

ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಮೊಕದ್ದಮೆ ಸಂಖ್ಯೆ 49/2023 ಕಲಂ 379 ಐಪಿಸಿ ಪ್ರಕರಣದ ನೇದ್ದರಲ್ಲಿ ದಿನಾಂಕ 03-09-2023 ರಂದು ಕಳವು ಪ್ರಕರಣ ವರದಿಯಾಗಿದ್ದು ಸದರಿ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆ ಸಂಬಂಧ ಮಾನ್ಯ ಶ್ರೀ ರವಿಕುಮಾರ್ ಡಿ ವೈ ಎಸ್ ಪಿ ರೈಲ್ವೆ ಉಪ ವಿಭಾಗ ಬೆಂಗಳೂರು ರವರ ಸೂಕ್ತ ಮಾರ್ಗದರ್ಶನದಲ್ಲಿ ಠಾಣಾ ಪ್ರಕರಣದ ತನಿಖಾಧಿಕಾರಿಯಾದ ಶ್ರೀ ಅಣ್ಣಯ್ಯ ಕೆ ಟಿ ಪೊಲೀಸ್ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ದಾವಣಗೆರೆ ರವರ ನೇತೃತ್ವದಲ್ಲಿ ಠಾಣಾ ಅಪರಾಧ ವಿಭಾಗದ ಸಿಬ್ಬಂದಿ ರವರಾದ ಶ್ರೀ ನಾಗರಾಜು ಜಿ, ಎ ಎಸ್ ಐ, ಶ್ರೀನಿವಾಸ್ ಎಚ್, ಸಿ ಪಿ ದಿನೇಶ್, ಹರೀಶ್ ಡಿ, ಹನುಮಂತಪ್ಪ ಭಜಂತ್ರಿ, ಈರನಾಗಪ್ಪ ಮುಖ್ಯಆರಕ್ಷಕರುಗಳು ಮತ್ತು ಹಾಲೇಶ್ ಬಿ ಏನ್ , ಚೇತನ್ ಟಿ ಆರ್, ಹಾಲೇಶ್ ಬಿ ಜೆ, ತಿಪ್ಪೇಸ್ವಾಮಿ ಜಿ, ಸುನೀಲ್ ಆರ್, ಮಂಜುನಾಥ್ ಭೋವಿ, ಚೇತನ್ ಬಿ ಎನ್, ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ ಸಿಬ್ಬಂದಿರವರಾದ ಈಶ್ವರೇಗೌಡ, ಬರ್ಕತ್ ಅಲಿ, ಮತ್ತು ದಾವಣಗೆರೆ ನಗರದ ಸ್ಮಾರ್ಟ್ ಸಿಟಿ ಕಮಾಂಡೆಂಟ್ ಕಚೇರಿಯ ಸಿಬ್ಬಂದಿರವರಾದ ಶ್ರೀ ಮಾರುತಿ ಮತ್ತು ದೇವರಾಜ್ ಹಾಗೂ ದಾವಣಗೆರೆ ನಗರದ ಎಸ್. ಬಿ. ಐ ಮಂಡಿಪೇಟೆ ಬ್ರಾಂಚ್ ಬ್ಯಾಂಕ್ ಮ್ಯಾನೇಜರ್ ರವರಾದ ಶ್ರೀ ಅಮಿತ್ ಸಾಹು, ಸರಸ್ವತ ಬ್ಯಾಂಕ್ ಮ್ಯಾನೇಜರವರದಾ ಶ್ರೀ ನವೀನ್ ಕುಂದಾಪುರ, ಜಯಂತ್ ಪಾಟೀಲ್ ಇವರುಗಳ ತಾಂತ್ರಿಕ ಮಾಹಿತಿಯ ಆಧಾರದ ಮೇರೆಗೆ

ಠಾಣಾ ಪ್ರಕರಣದಲ್ಲಿ ಕಳವಾಗಿದ್ದ 34 ಗ್ರಾಂ ತೂಕದ ಬಂಗಾರದ 01 ಕೈ ಉಂಗುರ ಮತ್ತು 03 ಬಂಗಾರದ ಬಳೆಗಳು ಮತ್ತು ಒಂದು ಐಫೋನ್ ಮೊಬೈಲ್ ಫೋನ್ ಸೇರಿ 2.12.900/- ರೂಪಾಯಿಗಳ ಮಾಲನ್ನು ಆರೋಪಿತನಾದ ಸಲ್ಮಾನ್ @ಬಚ್ಚೆ @ಹಸೇನ್ ತಂದೆ ಲೇಟ್ ಅಕ್ಮಲ್ 33 ವರ್ಷ ಮುಸ್ಲಿಂ ಜನಾಂಗ ಆಟೋ ಡ್ರೈವರ್ ವೃತ್ತಿ ವಾಸ- ಆಶ್ರಯ ಬಡಾವಣೆ ಕೋಟೆ ಗಂಗೂರು ಗ್ರಾಮ ಶಿವಮೊಗ್ಗ ತಾಲೂಕು ಮತ್ತು ಜಿಲ್ಲೆ ಆಗಿದ್ದು. ಈತನಿಂದ ಠಾಣಾ ಪ್ರಕರಣದಲ್ಲಿ ಕಳವಾಗಿದ್ದ ಮಾಲನ್ನು ವಶಪಡಿಸಿಕೊಂಡಿರುತ್ತದೆ ನಂತರ ಸದರಿ ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ. ದಾವಣಗೆರೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕಳವು ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಮಾಡುವಲ್ಲಿ ಯಶಸ್ವಿಯಾದ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಮಾನ್ಯ ರೈಲ್ವೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಸೌಮ್ಯಲತಾ ಎಸ್ ಕೆ ಐಪಿಎಸ್ ರವರು ಕಾರ್ಯವನ್ನು ಶ್ಲಾಘಿಗಿಸಿರುತ್ತಾರೆ.