ಸುದಿಗೋಷ್ಠಿ – ಮೇಯರ್ ಹುದ್ದೆಗೆ ಮಾದಿಗ ಸಮುದಾಯ ಇಂದ ಕೈತಪ್ಪಲು ಲಂಬಾಣಿ ಸಮುದಾಯವೇ ಕಾರಣ ಎಂದು ಮಾದಿಗ ದಂಡೋರ ಕಾರ್ಯಕರ್ತರು ಆರೋಪ…

ಮಾರ್ಚ್ ೨, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಮೂರನೇ ಅವಧಿಯ ಮೇಯರ್ ಹುದ್ದೆ ಮಾದಿಗ ಸಮುದಾಯದ ಕೈತಪ್ಪಲು ಲಂಬಾಣಿ ಸಮುದಾಯವೇ ಕಾರಣ ಎಂದು ಮಾದಿಗ ದಂಡೋರ ಕಾರ್ಯಕರ್ತರು ಮಾಡಿರುವ ಆರೋಪ ಸತ್ಯಕ್ಕೆ  ದೂರವಾದದ್ದು ಎಂದು ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಜಿ.ಮಂಜಾನಾಯ್ಕ್ ಸ್ಪಷ್ಟ ಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು  ಬಿಜೆಪಿ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ . ಸಂಸದರು  ಹಾಗೂ ನಗರದ ಶಾಸಕರು , ಜಿಲ್ಲಾ ಅಧ್ಯಕ್ಷರು , ಜಿಲ್ಲಾ ಪಧಾದಿಕಾರಿಗಳು ಮಂಡಲ ಪಧಾದಿಕಾರಿಗಳನ್ನೊಳಗೊಂಡು ಎಲ್ಲರ ಅಭಿಪ್ರಾಯ ಕ್ರೂಢಿಕರಿಸಿ , ನಮ್ಮ ಪಕ್ಷದಿಂದ ಗೆದ್ದಂತಹ ಮಹಾನಗರ ಪಾಲಿಕೆ ಸದಸ್ಯರುಗಳನ್ನು ಒಬ್ಬೊಬ್ಬರ ಅಭಿಪ್ರಾಯವನ್ನು ಸಂಗ್ರಹಿಸಿ ನಮ್ಮ ರಾಜ್ಯ ನಾಯಕರು , ಮೇಯರ್‌ ಅಭ್ಯರ್ಥಿಯನ್ನು ಒಮ್ಮತವಾಗಿ ಆಯ್ಕೆ ಮಾಡಲಾಗಿದೆ.ಇದರಲ್ಲಿ ಯಾವುದೇ ನಾಯಕರ ಅಭಿಪ್ರಾಯವಾಗಲಿ , ಶಾಸಕರಾಗಲಿ , ಸಂಸದರಾಗಲಿ ಒಬ್ಬರೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ . ಇದು ನಮ್ಮ ಪಕ್ಷದಲ್ಲಿ ನಡೆಯುವ ಪ್ರಜಾಪ್ರಭುತ್ವ ರೀತಿ . ನಮ್ಮ ಪಕ್ಷದಲ್ಲಿರುವ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಗೊತ್ತಿರುವ ವಿಷಯ. ಪಕ್ಷದಲ್ಲಿರುವ ದಲಿತ ವರ್ಗದ ಎಲ್ಲಾ ಜಾತಿಯ ಕಾರ್ಯಕರ್ತರು ಮುಖಂಡರು ಇದ್ದಾರೆ.

ಈ ಹಿಂದೆ ಮೂಯಕೊಂಡ ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಜನಾಂಗದ ನಮ್ಮ ಮುಖಂಡರಿಗೆ ಟಿಕೆಟ್ ಘೋಷಣೆ ಮಾಡಿದಾಗ ದಲಿತ ವರ್ಗದ ನಾವುಗಳು ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಿದ್ದೇವೆ ಅವರು ಕೂಡ ನಮ್ಮನ್ನು ವಿಶ್ವಾಸಿಗಳ ಹಾಗೆ ನೋಡಿಕೊಂಡಿದ್ದಾರೆ . ಈ ಹಿಂದಿನ ಅವಧಿಯ ಉಪಮೇಯರ್‌ನ್ನು ಇದೇ ಮಾದಿಗ ಜನಾಂಗದ ಮಹಿಳೆಗೆ ಮಾಡಿರುತ್ತೇವೆ . ಈ ರೀತಿ ನಮ್ಮ ಪಕ್ಷದಲ್ಲಿ ಯಾವುದೇ ಜಾತಿ – ಜನಾಂಗ ಕೋಮು ಭಾವನೆಗಳಿಲ್ಲದೇ ಪಕ್ಷದ ಬೆಳವಣಿಗೆಗೆ ಎಲ್ಲರೂ ಒಮ್ಮತವಾಗಿ ಶ್ರಮಿಸುತ್ತಿದ್ದೇವೆ . ನಮ್ಮಲ್ಲಿ ಹಾಗೂ ನಮ್ಮ ನಾಯಕ ಎಂದೂ ಅಸಮಧಾನವಿಲ್ಲ . ನಮ್ಮ ಪಕ್ಷದ ರೀತಿ ನೀತಿ ವಿಚಾರಗಳು ಗೊತ್ತಿಲ್ಲದವರು ನಮ್ಮ ಪಕ್ಷದ ವಿಚಾರಗಳ ಬಗ್ಗೆ ಮಾತನಾಡಿ ಒಮ್ಮೆ ಸಮವಾಗಿರುವ ಪಕ್ಷದ ದಲಿತ ಒಳಪಂಗಡಗಳ ಬಗ್ಗೆ ಹಾಗೂ ಕಾರ್ಯಕರ್ತರಲ್ಲಿ ಗೊಂದಲ  ಮಾಡಬಾರದು.ಆಕಾಂಕ್ಷಿಗಳು ಇಬ್ಬರು ಇದ್ದರು. ಅಭಿಪ್ರಾಯ ಸಂಗ್ರಹಣೆಯಿಂದ ಮೇಯರ್ ಆಯ್ಕೆಯಾಗಿದ್ದಾರೆ ಎಂದರು. ಜಿಲ್ಲೆಯ ಶಾಸಕರು , ಸಂಸದರು  ದಲಿತ ಶೋಷಿತ , ನಿರ್ಗತಿಕರ ಜನಸಾಮನ್ಯರ ಬಗ್ಗೆ ಕಳಕಳಿ ಹೊಂದಿದ್ದಾರೆ . ಆದ್ದರಿಂದ ಅವರು 4-5 ಬಾರಿ ಗೆದ್ದು ಬರುತ್ತಿದ್ದಾರೆ , ಆದ್ದರಿಂದ ಮಾದಿಗ ದಂಡ ಮುಖಂಡರು ಇದನ್ನು ಅರಿತು ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆ ಹಾಗೂ ನಮ್ಮ ಶಾಸಕರು ಸಂಸದರ ಬಗ್ಗೆ ಮಾತನಾಡಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಎನ್.ಹನುಮಂತನಾಯ್ಕ್,ಎಸ್.ಮಂಜುನಾಥ್ ನಾಯ್ಕ್,ಎಲ್.ಆರ್ ಶಿವಪ್ರಕಾಶ್, ರವಿನಾಯ್ಕ್,ಅನಿಲ್ ಕುಮಾರ್,ವಿಠಲ.ಬಿ ,ರಮೇಶ್ ನಾಯ್ಕ್ ಮತ್ತಿತರರಿದ್ದರು.

  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

    ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ…

    Leave a Reply

    Your email address will not be published. Required fields are marked *

    error: Content is protected !!