
೨೬ ಜೂಲೈ ೨೦೨೫, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ತಾಲ್ಲೂಕು ಘಟಕ ಇಂದು ಶಿವಮೊಗ್ಗದ ವಿನೋಬನಗರದ ಸ್ವಗೃಹದಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಘೋಷಣೆ ಹಾಗೂ ವಿವಿಧ ಘಟಕಗಳ ಜವಾಬ್ದಾರಿ ಹಂಚಿಕೆ ಸಮಾರಂಭದಲ್ಲಿ ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಈ ವೇಳೆ ಬಿ. ವೈ. ರಾಘವೇಂದ್ರರವರು ವೀರಶೈವ ಲಿಂಗಾಯತ ಸಮುದಾಯದ ಸುದೀರ್ಘ ಇತಿಹಾಸ, ಗುರು ಪರಂಪರೆ, ಸಮಾಜದ ಮುಖ್ಯವಾಹಿನಿಯಲ್ಲಿ ಮಠಗಳು ತೋರುತ್ತಿರುವ ಪಾತ್ರ, ದಾಸೋಹದ ಮಹತ್ವ, ನಿರಂತರ ಶಿಕ್ಷಣ, ಆರೋಗ್ಯ ಸೇವೆಗಳು ಸೇರಿದಂತೆ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ವೀರಶೈವ ಲಿಂಗಾಯತ ಸಮುದಾಯ ತೋರುತ್ತಿರುವ ಬಹುಮುಖ್ಯ ಪಾತ್ರಗಳ ಬಗ್ಗೆ ಹಾಗೂ ಸಮುದಾಯ ಕಟ್ಟಲು ಒಗ್ಗಟ್ಟಿನ ಮಂತ್ರದ ಮೂಲಕ ಸಂಘಟಿಸುವ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ಬಳ್ಳೇಕೆರೆ ಸಂತೋಷ್ ಅವರು, ಶ್ರೀ ಮಲ್ಲಿಕಾರ್ಜುನ್ ಅವರು, ಶ್ರೀಮತಿ ಅನಿತಾ ರವಿಶಂಕರ್ ಅವರು, ಶ್ರೀಮತಿ ಗೀತಾ ರವೀಂದ್ರ ಅವರು, ಶ್ರೀ ನವೀನ್ ವಾರದ್ ಅವರು ಸೇರಿದಂತೆ ಅನೇಕ ಹಿರಿಯರು ಉಪಸ್ಥಿತರಿದ್ದರು.










