ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಭಾವಚಿತ್ರ ಪ್ರಕಟ : ಪತ್ರಿಕೆಯ ವರದಿಗಾರ ಸಂಪಾದಕನಿಗೆ 1ಜೈಲು ಶಿಕ್ಷೆ

(ಕೊಡಗು s 02 ) ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯ ಭಾವಚಿತ್ರವನ್ನು ಕಾನೂನು ಬಾಹಿರವಾಗಿ ಪತ್ರಿಕೆಯಲ್ಲಿ ಪ್ರಕಟಿಸಿ ವರದಿ ಮಾಡಿದ ಕೊಡಗಿನ ಪತ್ರಿಕೆಯೊಂದರ ವರದಿಗಾರ ಮತ್ತು ಸಂಪಾದಕನಿಗೆ ನ್ಯಾಯಾಲಯವು ಒಂದು ವರ್ಷ ಜೈಲು ಮತ್ತು ತಲಾ ರೂ 25,000 ದಂಡ ವಿಧಿಸಿ ಆದೇಶಿಸಿದೆ. 2019ರಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿದ್ದು, ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೂಡ ವಿಧಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯು ಅಪ್ರಾಪ್ತ ವಯಸ್ಕಳೆಂದು ಗೊತ್ತಿದ್ದರೂ ಸಹ ಸಿದ್ದಾಪುರದಲ್ಲಿ ಪತ್ರಿಕಾ ವರದಿಗಾರನಾಗಿರುವ ವಸಂತ್ ಕುಮಾರ್ ʼಕಾವೇರಿ ಟೈಮ್ಸ್ʼ ಎಂಬ ದಿನ ಪತ್ರಿಕೆಯಲ್ಲಿ ಭಾವಚಿತ್ರವನ್ನು ಪ್ರಕಟಿಸಿದ್ದರು.

ಈ ಬಗ್ಗೆ ದೂರು ನೀಡಿದ್ದ ಬಾಲಕಿಯ ಸಹೋದರ, ”ನನ್ನ ತಂಗಿಯ ಭಾವ ಚಿತ್ರಸಹಿತವನ್ನು ಕಾನೂನು ಬಾಹಿರವಾಗಿ ಪತ್ರಿಕೆಯಲ್ಲಿ ಪ್ರಕಟಿಸಿ, ಮಾನಸಿಕವಾಗಿ ತೊಂದರೆ ನೀಡಿದ್ದಾರೆ” ಎಂದು ಆರೋಪಿಸಿ 26.7.2019 ರಂದು ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿ.ಎಸ್.ಐ ಬಿ.ಎಸ್ ಶ್ರೀಧರ್, ಪ್ರಕರಣವನ್ನು ದಾಖಲಿಸಿ ಆರೋಪಿಗಳಾದ ಕಾವೇರಿ ಟೈಮ್ಸ್ ಪತ್ರಿಕೆಯ ವರದಿಗಾರ ವಸಂತ ಕುಮಾರ್ ಮತ್ತು ಪತ್ರಿಕೆಯ ಸಂಪಾದಕ ನಂಜಪ್ಪ ವಿರುದ್ಧ ತನಿಖೆಯನ್ನು ಕೈಗೊಂಡು ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳು ದೋಷಿ ಎಂದು ತೀರ್ಮಾನಿಸಿ ಆರೋಪಿಗಳಿಗೆ ಒಂದು ವರ್ಷದ ಸಜೆ ಮತ್ತು ತಲಾ ರೂ 25,000 ದಂಡ ವಿಧಿಸಿ ಆದೇಶಿಸಿದೆ. ನ್ಯಾಯಾಧೀಶರಾದ ಸುಜಾತ ಅವರು ಈ ಆದೇಶವನ್ನು ಹೊರಡಿಸಿದ್ದು, ತಪ್ಪಿದಲ್ಲಿ 3 ತಿಂಗಳ ಸಜೆ ವಿಧಿಸಿದ್ದು, ಆರೋಪಿಗಳಿಗೆ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಕೂಡ ನೀಡಿದೆ. ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಯಾಸಿನ್ ಅಹಮ್ಮದ್ ಅವರು ವಾದವನ್ನು ಮಂಡಿಸಿದರು. ವರದಿಗಾರ ವಸಂತ್ ಕುಮಾರ್‌ಗೆ ಈ ಹಿಂದೆ ಪತ್ರಿಕೆಯಲ್ಲಿ ಸುಳ್ಳು ವರದಿ ಪ್ರಕಟಿಸಿದ ಪ್ರಕರಣದಲ್ಲೂ  ವಿರಾಜಪೇಟೆಯ ಕಿರಿಯ ಸಿವಿಲ್ ನ್ಯಾಯಾಲಯ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿತ್ತು. ನಕಲಿ ಆರ್.ಎನ್.ಐ ಸಂಖ್ಯೆ ಬಳಸಿ ಪತ್ರಿಕೆ ಮುದ್ರಣ ಮಾಡಿರುವ ಬಗ್ಗೆಯೂ ಪ್ರಕರಣ ದಾಖಲಾಗಿತ್ತು.

  • Related Posts

    ಅಧಿಕಾರಿಗಳ ಗೈರು ಹಾಜರಿ ಹಾಗೂ ಸೋಮವಾರಪೇಟೆ ತಾಲೂಕನ್ನು ಸಂಪೂರ್ಣ ಬರ ಘೋಷಣೆ ಮಾಡುವವರೆಗೂ ಗ್ರಾಮ ಸಭೆಯನ್ನು ಬಹಿಷ್ಕರಿಸಲು ಮಾಡಲು ಗೌಡಳ್ಳಿ ಪಂಚಾಯಿತಿ ಗ್ರಾಮಸ್ಥರಿಂದ ತೀರ್ಮಾನ ತೆಗೆದುಕೊಂಡು ಸಭೆಯಿಂದ ಹೊರ ನಡೆದರು

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮ ಗ್ರಾಮ ಪಂಚಾಯಿತಿಯಲ್ಲಿ ದಿನಾಂಕ 26-9-2022-23 ರಂದು ಗೌಡಳ್ಳಿ ಗ್ರಾಮ ಪಂಚಾಯತಿಯ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನವೀನ ಕುಮಾರ್ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆಯ ಸಭೆ ಆರಂಭವಾಯಿತು ಆರಂಭವಾದ ಅಲ್ಪಸಮಯದದಲ್ಲೇ ಗ್ರಾಮಸ್ಥರುಗಳು ಅಧಿಕಾರಿಗಳು…

    ಶನಿವಾರಸಂತೆಯ ಅಂಗನವಾಡಿ ಕಟ್ಟಡ ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆ ಮಾಡದೆ ಅಧಿಕಾರಿಗಳು..

    ಅಂಗನವಾಡಿ ಕಟ್ಟಡ ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆ ಮಾಡದೆ ಅಧಿಕಾರಿಗಳು ದಿವ್ಯ ನಿರ್ಲಕ್ಷದ ಬಗ್ಗೆ ಮಾನ್ಯ ಶಾಸಕರಿಗೆ ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತಕ್ಕೆ ದೂರು ಕೊಡಲು ನಿರ್ಧರಿಸಲಾಗಿದೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಬಿಎಸ್ಎನ್ಎಲ್…

    Leave a Reply

    Your email address will not be published. Required fields are marked *

    error: Content is protected !!