ವಿಶ್ವದಲ್ಲೇ ಮೊದಲು ಎಥೆನಾಲ್ ಕಾರು ಬಿಡುಗಡೆ ಮಾಡಿದ ಭಾರತ… ಆ ಕಾರಿನ ವಿಶೇಷತೆ ಏನು …?

ದೆಹಲಿ (ಆ 31): ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಮಂಗಳವಾರ ಸಂಪೂರ್ಣವಾಗಿ ಎಥೆನಾಲ್‌ ಇಂಧನದಿಂದಲೇ ಚಲಾಯಿಸಬಹುದಾದ ಟೊಯೊಟಾ ಇನೋವಾ ಕಾರನ್ನು ( Toyota Innova HyCross) ಬಿಡುಗಡೆ ಮಾಡಿದ್ದಾರೆ. electrified flex fuel ಮತ್ತು BS-VI (Stage-II) ಕಾರು ಇದಾಗಿದೆ.

ಸದ್ಯ ಈ ಕಾರು ಪ್ರಪಂಚದಲ್ಲಿಯೇ ಮೊಟ್ಟ ಮೊದಲನೆಯ Flex – fuel ethanol powers car ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದರೆ ಈ ಇನೋವಾ ಕಾರು ಎಥೆನಾಲ್‌ ಅಥವಾ ಪೆಟ್ರೋಲ್‌ ಮೂಲಕವೂ ಕೂಡ ಚಲಿಸಲಿದೆ. ಅಷ್ಟೇ ಅಲ್ಲದೆ ಈ ಕಾರು ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದ್ದು, ವಿದ್ಯುತ್‌ಚಾಲಿತವಾಗಿ ಇವಿ ಮೋಡ್‌ನಲ್ಲಿಯೂ ಚಲಿಸಲಿದೆ.

ಪೆಟ್ರೋಲ್-ಡೀಸೆಲ್‌ಗೆ ಎಥೆನಾಲ್‌ ಅನ್ನು ಹೋಲಿಸಿದರೆ ಇದು ಅತ್ಯಂತ ಕಡಿಮೆ ಖರ್ಚಿನಲ್ಲಿ ಲಭ್ಯವಿದೆ. ಈ ಎಥೆನಾಲ್‌ ಅನ್ನು ಕಬ್ಬು, ಜೋಳ, ಬಾರ್ಲಿಯ ತ್ಯಾಜ್ಯವನ್ನು ಉಪಯೋಗಿಸಿ ತಯಾರಿಸುತ್ತಾರೆ. ಪರಿಸರ ಮಾಲಿನ್ಯವೂ ಇದರಿಂದ ಕಡಿಮೆ ಎನ್ನಲಾಗಿದೆ. ಭವಿಷ್ಯದಲ್ಲಿ ಪಳೆಯುಳಿಕೆ ಇಂಧನಕ್ಕೆ ಎಥೆನಾಲ್‌ ಪರ್ಯಾಯವಾಗಲಿದೆ.

ಸದ್ಯ ಬಿಡುಗಡೆಯಾಗಿರುವ ಈ ಟೊಯೊಟಾ ಇನೋವಾ ಹೈ ಕ್ರಾಸ್‌ ಫ್ಲೆಕ್ಸ್‌ ಫ್ಯುಯೆಲ್‌ ಎಂಪಿವಿ ಕಾರಿನ ಮುಖ್ಯ ವಿಶೇಷತೆ ಏನೆಂದರೆ, ತಾನಾಗಿಯೇ ವಿದ್ಯುತ್‌ ಅನ್ನು ಕಾರು ಸ್ವತಃ ಉತ್ಪಾದಿಸಿಕೊಳ್ಳುತ್ತದೆ. ಎಲೆಕ್ಟ್ರಿಕ್‌ ಕಾರಿನಂತೆಯೂ ಇದನ್ನು ಚಲಾಯಿಸಬಹುದಗಿದೆ.

