
ಹುಬ್ಬಳ್ಳಿ: 2023-24 ನೇ ಸಾಲಿನ ಹೊಸೂರ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿಯಲ್ಲಿ ನಮ್ಮ ಸಿಟಿ ಹೈಸ್ಕೂಲ್ ವಿಜಯನಗರ, ಹುಬ್ಬಳ್ಳಿಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಮುಖ್ಯಾಧಾಪಕರಾದ ಶ್ರೀಮತಿ ವಿ.ಡಿ ಜೋಶಿಯವರ ಸಹಕಾರದೊಂದಿಗೆ ಕುಮಾರಿ ಸವಿತಾ ಕೌತಾಳ ಅವರ ಮಾರ್ಗದರ್ಶನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಜಾನಪದ ನೃತ್ಯದಲ್ಲಿ ನಿಕಿತಾ ಗಂಜಿಗಟ್ಟಿ, ಅಮೂಲ್ಯ ಮುದಕವಿ, ನೇತ್ರಾ ಮಗರ, ನತಾಶಾ ಕೇದಾರ, ಅರ್ಪಿತಾ ಮೂಲಿಮನಿ ಶಿರಿನಬಾನು ನಾಯ್ಕರ ಇವರು ನೃತ್ಯ ಮಾಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಛದ್ಮವೇಷದಲ್ಲಿ ಪವಿತ್ರಾ ಅಂಗಡಿ ಪ್ರಥಮ ಸ್ಥಾನ, ಮಿಮಿಕ್ರಿಯಲ್ಲಿ ಜೀವನ ಹುರಕಡ್ಲಿ ಪ್ರಥಮ ಸ್ಥಾನ, ಕನ್ನಡ ಭಾಷಣದಲ್ಲಿ ವರ್ಷಾ ನವಲಗುಂದ ಪ್ರಥಮ ಸ್ಥಾನ, ಕವನ ವಾಚನದಲ್ಲಿ ವರ್ಷಾ ಕುರಹಟ್ಟಿ ತೃತೀಯ ಸ್ಥಾನ ಪಡೆದುಕೊಂಡು ಸಾಧನೆಗೈದು ಶಾಲೆಗೆ ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಮತಿ ವಿ.ಡಿ ಜೋಶಿ, ಹಿರಿಯ ಶಿಕ್ಷಕರಾದ ಪಿ.ಎಚ್ ಪೂಜಾರ, ಎಸ್,ಎಸ್ ಗೌರಿ, ಸವಿತಾ ಕೌತಾಳ, ರಮೇಶ ಇಟಗೋಣಿ, ಸಂಗೀತಾ ಬಿ, ಸುಮಾ ಪಾಟೀಲ್, ಅಜಯಸಿಂಗ್ ಜಯರಾಮನವರ, ಎಸ್.ಎಮ್ ಗೋಧಿ, ಕವಿತಾ ಆಲೂರ, ಸಂತೋಷ ಭಜಂತ್ರಿ, ಚನ್ನಬಸಮ್ಮ ಜಟ್ಟೆಪ್ಪನವರ, ಕುಮಾರಿ ರಚನಾ, ಶ್ರೀವತ್ಸ ಮುಳಗುಂದ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದರು.









