ಇಎಸ್ ಐ ವೇತನ ಮಿತಿಯನ್ನು 21,000 ದಿಂದ 30,000 ಸಾವಿರಕ್ಕೆ ಏರಿಸಲು ಸಂಸತ್ ಕಲಾಪದ ಶೂನ್ಯವೇಳೆಯಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಾಯಡಾ।। ಪ್ರಭಾ ಮಲ್ಲಿಕಾರ್ಜುನ್

೩೦ ಜೂಲೈ ೨೦೨೫, ಇಎಸ್ ಐ ವೇತನಮಿತಿಯನ್ನು 21,000 ದಿಂದ 30,000 ಸಾವಿರಕ್ಕೆ ಏರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಸತ್ ಕಲಾಪದ ಶೂನ್ಯವೇಳೆಯಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ನೌಕರರ ವಿಮಾ (ಇಎಸ್‌ಐ) ಯೋಜನೆಯ ಹಳೆಯದಾದ ವೇತನಮಿತಿಯನ್ನು ತಕ್ಷಣ ಪರಿಷ್ಕರಿಸಬೇಕಿದೆ. ಪ್ರಸ್ತುತ ತಿಂಗಳಿಗೆ ₹21,000 ಕ್ಕಿಂತ ಹೆಚ್ಚು (ವಿಕಲಚೇತನರಿಗೆ ₹25,000) ವೇತನ ಹೊಂದಿರುವ ಕಾರ್ಮಿಕರು ಇಎಸ್‌ಐ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. 2017ರಿಂದ ಈ ಮಿತಿಯನ್ನು ಪರಿಷ್ಕರಿಸಲಾಗದ ಪರಿಣಾಮ, ಲಕ್ಷಾಂತರ ದುರ್ಬಲ ಕಾರ್ಮಿಕರು ಸಾಮಾಜಿಕ ಭದ್ರತೆಯಿಂದವಂಚಿತರಾಗುತ್ತಿದ್ದಾರೆ ಎಂದರು.

ಕರ್ನಾಟಕ ಸೇರಿದಂತೆ ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳು ವೈಜ್ಞಾನಿಕ ಕನಿಷ್ಠ ವೇತನ ಪರಿಷ್ಕರಣೆ ನಡೆಸುತ್ತಿದ್ದು, ಕರ್ನಾಟಕದ ಕರಡು ಅಧಿಸೂಚನೆಯ ಪ್ರಕಾರ ಮಾಸಿಕ ವೇತನ ₹19,000 ರಿಂದ ₹34,000 ಕ್ಕೆ ಏರಿಕೆಯ ನಿರೀಕ್ಷೆ ಇದೆ ಆದರೆ ಬೆಂಗಳೂರಿನಂತಹ ನಗರಗಳಲ್ಲಿ ₹31,000 ಸಂಪಾದಿಸುವ ಕಾರ್ಮಿಕರು ಇನ್ನೂ ಆರ್ಥಿಕವಾಗಿ ದುರ್ಬಲರಾಗಿದ್ದರೂ, ಇಎಸ್‌ಐ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ
ಆದ್ದರಿಂದ ಕೇಂದ್ರ ಸರ್ಕಾರ ಇಎಸ್‌ಐ ವೇತನಮಿತಿಯನ್ನು ₹21,000 ರಿಂದ ₹30,000 ಕ್ಕೆ ತಕ್ಷಣ ಏರಿಕೆ ಮಾಡಬೇಕು. ಇಎಸ್‌ಐ ಕಾಯ್ದೆ 1948ಕ್ಕೆ ತಿದ್ದುಪಡಿ ಮಾಡಿ, ದರ ಏರಿಕೆ ಅಥವಾ ವೇತನ ಸೂಚ್ಯಂಕ ಆಧಾರಿತ ನಿಯಮಿತ ಪರಿಷ್ಕರಣೆ ವ್ಯವಸ್ಥೆ ಜಾರಿ ಮಾಡಬೇಕು.

51ನೇ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಬೇಕು‌ ಹಾಗೂ ರಾಜ್ಯಗಳು ಮತ್ತು ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಫಲಾನುಭವಿಗಳ ಹಿತಾಸಕ್ತಿ ಕಾಪಾಡಬೇಕು. ಕೇಂದ್ರ ಸರ್ಕಾರವು ತ್ವರಿತ ಕ್ರಮಕೈಗೊಂಡು, ವೇತನ ಏರಿಕೆ ಹಾಗೂ ಹಣದುಬ್ಬರದ ಬೆಳವಣಿಗೆ ಹಿನ್ನೆಲೆಯಲ್ಲಿ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಕೇಂದ್ರಕ್ಕೆ ಮನವಿ ಮಾಡಿಕೊಂಡರು.

  • Related Posts

    ನವದೆಹಲಿಯಲ್ಲಿ ಕೇಂದ್ರ ರಸಗೊಬ್ಬರ ಸಚಿವರಿಗೆ ತಕ್ಷಣ ಯೂರಿಯಾ ಪೂರೈಕೆಗೆ ಮನವಿ ಪತ್ರ – ಸಚಿವರಾದ ಡಾ।। ಪ್ರಭಾ ಮಲ್ಲಿಕಾರ್ಜುನ್

    31 ಜೂಲೈ 2025,ನವದೆಹಲಿಯಲ್ಲಿ ಕೇಂದ್ರ ರಸಗೊಬ್ಬರ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರಿಗೆ ದಾವಣಗೆರೆ ಜಿಲ್ಲೆಗೆ ತಕ್ಷಣ ಯೂರಿಯಾ ಪೂರೈಕೆ ಮಾಡಬೇಕೆಂದು ಸಚಿವರಾದ ಡಾ।। ಪ್ರಭಾ ಮಲ್ಲಿಕಾರ್ಜುನ್ ಮನವಿ ಪತ್ರ ಸಲ್ಲಿಸಿದರು. ಪ್ರಸ್ತುತ ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಮಳೆ ಸಮೃದ್ಧವಾಗಿದ್ದು, ಬಿತ್ತನೆ…

    ಕೇಂದ್ರದಿಂದ ಕರ್ನಾಟಕ್ಕೆ 8.73 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ನೀಡಿದರೂ, ಸಿಎಂ ಹೇಳಿರುವುದು ಹಸಿ ಸುಳ್ಳ – ಬಿಜೆಪಿ ಆರೋಪ.

    ಕೇಂದ್ರ ಸರ್ಕಾರ ಕರ್ನಾಟಕ್ಕೆ 8.73 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ನೀಡಿದರೂ, ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಯೂರಿಯಾವನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿರುವುದು ಹಸಿ ಸುಳ್ಳು!! ಬಿಜೆಪಿ ಆರೋಪ ಮಾಡಿದ್ದೆ ಕಾಳಸಂತೆಯಲ್ಲಿ ಯೂರಿಯಾ ಅಕ್ರಮವಾಗಿ ಮಾರಾಟವಾಗುತ್ತಿದೆ ಎಂದು…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!