


ದಾವಣಗೆರೆ ಜಿಲ್ಲೆ ರವರು ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕನೂರು ಗ್ರಾಮದಲ್ಲಿ ಸರಗಳ್ಳತನ ನಡೆದ ಸ್ಥಳಕ್ಕೆ ಭೇಟಿ ನೀಡಿ ನಂತರ ಸರಗಳ್ಳತನ ಪ್ರರಕಣದಲ್ಲಿನ ಸಂತ್ರಸ್ಥೆಯನ್ನು ಭೇಟಿ ಮಾಡಿ ಸರಗಳ್ಳತನದ ಘಟನೆಬಗ್ಗೆ ಮಾಹಿತಿ ಪಡೆದು ಸದರಿ ಪ್ರಕರದ ಆರೋಪಿತರ ಪತ್ತೆಗೆ ಪೊಲೀಸ್ ಅಧೀಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು.
ನಂತರ ಕೊಕ್ಕನೂರು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಮಲೆಬೆನ್ನುರು ಪೊಲೀಸ್ ಹಾಗೂ ಕೊಕ್ಕನೂರು ಗ್ರಾಮ ಪಂಚಾಯ್ತಯ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳ ಸಹಯೋಗದೊಂದಿಗೆ ಹಾಗೂ ಕೊಕ್ಕನೂರು ಗ್ರಾಮಸ್ಥರೊಂದಿಗೆ ಹಮ್ಮಿಕೊಂಡಿದ್ದ ಪೊಲೀಸ್ “ಜನಸಂಪರ್ಕ ಸಭೆ” ಯಲ್ಲಿ ಭಾಗವಹಿಸಿ, ಗ್ರಾಮಸ್ಥರ ಅವಹಾಲಗಳನ್ನು ಸ್ವೀಕರಿಸಿ, ಸಾರ್ವಜನಿಕರಿಗೆ ಅಪರಾಧಗಳನ್ನು ತಡೆಗಟ್ಟಲು ವಹಿಸಬೇಕಾದ ಮುನ್ನಚರಿಕೆ ಕ್ರಮಗಳ ಬಗ್ಗೆ, ಕಳ್ಳತನ, ದರೋಡೆ, ಸುಲಿಗೆಯ ಬಗ್ಗೆ, ಬಾಲ್ಯವಿವಾಹ, ಫೋಕ್ಲೋ ಕಾಯ್ದೆ, ಮಹಳೆ ದೌರ್ಜನ್ಯ ರಕ್ಷಣಾ ಕಾಯ್ದೆ, ಸೈಬರ್ ಅಪರಾಧಗಳ ಬಗ್ಗೆ, ಸಂಚಾರ ನಿಯಮಗಳ ಬಗ್ಗೆ, ಮೈಕ್ರೋ ಫೈನಾನ್ಸ್ ಬಗ್ಗೆ ERSS-112 ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಗ್ರಾಮ ವ್ಯಾಪ್ತಿಯಲ್ಲಿ ಪ್ರಮುಖ ಬೀದಿಗಳಲ್ಲಿ ಹಾಗೂ ಸ್ಥಳಗಳಲ್ಲಿ ಸಿಸಿಟಿವಿ ಆಳವಡಿಸಿಕೊಳ್ಳಲು ತಿಳಿಸಿದರು ಹಾಗೂ ಸಿಸಿಟಿವಿ ಅಳವಡಿಕೆಯಿಂದ ಅಪರಾಧಗಳನ್ನು ತಡೆಗಟ್ಟಲು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಲು ತುಂಬಾ ಸಹಾಕಾರಿಯಾಗುತ್ತದೆ ಎಂದು ತಿಳಿಸಿದರು.
. ಈ ಸಭೆಯಲ್ಲಿ 03 ದಿನಗಳ ಹಿಂದೆ ದಾವಣಗೆರೆ ವಾಸಿ ಪ್ರಶಾಂತ ತಮ್ಮ ಮೊಬೈಲ್‌ನ್ನು ಕಳೆದುಕೊಂಡಿದ್ದು, ಪ್ರಶಾಂತ ರವರ ಮೊಬೈಲ್‌ನ್ನು CEIR ಪೋರ್ಟ್‌ಲ್ನ ಸಹಾಯದಿಂದ ಪತ್ತೆ ಮಾಡಿ ಪ್ರಶಾಂತ ರವರಿಗೆ ಹಸ್ತಾಂತರಿಸಿ, CEIR ಪೋರ್ಟ್‌ಲ್ನ ಸದುಪಯೋಗ ಪಡಿಸಿಕೊಳ್ಳಲು ತಿಳುವಳಿಕೆ ನೀಡಲಾಯ್ತು.
ಈ ಸಭೆಯಲ್ಲಿ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಸವರಾಜ್ ಬಿ.ಎಸ್ ರವರು, ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ ಸಗರಿ ಮತ್ತು ಪಿ.ಎಸ್.ಐ (ಕಾ.ಸು) ಶ್ರೀ ಪ್ರಭು ಡಿ ಕೆಳಗಿನಮನಿ. ಶ್ರೀ ಚಿದಾನಂದಪ್ಪ ಪಿ.ಎಸ್.ಐ (ತನಿಖೆ) ರವರುಗಳು ಹಾಗೂ ಕೊಕ್ಕನೂರು ಗ್ರಾಮಸ್ಥರು, ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.