ಭವಿಷ್ಯದಲ್ಲಿ ಒಂದು ದಿನ ಪೆಟ್ರೋಲ್ ಮತ್ತು ಡೀಸೆಲ್ ಖಾಲಿಯಾಗುತ್ತದೆ. ಹಾಗಾದರೆ ಆಗ ಏನು ಮಾಡಬೇಕು? ಎಥೆನಾಲ್ ಈ ಪ್ರಶ್ನೆಗೆ ಉತ್ತರಗಳಲ್ಲಿ ಒಂದಾಗಿದೆ. ಇದು ರೈತರಿಗೆ ಆದಾಯದ ಮೂಲವೂ ಆಗಲಿದೆ. ವರದಿಗಳ ಪ್ರಕಾರ, 2030 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆಟೊಮೊಬೈಲ್‌ ಇಂಡಸ್ಟ್ರಿಯಾಗಲಿದೆ.

ಮೋದಿ ಸರ್ಕಾರವು ಆಟೋ ಉದ್ಯಮದ ಅಭಿವೃದ್ಧಿಗೆ 25,938 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಪಿಎಲ್‌ಐ ಯೋಜನೆ ಅಂದರೆ ಉತ್ಪಾದನೆ ಆಧರಿತ ಇನ್ಸೆಂಟಿವ್‌ ಅನ್ನು ಸಹ ಜಾರಿಗೆ ತರಲಾಗಿದೆ.

ಪ್ರಸ್ತುತ ಭಾರತವು ವಾರ್ಷಿಕ 16 ಬಿಲಿಯನ್ ಮೌಲ್ಯದ ತೈಲವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಿಂದ ಸರ್ಕಾರದ ಹಣಕಾಸಿನ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ತೈಲ ಆಮದು ನಿಲ್ಲಿಸಬೇಕಾದರೆ ಯಾವುದಾದರು ಪರ್ಯಾಯ ಇಂಧನದ ಅಗತ್ಯವಿದೆ.

ತೈಲ ಆಮದು ಕಡಿಮೆಯಾದಷ್ಟೂ ದೇಶದ ಆರ್ಥಿಕತೆ ಉತ್ತಮವಾಗಿರುತ್ತದೆ. ಆದ್ದರಿಂದ ಎಥೆನಾಲ್ ಚಾಲಿತ ಕಾರುಗಳು ನಮ್ಮೆಲ್ಲರ ಕನಸು ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ ಕಾರ್ಯಕ್ರಮದಲ್ಲಿ ಹೇಳಿದರು.

ಇನ್ನು ಮುಂದೆ ದೇಶದಲ್ಲಿ ಕಾರುಗಳ ಸುರಕ್ಷತಾ ಪರೀಕ್ಷೆಗಳನ್ನು ನಡೆಸಲಾಗುವುದು ಕಳೆದ ವರ್ಷ 2022-23ರಲ್ಲಿ ಭಾರತದಲ್ಲಿ 17,47,376 ವಾಹನಗಳು ಮಾರಾಟವಾಗಿವೆ. ಇದರರ್ಥ ದಿನಕ್ಕೆ ಸರಾಸರಿ 4,787 ಕಾರುಗಳು ಗ್ರಾಹಕರ ಪಾಲಾಗಿದೆ. ಇನ್ನು ಇತರೆ ವಾಹನಗಳದ್ದೇ ಬೇರೆ ಲೆಕ್ಕ .

ಇಷ್ಟು ದೊಡ್ಡ ಮಾರುಕಟ್ಟೆ ಭಾರತದಲ್ಲಿದೆ. ಸದ್ಯದ ಸ್ಥಿತಿ ಗತಿಯಲ್ಲಿ ಮಧ್ಯಮ ವರ್ಗದ ಜನರ ಆದಾಯ ಕೂಡ ಈಗ ಹೆಚ್ಚುತ್ತಿದೆ.ಇತ್ತೀಚೆಗೆ ಕಾರು ಖರೀದಿ ಕೂಡ ಸಾಮಾನ್ಯವಾಗಿದೆ. ಎಥೆನಾಲ್‌ ಇತ್ಯಾದಿ ಪರ್ಯಾಯ ಇಂಧನಗಳ ಪ್ರಯೋಗಕ್ಕೂ ಇಂಥ ಸಂದರ್ಭದಲ್ಲಿ ಭಾರತ ಮುಕ್ತವಾಗಿರುವುದು ಗಮನಾರ್ಹ.

