ಶ್ರೀ ಲಕ್ಷ್ಮಣ ಸಂ. ಸವದಿಯವರು ಮುರಗುಂಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ

ಅಥಣಿ : “ತಾಯಿಯ ಋಣ, ಅನ್ನದ ಋಣ ತೀರಿಸಲಾಗದು ” ” ಅನ್ನವನ್ನು ಕೆಡಿಸುವುದು ಪಾಪದ ಕೆಲಸ ” ಮೊದಲನೆಯದು ಹೆತ್ತು ಹೊತ್ತು ಸಾಕಿದ ತಾಯಿಯ ಋಣ ಎಂದಿಗೂ ನಾವು ತೀರಿಸಲಾಗದು. ಆದ್ದರಿಂದ ಹೆತ್ತವರು ನಮ್ಮ ಕಣ್ಣಿಗೆ ಕಾಣುವ ಜೀವಂತ ದೇವರು. ಅವರನ್ನು ಚೆನ್ನಾಗಿ ನೋಡಿಕೊಂಡು ಸಾಧ್ಯವಾದಷ್ಟು ಅವರ ಋಣ ತೀರಿಸುವಂತಹ ಸೇವೆ ಮಾಡಬೇಕು. ಎರಡನೆಯದು ಅನ್ನದ ಋಣವನ್ನು ತೀರಿಸಲಾಗದ್ದಂಥದ್ದು. “ಅನ್ನವನ್ನು ಕೆಡಿಸುವುದು ಪಾಪದ ಕೆಲಸ” ನಾವು ತಿನ್ನುವ ಪ್ರತಿಯೊಂದು ಅನ್ನದ ಅಗಳಿನ ಮೇಲೆ ನಮ್ಮ ಹೆಸರು, ಋಣಾನುಬಂಧ ಇರುತ್ತದೆ ಎಂಬ ಮಾತಿದೆ. ಅದರಂತೆ ರೈತನು ಶ್ರಮಪಟ್ಟು ದುಡಿದು ಭೂಮಿತಾಯಿಗೆ ಬೆವರು ಹರಿಸಿ ಬೆಳೆ ಬೆಳೆದು ನಮಗೆ ಅನ್ನವನ್ನು ನೀಡುತ್ತಾನೆ. ಆದ್ದರಿಂದ ಯಾರೂ ಕೂಡ ನಮ್ಮ ಜೀವಕ್ಕೆ ಉಸಿರಾಗಿರುವ ಅನ್ನವನ್ನು ಹಾಳು ಮಾಡಬಾರದು. ತಾಟಿನಲ್ಲಿ ಒಂದು ಅಗಳು ಅನ್ನವನ್ನು ಕೂಡ ಬಿಡಬಾರದು. ಊಟವಾದ ಬಳಿಕ ತಾಟಿನಲ್ಲಿ ನೀರು ಹಾಕಿ ಕುಡಿಯಬೇಕು.

ಹೀಗೆ..ಯಾರೋ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಪಾಠ ಮಾಡಿರುವುದಲ್ಲ. ಅಣ್ಣ ಬಸವಣ್ಣನವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು, ದಾನ, ಧರ್ಮ, ಪರೋಪಕಾರದ ಜನ ಸೇವಾ ಕಾರ್ಯಗಳ ಮೂಲಕ ಜನ ನಾಯಕರಾಗಿ ಬೆಳೆದು ಬಂದ ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಯುಳ್ಳ, ನೈತಿಕ ಶಿಕ್ಷಣದ ಪಾಠ ಮಾಡುವ ಮೂಲಕ ವಿದ್ಯಾರ್ಥಿಗಳ ಮನಮುಟ್ಟಿದರು.

ಈ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗಿದ್ದು ತಾಲೂಕಿನ ಮುರಗುಂಡಿ ಗ್ರಾಮದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ. ತಾಲೂಕಿನ ಮುರಗುಂಡಿ ಗ್ರಾಮದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿ. 14-09-2023ರಂದು ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಮುರಗುಂಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ತನ್ನದೇ ಆದ ಹೆಸರಿದೆ. ಅದರಂತೆ ಇಲ್ಲಿನ ಬಡಮಕ್ಕಳಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ವಸತಿ, ಊಟದ ವ್ಯವಸ್ಥೆ ಸೇರಿದಂತೆ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ವಸತಿ ನಿಲಯದಲ್ಲಿ ಸರಿಯಾದ ಸಮಯಕ್ಕೆ ಮೆನ್ಯು ಪ್ರಕಾರ ಉಪಹಾರ, ಊಟ ನೀಡುತ್ತಿದ್ದಾರೆಯೇ? ಇಲ್ಲಿ ಏನಾದರೂ ಸಮಸ್ಯೆಗಳಿವೆಯೇ? ಎನ್ನುವುದನ್ನು ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡಿ ಕೇಳಿ ತಿಳಿದುಕೊಂಡರು. ವಿದ್ಯಾರ್ಥಿಗಳು-ನಮಗೆ ಇಲ್ಲಿನ ಶಿಕ್ಷಕರು, ಅಡುಗೆ ಸಿಬ್ಬಂದಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಯಾವುದೇ ಸಮಸ್ಯೆಗಳಿಲ್ಲ ಸರ್..ಎಂದು ತಿಳಿಸಿದರು. ಇದಕ್ಕೆ ಮಾನ್ಯ ಶಾಸಕರಾದ ಲಕ್ಷ್ಮಣ ಸವದಿಯವರು ಶಾಲಾ ಶಿಕ್ಷಕರನ್ನು, ಅಡುಗೆ ಸಿಬ್ಬಂದಿಯವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದರು.

