

ಎಂಪಿ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ವಿಚಾರ.. ರೇಣುಕಾಚಾರ್ಯ ಜೊತೆ ವೇದಿಕೆ ಹಂಚಿಕೊಳ್ಳಲು ಇಷ್ಟ ಪಡದ ಹಾಲಿ ಕೈ ಶಾಸಕ ಶಾಂತನಗೌಡ ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ಗುರುಭವದಲ್ಲಿ
ಘಟನೆ. ಮನೆ ಮನೆಗೆ ಮಡಿವಾಳ ಮಾಚಿದೇವ ಕಾರ್ಯಕ್ರಮದಲ್ಲಿ ಎದ್ದು ಹೋದ ಶಾಸಕ ಶಾಂತನಗೌಡ..ಕಾರ್ಯಕ್ರಮಕ್ಕೆ ಇಬ್ಬರು ನಾಯಕರನ್ನ ಆಹ್ವಾನಿಸಿದ್ದ ಮಡಿವಾಳ ಸಮುದಾಯ, ಈ ವೇಳೆ ರೇಣುಕಾಚಾರ್ಯ ವೇದಿಕೆ ಮೇಲೆ ಬರುತ್ತಿದ್ದಂತೆ ತೆರಳಿದ ಶಾಂತನಗೌಡ ಕಾರ್ಯಕ್ರಮದ ಕುರಿತು ಮಾತನಾಡುತ್ತಿದ್ದ ಶಾಂತನಗೌಡ ತಕ್ಷಣ ಮಾತು ಮುಗಿಸಿ ವೇದಿಕೆಯಿಂದ ತೆರಳಿದರೆ.

ಹೊನ್ನಾಳಿ ಕ್ಷೇತ್ರದಲ್ಲಿ ರೇಣುಕಾಚಾರ್ಯ-ಶಾಂತನಗೌಡ ರಾಜಕೀಯ ಬದ್ದ ವೈರಿಗಳು ಇದೀಗ ರೇಣುಕಾಚಾರ್ಯ ಕಾಂಗ್ರೆಸ್ ಸೇರುತ್ತಾರೆ ಎಂಬ ಚರ್ಚೆ ಜೋರಾದ ಹಿನ್ನಲೆ ರೇಣುಕಾಚಾರ್ಯ ಜೊತೆ ವೇದಿಕೆ ಹಂಚಿಕೊಳ್ಳಲು ಇಷ್ಟಪಡದ ಹಾಲಿ ಶಾಸಕ ಶಾಂತನಗೌಡ ಒಲ್ಲದ ಮನಸ್ಸಿನಿಂದ ಕೈ ಮುಗಿದು ವೇದಿಕೆಯಿಂದ ಅವಸರವಾಗಿ ತೆರಳಿದರೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಿಜಿ ಶಾಂತನಗೌಡ ರೇಣುಕಾಚಾರ್ಯ ಕಾಂಗ್ರೆಸ್ ಸೇರುವ ವಿಚಾರ ನನಗೆ ಗೊತ್ತಿಲ್ಲ ನಮ್ಮ ಮೇಲೆ ಹಿರಿಯರಿದ್ದಾರೆ ಹೈಕಮಾಂಡ್ ಇದೆ, ಅವರು ಏನು ನಿರ್ಧಾರ ತೆಗೆದುಕೊಳ್ತಾರೋ ಅದಕ್ಕೆ ನಾನು ಬದ್ಧ ಪಕ್ಷವೇನು ನಮ್ಮಪ್ಪನದಲ್ಲ, ಅದು ಸಾರ್ವಜನಿಕರದು ಪಕ್ಷಕ್ಕೆ ಹೋಗೋದು ಬರೋದು ಕೂಡ ಉಸಿರಾಟದ ರೀತಿ ಒಂದು ಪ್ರಕ್ರಿಯೆ ನಾವೇನು ಆಪರೇಷನ್ ಮಾಡ್ತಾ ಇಲ್ಲ ನಮ್ಮಲ್ಲಿ ಆಸ್ಪತ್ರೆ ಇಲ್ಲ ಬೆಡ್ ಇಲ್ಲ ಯುನಿಟ್ ಇಲ್ಲ ಎಂದು ದಾವಣಗೆರೆಯ ಹೊನ್ನಾಳಿಯಲ್ಲಿ ಶಾಸಕ ಡಿ.ಜಿ ಶಾಂತನಗೌಡ ಹೇಳಿದರು