ವಂಡರ್‌ಲಾದಲ್ಲಿ ಹೊಸ ರೈಡ್‌ಗೆ ಚಾಲನೆ ನೀಡಿದ ನಟ ಡಾರ್ಲಿಂಗ್‌ ಕೃಷ್ಣ


ಬೆಂಗಳೂರು : ಮನರಂಜನಾ ತಾಣವಾದ ವಂಡರ್‌ಲಾ ಜನರನ್ನು ಇನ್ನಷ್ಟು ರಂಜಿಸಲು ಹೊಸ ರೈಡ್‌ನನ್ನು ಪರಿಚಯಿಸಿದೆ.

ಗುರುವಾರ ನಟ ಡಾಲಿಂಗ್‌ ಕೃಷ್ಣ “ಟಾರಾಂಟುಲಾ” ಹೆಸರಿನ ಈ ಹೊಸ ರೈಡ್‌ನನ್ನು ಉದ್ಘಾಟಿಸಿ, ಒಂದು ಸುತ್ತಿನ ರೈಡ್‌ ನಡೆಸಿ ಅದರ ಅನುಭವ ಪಡೆದರು.

ಬಳಿಕ ಮಾತನಾಡಿದ ಅವರು, ವಂಡರ್‌ಲಾ ಪರಿಚಯಿಸಿರುವ ಹೊಸ ರೈಡ್‌ ಹೆಚ್ಚು ಮಜ ನೀಡಿತು. ಜನರಿಗೆ ಥ್ರಿಲ್‌ ನೀಡುವ ರೈಡ್‌ ಎಂದರೆ ಆಸಕ್ತಿ ಹೆಚ್ಚು. ಅದರಲ್ಲೂ ಬೇಸಿಗೆ ರಜೆಯಾದ್ದರಿಂದ ಮಕ್ಕಳು ಹೆಚ್ಚು ಖುಷಿಯಿಂದ ವಂಡರ್‌ಲಾಗೆ ಭೇಟಿ ನೀಡುತ್ತಾರೆ.
ಅಂಥವರಿಗೆ ಈ ರೈಡ್‌ ಇಷ್ಟವಾಗಲಿದೆ ಎಂದರು.

ವಂಡರ್‌ಲಾ ಎಂಡಿ ಅರುಣ್‌ ಕೆ. ಚಿಟ್ಟಿಲಪಲ್ಲಿ ಮಾತನಾಡಿ, ಜನರಿಗೆ ಇಷ್ಟವಾಗುವ ರೀತಿ ಟಾರಾಂಟುಲಾ ರೈಡ್‌ನನ್ನು ವಿನ್ಯಾಸಗೊಳಿಸಿದ್ದು, ಜನರಿಗೆ ಖಂಡಿತ ಈ ಹೈ ಥ್ರಿಲ್ ರೈಡ್‌ ಇಷ್ಟವಾಗಲಿದೆ. ಏಪ್ರಿಲ್‌ 9 ರಿಂದ ಮೇ 31ರವರೆಗೆ “ಸಮ್ಮರ್‌ ಲಾ” ಉತ್ಸವವನ್ನು ವಂಡರ್‌ಲಾ ನಡೆಸುತ್ತಿದೆ. ವಂಡರ್‌ಲಾದಲ್ಲಿರುವ 62 ರೈಡ್‌ಗಳು ನಿಮ್ಮನ್ನು ಇನ್ನಷ್ಟು ಮನರಂಜಿಸಲಿದೆ ಎಂದರು.

ಹೊಸ ಗೇಮ್‌ನ ವಿಶೇಷತೆ ಏನು?:
ಟಾರಾಂಟುಲಾ ಎಂದರೆ ಜೇಡರ ಬಲೆ, ಈ ಬಲೆಯಲ್ಲಿ ಸಿಲುಕಿದರೆ ಆಗುವ ಅನುಭವವನ್ನು ಟಾರಾಂಟುಲಾ ರೈಡ್‌ ನೀಡಲಿದೆ. ಈ ರೈಡ್ ಪೂರ್ಣವಾಗಿ ಪಿಎಲ್‌ಸಿ(ಪ್ರೋಗ್ರಾಮಬಲ್ ಲಾಜಿಕ್ ಕಂಟ್ರೋಲರ್)
ನಿಯಂತ್ರಣದಲ್ಲಿದೆ ಮತ್ತು ಸೇಫ್ಟಿ ಬೆಲ್ಟ್‌ನೊಂದಿಗೆ ಸೇಫ್ಟಿ ಶೌಲ್ಡರ್ ಲಾಕ್‌ಗಳು ಸುರಕ್ಷಿತ ರೈಡ್ ನೀಡುತ್ತವೆ. ಇದು ಒಮ್ಮೆಲೆ ೩೨ ಜನರನ್ನು ಹೊತ್ತೊಯ್ಯಲಿದೆ.

  • Related Posts

    ಸಮಾಜವಾದಿ ಯುವಜನ ಸಭಾ ಅಧ್ಯಕ್ಷ ಆನಂದ್ ಸಿ ತಿರುಮಲ ನೇತೃತ್ವದಲ್ಲಿ ಪಕ್ಷ ಸೇರ್ಪಡೆ

    ಬೆಂಗಳೂರು, 31, ಜೂಲೈ 2025, ಆನೇಕಲ್:- ಮಹಿಳೆಯರು ಸಾಮಾಜಿಕ ಶೋಷಣೆ ಯಿಂದ ಹೊರಗಡೆ ಬಂದು ತಮ್ಮ ಮೂಲಭೂತ ಹಕ್ಕುಗಳಿಗೆ ಹೋರಾಟ ಮಾಡಬೇಕು ಎಂದು ಸಮಾಜವಾದಿ ಪಾರ್ಟಿ ರಾಜ್ಯ ಯುವಜನ ಸಭಾ ಅಧ್ಯಕ್ಷ ಆನಂದ್ ಸಿ ತಿರುಮಲ ಹೇಳಿದರು. ಅವರು ಬೆಂಗಳೂರು ದಕ್ಷಿಣ…

    ವಿಧಾನ ಪರಿಷತ್ ಸದ್ಯಸ ಬಿ ಕೆ ಹರಿಪ್ರಸಾದ್ ಹುಟ್ಟುಹಬ್ಬ – ಶುಭ ಕೋರಿದ ಸಮಾಜವಾದಿ ನಾಯಕರು

    ಬೆಂಗಳೂರು, ಬಿ ಕೆ ಹರಿಪ್ರಸಾದ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ತಿಳಿಸಿದ ಸಮಾಜವಾದಿ ಪಾರ್ಟಿ ರಾಜ್ಯ ಅಧ್ಯಕ್ಷ ಎನ್ ಮಂಜಪ್ಪ ಮತ್ತು ಯುವಜನ ಸಭಾ ಅಧ್ಯಕ್ಷ ಆನಂದ್ ಸಿ ತಿರುಮಲ ಶುಭಾಶಯಗಳು ಕೋರಿದರು ಕಳೆದ ಸುಮಾರು ವರ್ಷಗಳು ಸಾಮಾಜಿಕ ಹೋರಾಟದಲ್ಲಿ ಜನರ ಮಧ್ಯ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!