

ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿರುವ ಮುತ್ತು ಮಾರಿಯಮ್ಮ ದೇವಿಯ ಹೂವಿನ ಕರಗ ಮಹೋತ್ಸವ ಜರುಗಿತು. ಸರಿ ಸುಮಾರು 20 ಅಡಿ ಉದ್ದದ ತ್ರಿಶೂಲ ರೂಪಿ ಸರಳನ್ನು ಆ ಯುವಕ ಒಂದು ಕೆನ್ನೆಯಿಂದ ಮತ್ತೊಂದು ಕೆನ್ನೆಯನ್ನು ದಾಟುವಂತೆ ಚುಚ್ಚಿಕೊಂಡು ರಸ್ತೆಯಲ್ಲಿ ಸಾಗುತಿದ್ದರೆ ಅಲ್ಲಿ ನೆರೆದಿದ್ದ ಜನ ಆಶ್ಚರ್ಯದಿಂದ ಈ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು.

ದೇವಿಗೆ ಹರಕೆ ಹೊತ್ತಿದ್ದ ಮಣಿ ಎಂಬ ಯುವಕ ಬಾಯಿ ಸುಮಾರು 20 ಅಡಿ ಉದ್ದದ ತ್ರಿಶೂಲವನ್ನು ಬಾಯಿಗೆ ಚುಚ್ಚಿಕೊಂಡು ಸುಮಾರು ಅರ್ಧ ಕಿಲೋಮೀಟರ್ ಹೆಚ್ಚು ದೂರ ಕ್ರಮಿಸಿ ಮುತ್ತುಮಾರಿಯಮ್ಮ ಸನ್ನಿದಾನಕ್ಕೆ ಬಂದು ಬಾಯಿ ಬೀಗದ ಹೆಸರಿನಲ್ಲಿ ಭಕ್ತಿ ಸಮರ್ಪಿಸಿದ. ಈ ಯುವಕನ ಭಕ್ತಿ ಪರಾಕಾಷ್ಠೆಗೆ ನೆರೆದಿದ್ದ ಭಕ್ತರು ಮೂಕವಿಸ್ಮಿತರಾಗಿದ್ದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಅಜಯ್‌ಕುಮಾರ್, ಎಸ್.ಟಿ.ವೀರೇಶ್ ಮತ್ತು ಬೆಳ್ಳೂಡಿ ಪ್ರಕಾಶ್, ಮುತ್ತು ಮಾರಿಯಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಬಾಲರಾಜು, ಅರ್ಚಕರಾದ ಸುಬ್ಬಣ್ಣ, ನಟರಾಜ್, ಮಂಜುನಾಥ್, ರಾಮಪ್ಪ, ಸಂಪತ್ ಕುಮಾರ್, ಎಂ. ಮಲ್ಲಿಕಾರ್ಜುನ ಭಟ್ರು ಇತರರು ಉಪಸ್ಥಿತರಿದ್ದರು