
ಬಿ. ವೈ. ರಾಘವೇಂದ್ರರವರು ಶಿವಮೊಗ್ಗ ಕ್ಷೇತ್ರದ ಪ್ರಮುಖ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಯ ಕುರಿತು ಹಿಂದಿನ ಪ್ರಸ್ತಾವನೆಯನ್ನು ಮುಂದುವರಿಸಲು ದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಜಿ ಅವರನ್ನು ಭೇಟಿ ಮಾಡಿ ಮಾತನಾಡಿಯಾರು.
ರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ವಿಶೇಷ ನೆರವಿನ ಅಡಿಯಲ್ಲಿ ಪಡುವಾರ್ಲ್ – ಸೋಮೇಶ್ವರ – ಕೊಲ್ಲೂರು ಆಧ್ಯಾತ್ಮಿಕ ಪ್ರವಾಸೋದ್ಯಮ ಕ್ಲಸ್ಟರ್ ಅನ್ನು ಸ್ಥಾಪಿಸುವ ಜೊತೆಗೆ ವಿಶ್ವದ ಅತಿ ಎತ್ತರದ ಶ್ರೀ ಬಾಲ ಸುಬ್ರಹ್ಮಣ್ಯ ಸ್ವಾಮಿ ಪ್ರತಿಮೆಯ ನಿರ್ಮಾಣ ಮತ್ತು ಶಿವಮೊಗ್ಗದ ಇಸ್ಲಾಪುರದಲ್ಲಿ ಅಗತ್ಯ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳುವ ವಿನಂತಿಯನ್ನು ಮಾಡಿಕೊಂಡರು.

ಶಿವಮೊಗ್ಗದ ಪ್ರವಾಸೋದ್ಯಮ ಬೆಳವಣಿಗೆಗೆ ಈ ಯೋಜನೆಗಳಿಗೆ ನಿರಂತರ ಬೆಂಬಲ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಗಾಗಿ ಮಾನ್ಯ ಸಚಿವರಿಗೆ ಧನ್ಯವಾದ ವೆಕ್ತಪಡಿಸಿದರು.









