

ಜಗಳೂರು ತಾಲೂಕು ಕಲ್ಲೇದೇವರಪುರ ಗ್ರಾಮದ ಬಳಿಯಿರುವ ಕಾಡುಗೊಲ್ಲರ ವೀರಗಾರ ಶ್ರೀ ಬೊಮ್ಮಕಾಂಟಲಿಂಗೇಶ್ವರ ಸ್ವಾಮಿಯ ಪೂಜೆ ತುಂಬ ಅದ್ದೂರಿಯಾಗಿ ಜರುಗಿತು
ದಾವಣಗೆರೆ .ಚಿತ್ರದುರ್ಗ ಭಾಗದ ಅನೇಕ ಗ್ರಾಮಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಎತ್ತಿನ ಗಾಡಿ ಕಟ್ಟಿಕೊಂಡು ಕುಟುಂಬ ಸಮೇತ ಆಗಮಿಸಿ ದೇವರಿಗೆ ಅರಕೆಯನ್ನು ತಿರಿಸುವ ಸಂಪ್ರದಾಯ ಅನಾಧಿಕಾಲದಿಂದಲೂ ರೂಡಿಯಲ್ಲಿ ಇದೆ
ಪ್ರತಿ ವರ್ಷದ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಅಣಬೂರು ಗೊಲ್ಲರಹಟ್ಟಿಯಿಂದ ನಡೆ ಮುಡಿ ಕಟ್ಟಿಕೊಂಡು ಅಣಬೂರು ಗ್ರಾಮದ ಪೂಜಾರಿಗಳು ಬೊಮ್ಮಗಟ್ಟೆ ಸಮಾಧಿಗೆ ಒಂದು ಪೂಜೆ ಸಲ್ಲಿಸುತ್ತಾರೆ

ಕಿಕ್ಕರಿದು ಸೇರಿದ ಜನಸಾಗರ:
ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಜನರು ಸಮಾಧಿಗೆ ಆಗಮಿಸಿ ತಮ್ಮ ಇಷ್ಠರ್ಥಾಗಳನ್ನ ಇಡೆರಿಸಲು ಸ್ವಾಮಿಗೆ ಅರಕೆಯನ್ನ ತಿರಿಸಿದರು
ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಮಾಡುವಾಗ ಈ ಸಮಾಧಿಯನ್ನ ಬೆರೆ ಕಡೆ ಸ್ಥಾಳಾಂತರ ಮಾಡಲು ಪ್ರಯತ್ನ ಪಟ್ಟರು ಇದು ಸಾದ್ಯವಾಗಲಿಲ್ಲ ಅಷ್ಟು ಪಾವಾಡ ಪುರುಷ ಎಂದು ಊರಿನ ಯಜಮಾನರಾದ ಎ ಜಿ ಈರಪ್ಪ ತಿಳಿಸಿದರು
ಇತಿಹಾಸ.ಅಣಬೂರು ಗ್ರಾಮದ ಒಬ್ಬ ಯುವಕ ಕುರಿಕಾಯಲು ಎಂದು ಕಲ್ಲೇದೇವರಪುರಕ್ಕೆ ಬಂದಾಗ ಅಕಾಲಿಕ ಮರಣ ಹೊಂದಿದ ಈ ಕಾಟಪ್ಪ ಎಂಬುವ ವ್ಯಕ್ತಿಯನ್ನ ಅಲ್ಲೆ ಸಮಾಧಿ ಮಾಡಲಾಗಿದೆ ಇಂದು ನಮ್ಮ ಸಮುದಾಯದ ಈರಗಾರನನ್ನ ನಾವು ನಮ್ಮ ಆರಾಧೈ ದೈವವಾಗಿ ಪೂಜೆ ಮಾಡುತ್ತಿದ್ದೆವೆ ಈ ಪೂಜೆಯನ್ನ ಮಾಡುವುದರಿಂದ ಸಕಲ ಪ್ರಾಣಿ ಪಕ್ಷಿಗಳಿಗೂ ಒಳಿತಾಗುತ್ತದೆ ಎಂದು ಅಣಬೂರು ಗ್ರಾಮದ ಹಿರಿಯ ಮುಖಂಡ ಹೂವಿನ ಕಾಟಪ್ಪ ತಿಳಿಸಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಗ್ರಾಮದ ಹಿರಿಯರಾದ ಗೌಡ್ರು ಅಜ್ಜಪ್ಪ ಮರಿಗುಡ್ಡಪ್ಪ ಬಸ್ಸು ವಿರೇಶ್ ಮಹಾಲಿಂಗಪ್ಪ ಸೊಸೈಟಿ ಮಂಜುನಾಥ ಲಾಯರ್ ಸಣ್ಣಕಾಟಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ಚಿತ್ತಪ್ಪ .ದೊಡ್ಡ ಈರಪ್ಪ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಿ ಗುಡ್ಡಪ್ಪ ಯುವಕರಾದ ಪ್ರಶಾಂತ್ ಕುಮಾರ್ ಚೇತನ್ ಕಾಟಲಿಂಗಪ್ಪ ಹಾಗೂ ಸಾವಿರಾರು ಭಕ್ತರು ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು