

ಸ್ಯಾಂಡಲ್‌ವುಡ್ ಕಲಾವಿದರಾದ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಜೋಡಿಯ ಕಲ್ಯಾಣ ನೆರವೇರಿದೆ. ಎರಡೂ ಕುಟುಂಬಗಳ ಆಪ್ತರು, ಸ್ನೇಹಿತರು, ಸಿನಿಮಾ ಮಂದಿಯ ಸಮ್ಮುಖದಲ್ಲಿ ಕೊಡಗಿನ ವಿರಾಜಪೇಟೆಯ ಅಮ್ಮತ್ತಿಯ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ವಿವಾಹ ಕಾರ್ಯ ನೆರವೇರಿದೆ.

ಮೆಹೆಂದಿ, ಅರಿಶಿಣ, ಸಂಗೀತ ಹೀಗೆ ಹಲವು ಕಾರ್ಯಕ್ರಮಗಳನ್ನು ಮುಗಿಸಿಕೊಂಡ ಬಳಿಕ ಇಂದು ಕೊಡವ ಶೈಲಿಯಲ್ಲಿಯೇ ಸೀರೆಯುಟ್ಟು, ಅಲಂಕಾರ ಮಾಡಿಕೊಂಡು ಮದುಮಗಳಾಗಿ ಮಿಂಚಿದ್ದಾರೆ. ಈ ಜೋಡಿಯ ಮದುವೆಗೆ ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ಆಗಮಿಸಿದ್ದಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಹ ಆಗಮಿಸಿ ಆಶೀರ್ವಾದ ಮಾಡಿದ್ದಾರೆ.

ಅದರಲ್ಲೂ ಹರ್ಷಿಕಾಗೆ ದುಬಾರಿ ಚಿನ್ನದ ನೆಕ್ಕಲೇಸ್ ಗಿಫ್ಟ್ ಕೊಟ್ಟ ಗಣೇಶ್