದಕರು ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಸುಲಭ ದರದಲ್ಲಿ ದೊರೆಯುತ್ತಿವೆ. ಅತ್ಯುತ್ತಮ ಗುಣಮಟ್ಟದ ಚಿತ್ತಾಕರ್ಷಕ ಬಣ್ಣ ಬಣ್ಣದ ವಸ್ತುಗಳು, ಸೀರೆ, ಬಟ್ಟೆ, ವಡವೆ, ಮನೆಗಳ ಅಂದ ಹೆಚ್ಚಿಸುವ ಬಿನ್ನ ವಿಭಿನ್ನ ಅಲಂಕಾರಿಕ ವಸ್ತುಗಳು ದೊರೆಯುತ್ತವೆ
ವೈವಿಧ್ಯಮಯ ಕೆತ್ತನೆಯ ಕಸೂರಿ ವಸ್ತುಗಳು, ಮಹಿಳೆಯರ ಅಂದ ಹೆಚ್ಚಿಸುವ ವಸ್ತುಗಳ ಮಾರಾಟಕ್ಕೆ ವೇದಿಕೆ ಸನ್ನದ್ಧವಾಗಿದೆ.
ಇನ್ನೂ ವಿಶೇಷವಾಗಿ ವರಮಹಾಲಕ್ಷ್ಮಿ ಹಬ್ಬಕ್ಕೆ ಮೆರಗು ತರುವ ವಸ್ತುಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ
ಇನ್ನೂ ಇದು ನಿಜಕ್ಕೂ ವಿಶೇಷವಾದ ಮೇಳವಾಗಿದ್ದೆ ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಮೇಳ ವಿಶೇಷ ಮನ್ನಣೆ ಪಡೆದಿದೆ. ಬೇರೆ ಬೇರೆ ರಾಜ್ಯಗಳ ಜೀವನ ಶೈಲಿ ತಿಳಿಯಲು, ಅಲ್ಲಿನ ವಿಶೇಷತೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಮೇಳ ಪೂರಕವಾಗಿದೆ ಎಂದು ಜೀವನ ಶೈಲಿ ಮೇಲೆ ಪ್ರಭಾವ ಬೀರುವ *ಕಲಾವಿದೆ ಜೀವಿತ ಜಗದೀಶ್ ಮೇಳಕ್ಕೆ ಚಾಲನೆ ನೀಡಿ ತಿಳಿಸಿದರು
ಮಹಿಳೆಯರು ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಹ ಮೇಳದ ವೈಶಿಷ್ಟ್ಯಗಳ ಬಗ್ಗೆ ಮೆಚ್ಚುಗೆ ಜೊತೆಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ.
