

ಚಾಮರಾಜನಗರ,
ಈ ಕೊಡುಗಲ್ಲು ಮಾದಪ್ಪನ ಪರಮ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದ ಕಾಡೋಲ ಗ್ರಾಮದ ಉತ್ತರ ದಿಕ್ಕಿನ ಬೆಟ್ಟದಲ್ಲಿ ಇದ್ದು ಸಾಲೂರು ಮಠದಿಂದ ಸುಮಾರು 2 ಕಿ.ಮಿ ದೂರದಲ್ಲಿದೆ.

ಈ ಪುಣ್ಯಕ್ಷೇತ್ರದಲ್ಲಿ ಪವಾಡಗಳನ್ನು ಮಾಡಿರುವ ಮಾದಪ್ಪ ಸ್ವಾಮಿಯನ್ನು ಕೊಡುಗಲ್ಲ ದೇವಾ ಮದೇವ, ಕೊಡುಗಲ್ಲ ಮುನಿಯೇ ಮಹಾದೇವ, ಕೊರಣ್ಯ ನೀಡಮ್ಮ ಕೊಡುಗಲ್ಲು ಮದೇವನಿಗೆ ಎಂಬತ್ತೆ ಮಾದಪ್ಪ ಭಕ್ತರು ನಾನ ಹೆಸರುಗಳಿಂದ ಮನದಲ್ಲಿ ನೆನೆಯುತ್ತಾ ಭಕ್ತಿಯಿಂದ ಹಾಡಿ ಪೂಜಿಸುವರು.
ಈ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಸ್ವಾಮಿಯ ದೇವಾಲಯ ದಿಂದ ಸುಮಾರು 3 ರಿಂದ 5 ಕಿ.ಮಿ.ದೂರದ ಬೆಟ್ಟದಲ್ಲಿ ಇದೆ.

ಬೇಡರ ಕುಲದ ನೀಲಯ್ಯಾ ಹೆಜ್ಜೇನು ಬೇಟೆಗೆ ಹೋಗುವ ಸಮಯದಲ್ಲಿ ಶಿವಶರಣೆ ಶಂಕಮ್ಮನನ್ನು ವಿಚಿತ್ರವಾಗಿ ಅವಳಿಗೆ ಹಿಂಸೆಯನ್ನು ಕೊಟ್ಟು ಬಂಧಿಸಿ ಹೋಗುವ ಸಮಯದಲ್ಲಿ ಶಂಕಮ್ಮನ ಮನೆಯ ದೇವರು ಮಾದಪ್ಪನ ನೆನೆದು ಮಲೆಯ ಮಾಯ್ಕಾರ ಶಿವ ಶರಣೆ ಶಂಕಮ್ಮನನ್ನು ಪಾರು ಮಾಡಲು ಈ ಪವಿತ್ರ ಕ್ಷೇತ್ರದಿಂದ ಹೋರಟ ಪರಿಣಾಮವಾಗಿ ಈ ಕೊಡುಗಲ್ಲು ಪುಣ್ಯಕ್ಷೇತ್ರ ಪವಾಡ ನೆಲೆಯಾಗಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ಕೊಡುಗಲ್ಲು ಬೆಟ್ಟದಲ್ಲಿ ಇರುವ ಮಾದಪ್ಪ ದರ್ಶನ ಪಡೆಯಲ್ಲು ಬಂದು ತಮ್ಮ ತಮ್ಮ ಕಷ್ಟ ಕಾಪಣ್ಯಗಳನ್ನು ದೂರ ಮಾಡಿಕೂಂಡು ದನ್ಯರಾಗಿದ್ದಾರೆ.
ಉಘೇ..ಉಘೇ..ಉಘೇ... ಕೊಡುಗಲ್ಲು ಮಹಾದೇವ ಮಾದಪ್ಪ ನೀಮ್ಮ ಪಾದಕ್ಕೆ ಶರಣೊ ಶರಣಯ್ಯಾ...
ಕೊರಣ್ಯ ನೀಮ್ಮ ಕೊಡುಗಲ್ಲು ಮಾದೇವನಿಗೆ….