ನಂದಿತಾವರೆ ಗ್ರಾಮದಲ್ಲಿ ಮನೆ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿದ ದಾವಣಗೆರೆ ಪೋಲಿಸ್,,,

 

ದಾವಣಗೆರೆ (ಆ23), ದಿನಾಂಕ:೧೧-೦೮-೨೦೨೩ ರಂದು ರಾತ್ರಿ ೧೦-೦೦ ಗಂಟೆಯಿಂದ ದಿನಾಂಕ:-೧೨-೦೮-೨೦೨೩ ರಂದು ಬೆಳಿಗ್ಗೆ ೦೬-೦೦ ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಹರಿಹರ ತಾಲ್ಲೂಕ್ ನಂದಿತಾವರೆ ಗ್ರಾಮದಲ್ಲಿ ಬೀಗ ಹಾಕಿದ ನಾಗಮ್ಮ ರವರ ವಾಸದ ಮನೆಯ ಬಾಗಿಲ ಬೀಗವನ್ನು ಮುರಿದು ಒಳ ಪ್ರವೇಶ ಮಾಡಿ, ಮನೆಯಲ್ಲಿದ್ದ ೧೦,೦೦೦/- ರೂ ನಗದು ಹಣ ಹಾಗೂ ೨,೧೬,೦೦೦/-ರೂ ಬೆಲೆಯ ಬೆಳ್ಳಿ-ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕ್ರಮ ಜರುಗಿಸಿ ಅಂತಾ ನೀಡಿದ ದೂರಿನ ಮೇರೆಗೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:೨೦೧/೨೦೨೩, ಕಲಂ: ೪೫೭.೩೮೦ ಐಪಿಸಿ ರಿತ್ಯಾ ಕೇಸು ದಾಖಲಾಗಿರುತ್ತೆ.

ಸದರಿ ಪ್ರಕರಣದ ತನಿಖೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್.ಬಿ.ಬಸರಗಿ ರವರ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಬಸವರಾಜ ಬಿ.ಎಸ್ ರವರ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕರವರಾದ ಶ್ರೀ ಸುರೇಶ ಸಗರಿ ರವರು ಹಾಗೂ ಸಿಬ್ಬಂದಿಗಳನ್ನೋಳಗೊAಡ ಪೊಲೀಸ್ ತಂಡ ಮೇಲ್ಕಂಡ ಪ್ರಕರಣದ ಆರೋಪಿತರರಾದ ೧) ಮಹಮ್ಮದ ಕರೀಂ @ ಕರೀಂ, ೨೨ ವರ್ಷ, ಹಣ್ಣಿನ ವ್ಯಾಪಾರ, ಶಿವಮೊಗ್ಗ ೨) ಮಹಮ್ಮದ್ ಶಬಾಜ್ @ ಶಾಬಾ, ೨೧ ವರ್ಷ, ಹಣ್ಣಿನ ವ್ಯಾಪಾರ, ಶಿವಮೊಗ್ಗ ೩) ತಬ್ರೇಜ್ ಅಹಮ್ಮದ್, ೩೬ ವರ್ಷ, ಹಣ್ಣಿನ ವ್ಯಾಪಾರ, ಶಿವಮೊಗ್ಗ ಇವರುಗಳನ್ನು ದಸ್ತಗಿರಿ ಮಾಡಿದ್ದು, ಆರೋಪಿತರಿಂದ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ೩೮ ಗ್ರಾಂ ತೂಕದ ಸುಮಾರು ೧.೯೦,೦೦೦ ಬೆಲೆ ಬಾಳುವ ಬಂಗಾರದ ಆಭರಣಗಳು, ೩೦೦೦/-ರೂ ಬೆಲೆ ಬಾಳುವ ಬೆಳ್ಳಿಯ ಉಡುದಾರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ೨ ಆಟೋಗಳು, ೨ ಮೊಬೈಲ್ ಗಳು ಹಾಗೂ ಕಬ್ಬಿಣದ ರಾಡನ್ನು ಅಮಾನತ್ತು ಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.

ಸದರಿ ಕಳ್ಳತನ ಪ್ರಕರಣದ ಆರೋಪಿತರನ್ನು ಬಂಧಿಸಿ, ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಶ್ರೀ ಸುರೇಶ ಸಗರಿ ಸಿಪಿಐ, ಮಲೇಬೆನ್ನೂರು ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ಪ್ರಭು, ಡಿ ಕೆಳಗಿನ ಮನಿ, ಜಿಲ್ಲಾ ಪೊಲೀಸ್ ಕಛೇರಿಯ ಶ್ರೀ ಮಂಜುನಾಥ,ಎಸ್ ಕಲ್ಲೇದೇವರ ಹಾಗೂ ಸಿಬ್ಬಂದಿಯವರಾದ ಪೈರೋಜ್ ಖಾನ್, ಮಂಜಪ್ಪ, ಶಿವಕುಮಾರ, ವೆಂಕಟರಮಣ, ವಿರೇಶಪ್ಪ, ಕಡೆಮನಿ ನಾಗಪ್ಪ, ಸಂತೋಷ ಕುಮಾರ ರವರುಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ.ಅರುಣ್ ಕೆ ಐಪಿಎಸ್, ದಾವಣಗೆರೆ ಜಿಲ್ಲೆೆ ರವರ ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ..

  • Related Posts

    ದಾವಣಗೆರೆಯ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್

    ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ನಗರಕ್ಕೆ ವಿವಿಧ ಕಾರ್ಯಕ್ರಮಗಳ ಬೇಟಿ ನೀಡಿದ ಸಂದರ್ಭದಲ್ಲಿ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮುಚ್ಛಯದ ಆವರಣದಲ್ಲಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದರು. ನಂತರ…

    “ವಿಷ ಕೊಡಿ ಇಲ್ಲವೇ ಯೂರಿಯಾ ಕೊಡಿ” ದಾವಣಗೆರೆಯಲ್ಲಿ ಬಿಜೆಪಿ ಇಂದ ಪ್ರತಿಭಟನೆ

    ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು. ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!