

ದಾವಣಗೆರೆ (ಆ 29) : ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ ಸಂಸದರು ಮಾಡಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ವಿರುದ್ದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಬೆಂಕಿಗಾರಿದರು. ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಾಡಬಾರದ್ದು ಮಾಡಿ ಈಗ ಶಾಸಕರ ಮೇಲೆ ಹಾಕ್ತಾರೆ. ಸ್ಮಾರ್ಟ್ ಸಿಟಿಗೂ ತಮಗೂ ಸಂಬಂಧ ಇಲ್ಲ ಅಂತ ಹೇಳ್ತಾನೆ. ಹಾಗಾದ್ರೆ ಸ್ಮಾರ್ಟ್ ಸಿಟಿ ಯೋಜನೆಯ ಹಣ ಅವನ ಕಾಲೇಜ್ ಗೆ ಹಾಕಿಕೊಂಡ್ನಾ ಎಂದು ಸಂಸದ ಜಿಎಂ ಸಿದ್ದೇಶ್ವರ್ ವಿರುದ್ದ ಏಕವಚನದಲ್ಲೇ ಮಾತನಾಡಿದರು.
ಸ್ಮಾರ್ಟ್ ಸಿಟಿ ಹಣ ಎಲ್ಲಾ ತಿಂದು ತೇಗಿ ಈಗ ಶಾಸಕರ ಮೇಲೆ ಹಾಕ್ತಾರೆ. ಸಿದ್ದೇಶ್ವರ್, ಅವರದ್ದೇ ಪಕ್ಷದ ಜಿಲ್ಲಾ ಮಂತ್ರಿ ಆಗಿದ್ದವರು ಸೇರಿ ತಿಂದು ತೇಗಿದ್ದಾರೆ. ಈಗ ನನಗೆ ಸಂಬಂಧಪಡೋದಿಲ್ಲ, ಕೇಂದ್ರದ್ದು ಅಷ್ಟೇ ಅಂತ ಹೇಳ್ತಾರೆ ಎಂದು ಕಿಡಿಕಾರಿದರು.
ಈಗಾಗಲೇ ರವೀಂದ್ರನಾಥ್, ಮಾಡಾಳ್, ರೇಣುಕಾಚಾರ್ಯ ನ ತಗ್ದಿದಾರೆ. ಮತ್ತೆ ಚುನಾವಣೆಯಾಗುವುದರೋಳಗೆ ಇನ್ಯಾರ್ನಾ ತಗೀತಾರೋ ನೋಡೋಣಾ. ಸ್ಮಾರ್ಟ್ ಸಿಟಿ ತಂದಿದ್ದು ನಾವು ಕಾಂಗ್ರೆಸ್ ನವರು. ಆಗ 9 ನೇ ಸ್ಥಾನದಲ್ಲಿತ್ತು, ಈಗ ಎಷ್ಟನೇ ಸ್ಥಾನದಲ್ಲಿದೆ ಅಂತ ಹೇಳಲಿ. ಈಗ ಮಾತನಾಡ್ತಾರಲ್ಲ ನಾಚಿಕೆಯಾಗಬೇಕು ಅವ್ರಿಗೆ. ರವೀಂದ್ರನಾಥ್ ತೂಕ ಜಿಎಂ ಸಿದ್ದೇಶ್ವರ್ ಗೆ ಬರೋದಿಲ್ಲ. ಜಿಎಂ ಸಿದ್ದೇಶ್ವರ್ ದುಡ್ಡು ಮಾಡಲು ದಾವಣಗೆರೆ ಬಂದಿದ್ದಾರೆ ಎಂದರು.

ನಾಳೆ ರಾಹುಲ್ ಗಾಂಧಿಯವರು, ಖರ್ಗೆಯವರು ಸಿದ್ದರಾಮಯ್ಯ ಡಿಕೆಶಿ ಯವರು ಗೃಹಲಕ್ಷ್ಮೀ ಯೋಜನೆ ಚಾಲನೆ ನೀಡ್ತಾರೆ. ನಾಳೆ ಕೂಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ಚಾಲನೆ ನೀಡುತ್ತೇವೆ. ಬಡವರಿಗೆ ಈ ಯೋಜನೆ ತಲುಪಬೇಕಿದೆ ಎಂದರು.
ಯತ್ನಾಳ್ ನ ಇವತ್ತು ನೋಡಿದ್ರಾ, ಅವ ಹಂಗೆ ಮಾತಾಡ್ತಾ ಇರ್ತಾರೆ. ಅವಧಿ ಮುನ್ನ ಲೋಕಾಸಭಾ ಚುನಾವಣೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಯತ್ನಾಳ್ ಬಗ್ಗೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ವ್ಯಂಗ್ಯವಾಡಿದರು.