

ಬಳ್ಳಾರಿ ನಗರದ ಸರಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಒಕ್ಕೂಟದ
ಸಂಸ್ಥೆಯ ವತಿಯಿಂದ ಗಣರಾಜ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಶ್ರೀ ನಾಗರಾಜ್ ಕೆ.ಜಿ ರವರು ಧ್ವಜಾರೋಹಣವನ್ನು ನೇರವೇರಿಸಿ,
ದಿನವನ್ನು ಒಕ್ಕೂಟ ಹಬ್ಬವಾಗಿ ಹಾಗೂ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಸ್ಪರ್ಧೇಗಳನ್ನು ಏರ್ಪಡಿಸುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಹುಮಾನ ವಿತರಣೆ ಮಾಡುತ್ತಿರುವುದು ತುಂಬಾ ಒಳ್ಳೇಯ ಕಾರ್ಯ, ಈ ಮೂಲಕ ಮಕ್ಕಳಿಗೆ ಧೈರ್ಯ ತುಂಬಿದಂತಾಗುತ್ತದೆ ಹಾಗೂ ಮಕ್ಕಳ ಬೆಳವಣಿಗೆಯಲ್ಲಿ ಮನ ಪರಿವರ್ತನೆಗೆ ಸಹಕಾರಿಯಾಗಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಾವೆಲ್ಲರೂ ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಸ್ಮರಿಸುತ್ತಾ ತಪ್ಪದೇ ಎಲ್ಲರೂ ಸಂವಿಧಾನವನ್ನು ಗೌರವಿಸಬೇಕು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ನಿವೃತ್ತ ಅರೇ ಸೇನಾಪಡೆಯ ಸೈನಿಕರಾದ ಶ್ರೀ ಗವಿಸಿದ್ದಪ್ಪ ರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ಶ್ರೀ ಬಿ.ಎಸ್.ಪ್ರಹ್ಲಾದ್ ರೆಡ್ಡಿ ನಿವೃತ್ತ ಸೈನಿಕರು ಮಾತಾಡಿ ದೇಶಕ್ಕಾಗಿ ದುಡಿದ ಮಡಿದ ಮಹನೀಯರ ಜೀವನವನ್ನು ಆದರ್ಶವಾಗಿ ಇಟ್ಟುಕೊಂಡು ಸಾಗಬೇಕಿದೆ ಎಂದು ತಿಳಿಸಿದರು. ಮಾಜಿ ಸೈನಿಕರನ್ನು ಕರೆಸಿ ಗೌರವಿಸುವ ಸಂಸ್ಥೆಯ ಕಾರ್ಯ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.

ಕಾರ್ಯಕ್ರಮದ ಅತಿಥಿಗಳಾಗಿ ಶ್ರೀ ರಘುನಾಥ್ ರಾವ್ ನಿವೃತ್ತ ಅಧೀಕ್ಷಕರು ತಾಂತ್ರಿಕ ಶಿಕ್ಷಣ ಇಲಾಖೆ ರವರು ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನಯ್ ರವರು ಮಾತಾಡಿ ಸಂವಿಧಾನದ ಬಗ್ಗೆ ಎಲ್ಲಾರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕಿದೆ, ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಜೊತೆಗೆ ಕರ್ತವ್ಯಗಳನ್ನು ಅರಿತು ಸಾಗಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಗುರುಸ್ವಾಮಿ ಶಿಕ್ಷಕರು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು,ಸಿಬ್ಬಂದಿ ವರ್ಗದವರು ಹಾಗೂ ಸಂಸ್ಥೆಯ ಕಾರ್ಯನಿರ್ವಾಹಕರಾದ ಕೆಂಚಪ್ಪ, ಸುರೇಶ್, ಅಜಿತ್ ಕುಮಾರ್, ಜಿ.ಶಿವರಾಜ್,ಅನಿನಾಶ್, ವೀರೇಶ್,ದಕ್ಷಿಣ ಮೂರ್ತಿ,ಮಾರುತಿ, ಚಿರಂಜೀವಿ,ವೆಂಕಟೇಶ್,ಹರ್ಷವರ್ಧನ ಮತ್ತು ಇತರರು ಪಾಲ್ಗೋಂಡಿದ್ದರು.