ಭಾರತದಲ್ಲಿ 1980-90ರಲ್ಲಿ ಫಿಯೆಟ್‌ ಪದ್ಮಿನಿ, ಮಾರುತಿ ಜೆನ್‌, ಕಾಂಟೆಸ್ಸಾ, ಮಾರುತಿ 1000, ಮಾರುತಿ ಒಮಿನಿ ಇತ್ಯಾದಿ ಕೆಲ ಮಾದರಿಗಳ ಕಾರುಗಳು ಮಾತ್ರ ಲಭ್ಯವಿದ್ದವು. ಆದರೆ ಈಗ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌, ಮಾರುತಿ, ಹುಂಡೈ, ಹೋಂಡಾ, ಮಹೀಂದ್ರಾ, ಕಿಯಾ, ರೆನಾಲ್ಟ್‌ ಮುಂತಾದ ಕಾರುಗಳು ಸೇರಿ ಒಟ್ಟು 35ಕ್ಕೂ ಹೆಚ್ಚು ದೇಶ-ವಿದೇಶಿ ಬ್ರಾಂಡ್‌ಗಳ ಕಾರುಗಳು ಭಾರತದಲ್ಲಿ ಲಭ್ಯವಿದೆ.

  • Related Posts

    ಹಿಂದಿ ಎಂದಿಗೂ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸಿಲ್ಲ, ಮುಂದೆಯೂ ಸ್ಪರ್ಧಿಸುವುದಿಲ್ಲ: ಅಮಿತ್ ಶಾ

    ಹಿಂದಿ ದಿವಸ್‌ ನಿಮಿತ್ತ, ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಭಾಷಾ ವೈವಿಧ್ಯತೆಗೆ ಹೆಸರುವಾಸಿಯಾದ ರಾಷ್ಟ್ರದಲ್ಲಿ ಹಿಂದಿಯ ಏಕೀಕರಣದ ಪಾತ್ರವನ್ನು ಎತ್ತಿ ತೋರಿಸಿದರು. ನಾಗರಿಕರಿಗೆ ನೀಡಿದ ಸಂದೇಶದಲ್ಲಿ, ಹಿಂದಿ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸುವುದಿಲ್ಲ ಮತ್ತು…

    ಭಾರತದ ಹೆಸರು ಬದಲಾವಣೆಯನ್ನು ವಿರೋಧಿಸುವವರು ದೇಶ ತೊರೆಯಬೇಕು ,,,”ಬಿಜೆಪಿ ನಾಯಕ ದಿಲೀಪ್ ಘೋಷ್”

    ಇಂಡಿಯಾ (India) ಎಂಬ ಹೆಸರನ್ನು ಭಾರತ (Bharatha) ಎಂದು ಮರುನಾಮಕರಣ ಮಾಡಲಾಗುವುದು. ಇದನ್ನು ಯಾರೆಲ್ಲ ವಿರೋಧಿಸುತ್ತಾರೋ ಅಥವಾ ಯಾರಿಗೆಲ್ಲ ಈ ಹೆಸರು ಇಷ್ಟ ಇಲ್ಲವೋ ಅವರೆಲ್ಲಾ ದೇಶ ತೊರೆಯಬಹುದು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ದಿಲೀಪ್ ಘೋಷ್ (Dilip Ghosh) ತಿಳಿಸಿದ್ದಾರೆ. ಅವರು ತಮ್ಮ ಲೋಕಸಭಾ ಕ್ಷೇತ್ರದಲ್ಲಿರುವ ಖಾರಗ್ಪುರ…

    Leave a Reply

    Your email address will not be published. Required fields are marked *

    error: Content is protected !!