ಮಕ್ಕಳ ಸಹಾಯವಾಣಿ ಕೇಂದ್ರ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರ…

ಧಾರವಾಡ ಸೆ.07: ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಸಹಯೋಗದೊಂದಿಗೆ ಚೈಲ್ಡ ಲೈನ್ ಇಂಡಿಯಾ ಫೌಂಡೇಶನ್ ವತಿಯಿಂದ ನಡೆಸಲಾಗುತ್ತಿದ್ದ ಮಕ್ಕಳ ಸಹಾಯವಾಣಿ-1098 ಅನ್ನು ಮಿಶನ್‍ವಾತ್ಸಲ್ಯ ಮಾರ್ಗಸೂಚಿಯನ್ವಯ ಇಖSS-112 ದೊಂದಿಗೆ ಏಕೀಕರಿಸುವ ಸಂಬಂಧ ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯಿಂದ ಎಸ್.ಓ.ಪಿ.ಯನ್ನು ಸಿದ್ಧಪಡಿಸಲಾಗಿದ್ದು, ಸದರಿ ಎಸ್.ಓ.ಪಿ. ಪ್ರಕಾರ ಚೈಲ್ಡಲೈನ್ ಇಂಡಿಯಾ ಫೌಂಡೇಶನ್ ಟ್ರಸ್ಟ ಇವರಿಂದ ನಡೆಸಲ್ಪಡುತ್ತಿದ್ದ ಮಕ್ಕಳ ಸಹಾಯವಾಣಿ-1098 ಅನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಲಾಗಿರುತ್ತದೆ.

ಮಕ್ಕಳ ಸಹಾಯವಾಣಿ 1098 ಕೇಂದ್ರವನ್ನು ಇಂದು (ಸೆ.07) ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಛೇರಿಯಲ್ಲಿ ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ .ಜಿ. ಅವರು ಇಲ್ಲಿಯವರೆಗೆ ಸ್ವಯಂ ಸೇವಾ ಸಂಸ್ಥೆಯಿಂದ ನಡೆಸಲ್ಪಡುತ್ತಿತ್ತು, ಇನ್ನು ಮುಂದೆ ಮಿಶನ್ ವಾತ್ಸಲ್ಯ ಪ್ರಕಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಪಾಲನೆ ಮತ್ತು ರಕ್ಷಣೆ ಅವಶ್ಯವಿರುವ ಹಾಗೂ ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸಲು ಉಚಿತ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡುವ ಮೂಲಕ ನೆರವು ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಯಾವುದೇ ಸ್ಥಳದಲ್ಲಿ ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳು ಕಂಡು ಬಂದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ ಜಿಲ್ಲೆಯ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲರೂ ಕರ್ತವ್ಯ ನಿರ್ವಹಿಸಲು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ಅವರು ಮಾತನಾಡಿ, ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿರುತ್ತದೆ. ಮಕ್ಕಳ ಸಹಾಯವಾಣಿಯಿಂದ ಹೆಚ್ಚು ಹೆಚ್ಚು ಮಕ್ಕಳನ್ನು ರಕ್ಷಣೆ ಮಾಡಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೊಣ ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ದೀಪಾ ದಂಡವತಿ ಅವರು ಮಾತನಾಡಿ, ಮಕ್ಕಳು ದೊರೆತಾಗ ವಾಸ್ತವದ ಸ್ಥಿತಿಯನ್ನು ಸಹಾಯವಾಣಿ ಸಿಬ್ಬಂದಿಗಳು ಅರ್ಥ ಮಾಡಿಕೊಂಡು 2-3 ಬಾರಿ ಆಪ್ತಸಮಾಲೋಚನೆ ಮಾಡಿ ದಾಖಲಾತಿಗಳನ್ನು ಪರಿಶೀಲಿಸಿ ನಂತರ ಬಾಲಮಂದಿರಗಳಿಗೆ ದಾಖಲು ಮಾಡಬೇಕು ಎಂದು ತಿಳಿಸಿದರು.

ಉಚಿತ ಸೈಕಲ್ ವಿತರಣೆ: ಕೋವಿಡ್-19 ಕಾರಣದಿಂದ ಏಕಪೋಷಕನಾದ ಬಾಲಕನಿಗೆ ಮನೆಯಿಂದ ಶಾಲೆಗೆ ಹೋಗಿಬರಲು ಅನುಕೂಲವಾಗಲು ಬಾಲಕನ ಶೈಕ್ಷಣಿಕ ಹಿತದೃಷ್ಠಿಯಿಂದ ಬೆಂಗಳೂರಿನ ಆಕ್ಸಲರೇಟ ಇಂಡಿಯಾ ಪೌಂಡೆಶನ್ ಟ್ರಸ್ಟ್ ದವರು ಇಂದು (ಸೆ.7) ಉಚಿತವಾಗಿ ಸೈಕಲ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಆಕ್ಸಲರೇಟ ಇಂಡಿಯಾ ಪೌಂಡೆಶನ್ ಟ್ರಸ್ಟ್ ಬೆಂಗಳೂರಿನ ಮೆಂಟರ ಆದ ಪ್ರಕಾಶ ಹಳಿಯಾಳ, ರವೀಂದ್ರ ಜೋಶಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ದೀಪಾ ದಂಡವತಿ, ಶುಭಾ ಪರೀಟ, ರಾಧಾ ಕಲಾಲ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಜು .ಎಚ್.ಎಮ್, ಚಂದ್ರು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಎಲ್ಲ ಸಿಬ್ಬಂದಿಗಳು, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಭಾಗವಹಿಸಿದ್ದರು.

ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….

  • Related Posts

    ರೈತ ಸಂಪರ್ಕ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ದಿಢೀರ್ ಭೇಟಿ;

    ಜಿಲ್ಲೆಯ ಪ್ರತಿ ಆರ್.ಎಸ್ ಕೆ.ದಲ್ಲಿ ರೈತರ ಬೇಡಿಕೆ ವಹಿ ಮತ್ತು ರೈತರ ಕುಂದುಕೊರತೆ ವಹಿ ನಿರ್ವಹಿಸಲು ನಿರ್ದೇಶನ ನೀಡಿದ ಡಿಸಿ. ಧಾರವಾಡ ಜ.31: ಇಂದು ಬೆಳಿಗ್ಗೆ ನಗರದ ಗಾಂಧಿ ಭವನ ಕಾಮಗಾರಿ ವೀಕ್ಷಣೆಗೆ ತರಳಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಗಾಂಧಿ…

    ಹುಬ್ಬಳ್ಳಿಯ ಹೆಸ್ಕಾಂ ಮುಖ್ಯ ಕಚೇರಿಯಲ್ಲಿ ಕಲಘಟಗಿ ಕ್ಷೇತ್ರದ ವಿದ್ಯುತ್‌ ಸಮಸ್ಯೆಗಳ ಬಗ್ಗೆ ಸಭೆ…

    Leave a Reply

    Your email address will not be published. Required fields are marked *

    error: Content is protected !!