
ಚಿಕ್ಕಬಳ್ಳಾಪುರ ಜಿಲ್ಲೆ:
ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ರೆಡ್ ಕ್ರಾಸ್ ಚಿಕ್ಕಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ನೇತ್ರದಾನ ಮತ್ತು ಅಂಗಾಂಗಗಳ ಶಿಬಿರವನ್ನು ಪುರಸಭೆ ಕಾರ್ಯಾಲಯ ಪಕ್ಕ, ಬಾಗೇಪಲ್ಲಿ ಟೌನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ನೇತ್ರದಾನ ಶಿಬಿರ ಅಂಗಾಂಗ ದಾನ ಶಿಬಿರ ಈ ಕಾರ್ಯಕ್ರಮದಲ್ಲಿ
38 ಜನ ರಕ್ತದಾನ ಹಾಗೂ10 ಜನ ದೇಹದಾನ
32 ಜನ ನೇತ್ರದಾನ ಮಾಡಿದ್ದಾರೆ.
ಖ್ಯಾತ ಚಲನಚಿತ್ರ ಖಳ ನಾಯಕ ನಟ ಶೋಭರಾಜ್ ಅವರು ಮಾತನಾಡಿ,ಅಪ್ಪು ಅವರು ಕಲಿಯುಗದ ಕರ್ಣ,ದಾನದಲ್ಲಿ ಧರ್ಮರಾಯ,ಅಪ್ಪು ನಮ್ಮೊಂದಿಗೆ ಸದಾ ಇರುತ್ತಾರೆ ಅಪ್ಪು ಅವರನ್ನು ನಾವು ಬಿಟ್ಟಿದ್ದೇವೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಸಮಾಜಮುಖಿ ಕಾರ್ಯಗಳನ್ನು ನಾವು ಅಲವದಿಸಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಆಶಾ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ,ಉಪನ್ಯಾಸಕಿ,ಸಮಾಜ ಸೇವಕಿ,ಸಾಮಾಜಿಕ ಚಿಂತಕಿ,ಪರಿಸರ ಸಿಪಾಯಿ,ಪರಿಸರಪ್ರೇಮಿ,ಬುದ್ಧ ಬಸವ ಅಂಬೇಡ್ಕರ್ ಅವರ ಅನುಯಾಯಿ,ಸಮಾಜ ಸೇವಾ ರತ್ನ ಪ್ರಶಸ್ತಿ ಪುರಸ್ಕೃತೆ, ಪತ್ರಕರ್ತೆ,ಅತ್ಯುತ್ತಮ ಕರೋನ ವಾರಿಯರ್ ಆಶಾ ಮಂಚನಬಲೆ ಅವರು ನೇತ್ರದಾನ ಮಹಾ ದಾನ ಎಂದು ,ತಮ್ಮ ಎರಡು ಕಣ್ಣುಗಳನ್ನು ಹಾಗೂ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಯುವಕರಿಗೆ,ಸಮಾಜ ಸೇವಕರಿಗೆ,ಮತ್ತಷ್ಟು ಸೇವೆಯನ್ನು ಸಲ್ಲಿಸಿ ತಮ್ಮ ಜೀವನವನ್ನೇ ಸಮಾಜಕ್ಕಾಗಿ ಮುಡಿಪಾಗಿಟ್ಟು ಮಾದರಿಯಾಗಿದ್ದಾರೆ .
ಇದೇ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯ ಜಿಲ್ಲಾಧ್ಯಕ್ಷರಾದ ಜಿ. ಚಂದ್ರಶೇಖರ್ ಮಾತನಾಡಿ,ಯುವಕರು ಸಮಾಜಕ್ಕೆ ರಕ್ತದಾನ,ನೇತ್ರದಾನ,ಅಂಗಾಂಗ ದಾನ ಮಾಡುವುದರಿಂದ ಈ ಮಾನವ ಜನುಮ ಸಾರ್ಥಕ ವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಪ್ಪ,ಸಮಾಜ ಸೇವಕಿ ಗೀತಾ ರೆಡ್ಡಿ , ಬೆಂಗಳೂರು, ಎ.ಜಿ.ಸುಧಾಕರ್. ಹಿರಿಯ ವಕೀಲರು ಮತ್ತು ರೆಡ್ ಕ್ರಾಸ್ ಸಂಸ್ಥೆ
ಎಸ್ ಆರ್ ವಿಜಯ್ ಕುಮಾರ್ ಶೆಟ್ಟಿ,
ಜಿಲ್ಲಾ ಉಸ್ತುವಾರಿ.ನಮ್ಮ ಕರ್ನಾಟಕ ರಕ್ಷಣಾ ವೇದಿಕೆ,ಉದಯ್ ಅಪ್ಪು ,ತಾಲ್ಲೂಕು ಅಧ್ಯಕ್ಷರು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸೋಹಿಲ್ ಅಹಮದ್, ಅಲ್ಪಸಂಖ್ಯಾತರ ತಾಲ್ಲೂಕು ಅಧ್ಯಕ್ಷ ಶ್ರೀನಾಥ್.ಚಂದ್ರು. ಎಲ್
ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ವಸಂತ |ತಾ| ಸಂಚಾಲಕ,ನಾಗೇಂದ್ರ ಮತ್ತಿತರರು ಹಾಜರಿದ್ದರು.








