ಕಂಪ್ಲಿ ತಾಲೂಕಿನ ನೂತನ ವಕೀಲರಿಗೆ ಸನ್ಮಾನ

ಕಂಪ್ಲಿ: 30, ಪಟ್ಟಣದ ಬಸವಶ್ರೀ ನಿಲಯದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ನೂತನ ವಕೀಲರಿಗೆ ಸನ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಕಕ್ಷಿದಾರರ ಹಿತ ಮತ್ತು ಸಾಮಾಜಿಕ ಪರಿಕಲ್ಪನೆಯಡಿ ಮಹತ್ತರ ಪಾತ್ರವಹಿಸಿ, ಯಾವುದೇ ಅಸೆ ಆಮೀಷಗಳಿಗೆ ಬಲಿಯಾಗದಂತೆ ವೃತ್ತಿಯಲ್ಲಿ ತೊಡಬೇಕೆಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಡಾ.ಎ.ಸಿ.ದಾನಪ್ಪನವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ನಿರಂತರ ಕಲಿಕೆ, ಜನ ಸಂಪರ್ಕದಿಂದ ಮತ್ತು ಅನ್ಯಾಯಕ್ಕೊಳಗಾದವರ ಧ್ವನಿಯಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದಲ್ಲಿ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯವೆಂದು ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ತಿಳಿಸಿದರು.

ಅತಿಥಿಯಾಗಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಕೆ. ಶಿವಕುಮಾರ್ ಉಪಸ್ಥಿತಿಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಕಂಪ್ಲಿ ತಾಲೂಕು ವ್ಯಾಪ್ತಿಯಲ್ಲಿ 2024-25 ನೇ ಸಾಲಿನಲ್ಲಿ ಕಾನೂನು ಪದವಿ ಮುಗಿಸಿ ನೂತನವಾಗಿ ವಕೀಲ ವೃತ್ತಿ ಪ್ರಾರಂಭಿಸಿದ ಕಂಪ್ಲಿಯ ಮನೋಜ್ ಕುಮಾರ್ ದಾನಪ್ಪ, ರೋಶನ್ ಯಾಳ್ಪಿ, ಎನ್. ಸೈಯದ್ ವಾರೀಶ್, ವಿ.ಟಿ.ಮೇಘ, ದೇವಲಾಪುರದ ಛಲವಾದಿ ಹುಲಿಗೆಮ್ಮ, ಸೋಮಲಾಪುರ ಗ್ರಾಮದ ಸಿ.ರವಿ ಚಂದ್ರ, ಲಕ್ಷ್ಮಿಕಾಂತ್ ಇವರಿಗೆ ಪಟ್ಟಣದಲ್ಲಿ ಸನ್ಮಾನಿಸಿ ಅಭಿನಂದಿಸಿದರು!

  • Related Posts

    ಬಳ್ಳಾರಿಯ ಸರಕಾರಿ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು

    ಬಳ್ಳಾರಿ ನಗರದ ಸರಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಒಕ್ಕೂಟದಸಂಸ್ಥೆಯ ವತಿಯಿಂದ ಗಣರಾಜ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಶ್ರೀ ನಾಗರಾಜ್ ಕೆ.ಜಿ ರವರು ಧ್ವಜಾರೋಹಣವನ್ನು ನೇರವೇರಿಸಿ,ದಿನವನ್ನು ಒಕ್ಕೂಟ ಹಬ್ಬವಾಗಿ ಹಾಗೂ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಸ್ಪರ್ಧೇಗಳನ್ನು ಏರ್ಪಡಿಸುವ…

    ಮಳೆಯಾಗದ ಹಿನ್ನೆಲೆ .ಭದ್ರಾ ಜಲಾಶಯದ ಒಳ ಹರಿವಿನಲ್ಲಿ ಇಳಿಕೆ

    ಬಳ್ಳಾರಿ: ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಇಳಿಕೆ ಆದ ಕಾರಣ ಜಲಾಶಯದ ಒಳ ಹರಿವಿನಲ್ಲಿ ಇಳಿಕೆಆಗಿದು. ನಿನ್ನೆ 3647 ಕ್ಯೂಸೆಕ್ ಇದ್ದ ಒಳ ಹರಿವು, ಇಂದು 2395 ಕ್ಯೂಸೆಕ್ ಗೆ ಇಳಿದಿದೆ. ಇಂದು ಜಲಾಶಯದ ಹೊರ ಹರಿವು 2881 ಕ್ಯೂಸೆಕ್…

    Leave a Reply

    Your email address will not be published. Required fields are marked *

    error: Content is protected !!