ಜೋಡು ಕೆರೆಗಳ ಸ್ವಚ್ಛತಾ ಕಾರ್ಯವೀಕ್ಷಿಸಿದ ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿ

ಅಥಣಿ : ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಇಂದು ಪಟ್ಟಣದ ಜೋಡು ಕೆರೆಗಳ ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿದರು.
ಪುರಸಭೆ ವತಿಯಿಂದ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಪುರಸಭೆ ಮುಖ್ಯಾಧಿಕಾರಿ ಶ್ರೀ ಅಶೋಕ ಗುಡಿಮನಿಯವರು ಕೆರೆಗಳಿಗೆ ಸಂಬಂಧಿಸಿದ ಸುಧಾರಣೆ ಕಾರ್ಯಗಳ ಕುರಿತು ಶಾಸಕರಿಗೆ ಮಾಹಿತಿ ನೀಡಿದರು.
ಅಥಣಿ ಪಟ್ಟಣದ ಮಧ್ಯಭಾಗದಲ್ಲಿರುವ ಐತಿಹಾಸಿಕ ಜೋಡು ಕೆರೆಗಳ ಅಭಿವೃದ್ಧಿಯನ್ನು ಮಾದರಿಯಾಗುವಂತೆ ಅಭಿವೃದ್ಧಿಪಡಿಸಲು ಡಿ.ಪಿ.ಆರ್. ತಯಾರಿಸಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.

ಸಾರ್ವಜನಿಕ ಬಳಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆರೆಗಳ ಸೌಂದರ್ಯೀಕರಣಗೊಳಿಸುವ ಕುರಿತು ಹಾಗೂ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಮಾನ್ಯ ಶಾಸಕರಾದ ಲಕ್ಷ್ಮಣ ಸಂ. ಸವದಿಯವರು ಮುಖ್ಯಾಧಿಕಾರಿಯವರಿಗೆ ಸಲಹೆ, ಸೂಚನೆ ನೀಡಿದರು. ಪಟ್ಟಣದಲ್ಲಿ ಮುಖ್ಯಾಧಿಕಾರಿ ಶ್ರೀ ಅಶೋಕ ಗುಡಿಮನಿಯವರು ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶ್ರೀ ಸಂತೋಷ ಸಾವಡಕರ, ಶ್ರೀ ದತ್ತಾ ವಾಸ್ಟರ್, ಶ್ರೀ ರಾಜು ಗುಡೋಡಗಿ, ಶ್ರೀ ಆಶೀಫ್ ತಾಂಬೋಳಿ, ಶ್ರೀ ಪ್ರಮೋದ ಬಿಳ್ಳೂರ, ಶ್ರೀ ಉದಯಕುಮಾರ ಸೊಳಸಿ, ಶ್ರೀ ರಿಯಾಜ್ ಸನದಿ, ಶ್ರೀ ಮಲ್ಲಿಕಾರ್ಜುನ ಬುಟಾಳಿ, ಶ್ರೀ ವೆಂಕಟೇಶ ದೇಶಪಾಂಡೆ, ಶ್ರೀ ತಿಪ್ಪಣ್ಣ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಬಹಳ ದಿನಗಳ ಬೇಡಿಕೆ ಮತ್ತು ನಮ್ಮ ಅನಿಸಿಕೆ ಮಾಧ್ಯಮ ಹಾಗೂ ಪತ್ರಿಕಾ ಮುಖಾಂತರ ಮನವಿ

ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….


  • Related Posts

    ದೇವಸ್ಥಾನದ  ಕಾಮಗಾರಿಗೆ  25 ಲಕ್ಷ  ಹಣ ಬಿಡುಗಡೆ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್…

    ಬೆಳಗಾವಿ ಜಿಲ್ಲೆಯ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ನೂತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡದ ನಿರ್ಮಾಣದ ಕಾಮಗಾರಿಗೆ ಮೊದಲನೇ ಕಂತಿನಲ್ಲಿ 25 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಕೊಟ್ಟರು.  ಈ  ಹಿನ್ನೆಲೆಯಲ್ಲಿ ಇಂದು ದೇವಸ್ಥಾನ ಕಮಿಟಿ ಹಾಗೂ ಗ್ರಾಮಸ್ಥರ ವತಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್  ಗೌರವ-ಸನ್ಮಾನ…

    ಅಥಣಿಯಲ್ಲಿ ಶ್ರೀ ಲಕ್ಷ್ಮಣ ಸವದಿ ಪಾರ್ಕ್ ಹಾಗೂ ವೃತ್ತದ ಉದ್ಘಾಟನೆ…

    ಈ ವೇಳೆ ಮಾಜಿ ಉಪ ಮುಖ್ಯಮಂತ್ರಿಗಳು ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿಯವರು ನೆರವೇರಿಸಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ,ಪೂ,ಶ್ರೀ ಮರುಳಸಿದ್ಧ ಮಹಾಸ್ವಾಮೀಜಿಗಳು ಶೆಟ್ಟರಮಠ ಅಥಣಿ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಸದಾಶಿವ ಬುಟಾಳಿ,ಶ್ರೀ ಶಿವಾನಂದ ದಿವಾನಮಳ,ಸಂಕೋನಟ್ಟಿ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!