

ಕೊಳ್ಳೇಗಾಲ,
ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳ ತಾಲೂಕು ಮಟ್ಟದ ಕಚೇರಿಯನ್ನು ಮಾನ್ಯ ಶಾಸಕರಾದ ಎ. ಆರ್. ಕೃಷ್ಣಮೂರ್ತಿ ರವರು ಉದ್ಘಾಟನೆ ಮಾಡಿದರು.*
ಈ ಸಂದರ್ಭದಲ್ಲಿ ಶ್ರೀಯುತ ಚಂದ್ರು ರವರು, ಜಿಲ್ಲಾ ಮಟ್ಟದ ಗ್ಯಾರೆಂಟಿ ಸಮಿತಿ ಅಧ್ಯಕ್ಷರು, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ರಾಜೇಂದ್ರ ರವರು, ಸದಸ್ಯ ಕಾರ್ಯದರ್ಶಿಯವರಾದ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಗುರು ಶಾಂತಪ್ಪ ಬೆಳ್ಳುಂಡಗಿ ರವರು, ತಹಸಿಲ್ದಾರರಾದ ಬಸವರಾಜುರವರು, ತಾಲೂಕು ಗ್ಯಾರೆಂಟಿ ಸಮಿತಿಯ ಎಲ್ಲಾ ಸದಸ್ಯರು, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಮತ್ತು ತಾಲೂಕು ಮಟ್ಟದ ಪ್ರಥಮ ಸಭೆಯನ್ನು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ರಾಜೇಂದ್ರ ರವರ ಅಧ್ಯಕ್ಷತೆಯಲ್ಲಿ , ಮತ್ತು ಸದಸ್ಯ ಕಾರ್ಯದರ್ಶಿ ರವರಾದ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ರವರಾದ ಗುರುಶಾಂತಪ್ಪ ಬೆಳ್ಳುಂಡಗಿರವರು ನಡೆಸಿದರು
ಈ ಸಂದರ್ಭದಲ್ಲಿ 5 ಗ್ಯಾರೆಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಸಿಡಿಪಿಒ ನಂಜಮಣಿ ಯವರು, ಚೆಸ್ಕಾಂ ಇಲಾಖೆಯ ರಾಜು, ಯುವನಿಧಿ ಯೋಜನೆ ಯ ವಿಶ್ವನಾಥ್, ಕೌಶಲ್ಯ ಇಲಾಖೆಯ ಅಕ್ಮಲ್ಫ್ ಪಾಷ, ksrtc ಇಲಾಖೆಯ ಶಂಕರ್ ರವರು ಮತ್ತು ತಾಲ್ಲೂಕು ಗ್ಯಾರಂಟಿ ಯೋಜನೆಯ ಎಲ್ಲಾ ಸದಸ್ಯರು ಉಪಸ್ಥಿತ ರಿದ್ದರು