

ಸ್ನೇಹಿತರೆ, ತಮ್ಮ ಹಾಸ್ಯ ಅಭಿನಯದಿಂದಲೇ ಕರ್ನಾಟಕ ಜನತೆಯ ಮನಗೆಲ್ಲುವಲ್ಲಿ ಯಶಸ್ವಿಯಾದ ನಯನ, ಶಿವರಾಜ್ ಕೆ ಆರ್ ಪೇಟೆ, ಗೋವಿಂದಗೌಡ, ಸೂರಜ್, ದಿವ್ಯಶ್ರೀ ಹೀಗೆ ಇಂತಹ ಹತ್ತು ಹಲವಾರು ಕಲಾವಿದರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯ ಅನಾವರಣ ಮಾಡುವ ಮೂಲಕ ಸದ್ಯ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದಾರೆ. ಹೀಗೆ ಕಾರ್ಯಕ್ರಮ ಯಶಸ್ವಿಯಾದ ಖುಷಿಯಲ್ಲಿ ಹಲವಾರು ಜೋಡಿಗಳು ಮದುವೆಯಾದರೂ..ಅವರಲ್ಲಿ ನಮ್ಮೆಲ್ಲರ ಪ್ರೀತಿಯ ಗೋವಿಂದಗೌಡ ಮತ್ತು ದಿವ್ಯಶ್ರೀ ಕೂಡ ಒಬ್ಬರು.
ಹೌದು ಚಿಕ್ಕಂದಿನಿಂದಲೂ ಒಟ್ಟಿಗೆ ಓದುತ್ತಾ ಆಡಿ ಬೆಳೆದಂತಹ ಇವರಿಬ್ಬರ ನಡುವೆ ಸ್ನೇಹ ಪ್ರೀತಿಗಳೆರಡು ಹೇರಳವಾಗಿತ್ತು. ಇದನ್ನು ಅರಿತುಕೊಂಡ ಅವರ ಮನೆಯವರು ಕಳೆದ ಒಂದೂವರೆ ವರ್ಷದ ಹಿಂದೆ ಮುದ್ದಾದ ಜೋಡಿಗೆ ಮದುವೆ ಮಾಡಿದರು. ಅದರಂತೆ ಇದೀಗ ಈ ಜೋಡಿಯ ಮನೆಗೆ ಮುದ್ದಾದ ಮಗುವಿನ ಆಗಮನ ಸದ್ಯದಲ್ಲೇ ಆಗಲಿದೆ ಎಂಬ ಸಿಹಿಸುದ್ದಿಯನ್ನು ಹಂಚಿಕೊಂಡ ಕೂಡಲೇ ನಟ ಜಗ್ಗೇಶ್, ನಟಿ ರಕ್ಷಿತಾ ಸೇರಿದಂತೆ ಚಿತ್ರರಂಗದ ಗಣ್ಯಾತಿಗಣ್ಯರು ಶುಭಹಾರೈಸಿದರು.
ಇನ್ನು ಮೊನ್ನೆಯಷ್ಟೇ ನಟಿ ದಿವ್ಯಶ್ರೀ ಅವರ ಸೀಮಂತ ಶಾಸ್ತ್ರ ನಡೆದಿದ್ದು, ಯಾವ ಖ್ಯಾತ ನಟರು ಬಂದು ಗರ್ಭಿಣಿಗೆ ಹರೈಸಿದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಜಿಜಿ ಎಂದೇ ಫೇಮಸ್ ಆಗಿದ್ದ ಗೋವಿಂದೇಗೌಡರು ಮತ್ತು ದಿವ್ಯ ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇದೀಗ ಶುಭಸುದ್ದಿ ಒಂದನ್ನು ಹೊರಹಾಕುವ ಮೂಲಕ ಪುಟ್ಟ ಮಗುವಿನ ಆಗಮನವನ್ನು ಎದುರು ನೋಡುತ್ತಿದ್ದಾರೆ. ಇನ್ನು ಸೀಮಂತ ಕಾರ್ಯಕ್ರಮದಲ್ಲಿ ದಿವ್ಯ ಅವರು ನೀಲಿ ಬಣ್ಣದ ಸೀರೆ ಹಾಕಿ ಮಿಂಚುತ್ತಿದ್ದಾರೆ, ಮಗುವಿನ ತಂದೆಯಾಗಲಿರುವ ಜಿಜಿ ಅವರು ಮರೂನ್ ಕಲರ್ ಅಂಗಿ ತೊಟ್ಟು ಪಂಚೆ ಹುಟ್ಟು ಫೋಟೋಗೆ ಫೋಸ್ ನೀಡಿದ್ದಾರೆ. ಈ ಎಲ್ಲಾ ಫೋಟೋಗಳನ್ನು ದಿವ್ಯ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಹಾಗೂ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ನಿಮಗೂ ಕೂಡ ಈ ಕಾಮಿಡಿ ಕಿಲಾಡಿಗಳು ಜೋಡಿ ಇಷ್ಟವಾಗಿದ್ದರೆ ತಪ್ಪದೇ ಎಸ್ ಎಂದು ನಮಗೆ ಕಮೆಂಟ್ ಮಾಡಿ.