ಮಕ್ಕಳೊಂದಿಗೆ ಊಟ ಸವಿದರು:
ಮಕ್ಕಳಿಗೆ ಗುಣಮಟ್ಟದ ಊಟವನ್ನು ನೀಡಲಾಗುತ್ತಿದೆಯೇ ಎನ್ನುವುದನ್ನು ತಿಳಿಯಲು ಶಾಸಕರು ಮಧ್ಯಾಹ್ನ ನೂರಾರು ಮಕ್ಕಳೊಂದಿಗೆ ಬೆರೆತು, ಅವರೊಟ್ಟಿಗೆ ಕುಳಿತು ಊಟ ಮಾಡಿ, ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದರು. ಈ ಮೂಲಕ ತಮ್ಮ ಸರಳ ನಡೆಯೊಂದಿಗೆ ಮಕ್ಕಳ ಮೇಲೆ ಅವರಿಗಿರುವ ಕಾಳಜಿ, ಪ್ರೀತಿ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಊಟದ ಕೊಠಡಿಯ ಗೋಡೆಯ ಮೇಲೆ ಬರೆಯಲಾಗಿದ್ದ “ತಾಯಿಯ ಋಣ, ಅನ್ನದ ಋಣ ತೀರಿಸಲಾಗದು” “ಅನ್ನವನ್ನು ಕೆಡಿಸುವುದು ಪಾಪದ ಕೆಲಸ ” ಎಂಬ ಗಾದೆಯ ಮಾತುಗಳ ಬರಹವನ್ನು ಮಕ್ಕಳಿಗೆ ತೋರಿಸಿ, ಅವರಿಗೆ ಅರ್ಥೈಸುವಂತೆ ತಿಳಿಸಿ ಹೇಳಿದರು. ಈ ಮಾತುಗಳನ್ನು ವಿದ್ಯಾರ್ಥಿಗಳು ಚಾಚೂ ತಪ್ಪದೇ ಪಾಲಿಸಬೇಕು ಎಂದು ಹೇಳಿದರು.

ಹೆತ್ತ ತಾಯಿ, ತಂದೆ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಸ್ನೇಹಿತರು, ಯಾವುದೇ ಸಂಬಂಧಗಳಿಗೆ ಬೆಲೆ ಇಲ್ಲದೇ ದಯನೀಯ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಿಗೆ ಪುಸ್ತಕದಲ್ಲಿನ ಶಿಕ್ಷಣದೊಂದಿಗೆ ಶರಣ ಸಂಸ್ಕೃತಿಯ ವಿಚಾರ ಧಾರೆಯ, ಮಾನವೀಯ ಮೌಲ್ಯಯುಳ್ಳ, ನೈತಿಕ ಶಿಕ್ಷಣದ ಬೋಧನೆ ಮಾಡುವುದು ಎಷ್ಟೊಂದು ಅಗತ್ಯವಿದೆ ಎನ್ನುವುದು ಶಾಸಕ ಲಕ್ಷ್ಮಣ ಸಂ. ಸವದಿಯವರ ಮಾತುಗಳಲ್ಲಿ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಮುರಗುಂಡಿ ಗ್ರಾಮದ ಮುಖಂಡರು, ಗುರು-ಹಿರಿಯರು, ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಹೇಶ್ ಮ್ ಶರ್ಮಾ
ಉತ್ತರ ಕರ್ನಾಟಕದ ವಿಶೇಷ ವರದಿಗಾರು

  • Related Posts

    ದೇವಸ್ಥಾನದ  ಕಾಮಗಾರಿಗೆ  25 ಲಕ್ಷ  ಹಣ ಬಿಡುಗಡೆ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್…

    ಬೆಳಗಾವಿ ಜಿಲ್ಲೆಯ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ನೂತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡದ ನಿರ್ಮಾಣದ ಕಾಮಗಾರಿಗೆ ಮೊದಲನೇ ಕಂತಿನಲ್ಲಿ 25 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಕೊಟ್ಟರು.  ಈ  ಹಿನ್ನೆಲೆಯಲ್ಲಿ ಇಂದು ದೇವಸ್ಥಾನ ಕಮಿಟಿ ಹಾಗೂ ಗ್ರಾಮಸ್ಥರ ವತಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್  ಗೌರವ-ಸನ್ಮಾನ…

    ಅಥಣಿಯಲ್ಲಿ ಶ್ರೀ ಲಕ್ಷ್ಮಣ ಸವದಿ ಪಾರ್ಕ್ ಹಾಗೂ ವೃತ್ತದ ಉದ್ಘಾಟನೆ…

    ಈ ವೇಳೆ ಮಾಜಿ ಉಪ ಮುಖ್ಯಮಂತ್ರಿಗಳು ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿಯವರು ನೆರವೇರಿಸಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ,ಪೂ,ಶ್ರೀ ಮರುಳಸಿದ್ಧ ಮಹಾಸ್ವಾಮೀಜಿಗಳು ಶೆಟ್ಟರಮಠ ಅಥಣಿ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಸದಾಶಿವ ಬುಟಾಳಿ,ಶ್ರೀ ಶಿವಾನಂದ ದಿವಾನಮಳ,ಸಂಕೋನಟ್ಟಿ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!